ಮಕ್ಕಳ ಮೇಲೆ ನಿಗಾವಹಿಸಿ

7 nrp 4 hostel
ಎನ್.ಆರ್.ಪುರ ತಾಲೂಕು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಮಾಳೂರುದಿಣ್ಣೆ ರಮೇಶ್,ಕೆ.ವಿ.ಸಾಜು, ವಸಂತಕೋಟ್ಯಾನ್, ಕನ್ನಿಗೆರೆ ಅಭಿ ಭೇಟಿ ನೀಡಿ ಶಿಕ್ಷಕರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.
Published on

ಎನ್.ಆರ್.ಪುರ: ವಸತಿನಿಲಯದಲ್ಲಿರುವ ಹೆಣ್ಣು ಮಕ್ಕಳ ಚಲನವಲನಗಳ ಬಗ್ಗೆ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನಿಗಾ ವಹಿಸಬೇಕೆಂದು ಕೆಡಿಪಿ ಸಭೆ ನಾಮನಿರ್ದೇಶಿತ ಸದಸ್ಯ ಮಾಳೂರುದಿಣ್ಣೆ ರಮೇಶ್ ತಿಳಿಸಿದರು.

ಸೋಮವಾರ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಮಾತನಾಡಿ, ಹೆಣ್ಣು ಮಕ್ಕಳಿರುವ ವಸತಿ ಶಾಲೆಗಳಲ್ಲಿ ಸ್ವಚ್ಛತೆ ಜತೆಗೆ ರಕ್ಷಣೆಯೂ ಬಹಳ ಮುಖ್ಯ. ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿ ಸಿಬ್ಬಂದಿಯೂ ಕೂಡ ಮಕ್ಕಳ ಮೇಲೆ ನಿಗಾವಹಿಸಬೇಕು. ಯಾವುದೇ ರೀತಿಯಲ್ಲೂ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳ ಚಲನವಲನಗಳ ಬಗ್ಗೆ ಏನಾದರೂ ಅನುಮಾನಗಳು ಕಂಡು ಬಂದಲ್ಲಿ ಕೂಡಲೇ ಪಾಲಕರಿಗೆ ಕರೆಸಿ ವಿಚಾರ ತಿಳಿಸಿ, ಮಕ್ಕಳಿಗೆ ತಿಳಿ ಹೇಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು. ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂದು ಗಮನಿಸುತ್ತಿರಬೇಕು. ಸಿಸಿ ಕ್ಯಾಮರಾಗಳ ನಿರ್ವಹಣೆ ಅವಶ್ಯಕ ಎಂದು ಶಿಕ್ಷಕ ನಾಗರಾಜ್ ಹಾಗೂ ವಸತಿ ನಿಲಯದ ಸಿಬ್ಬಂದಿಗೆ ಸೂಚಿಸಿದರು. ಅಡುಗೆ ಕೋಣೆ, ಶೌಚಗೃಹ, ಮಕ್ಕಳ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಗುಣಮಟ್ಟದ ಶುಚಿಯಾದ ಊಟ ನೀಡಬೇಕೆಂದು ತಿಳಿಸಿದರು. ಮಕ್ಕಳಿಗೆ ಮಾಡಿದ ಮಧ್ಯಾಹ್ನದ ಊಟ ಪರಿಶೀಲಿಸಿ, ಮಕ್ಕಳೊಂದಿಗೆ ಭೋಜನ ಮಾಡಿದರು. ಕೆಡಿಪಿ ಸಭೆ ಸದಸ್ಯ ಕೆ.ವಿ.ಸಾಜು, ಗುಬ್ಬಿಗಾ ಗ್ರಾಪಂ ಸದಸ್ಯ ವಸಂತಕೋಟ್ಯಾನ್, ಕನ್ನಿಗೆರೆ ಅಭಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net