ಭಾಷೆ ತುಡಿತ ಹಾಗೂ ಭಾಷೆಯ ಸಮರ್ಥ ಬಳಕೆ ಇವತ್ತಿನ ಪತ್ರಕೋದ್ಯಮದಲ್ಲಿ ಇಲ್ಲವಾಗಿದೆ / ಕೆ.ನರಸಿಂಹಮೂರ್ತಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಪತ್ರಕರ್ತರು ತಾವು ಕೆಲಸ ಮಾಡುವ ನೆಲದ ಸಂಕಟಕ್ಕೆ ಧ್ವನಿಯಾಗಬೇಕು. ಇದನ್ನು ಕಾಮರೂಪಿ ಮಾಡಿದರು. ಅವರೊಬ್ಬ ಅಂತರರಾಷ್ಟ್ರೀಯ ಪತ್ರಕರ್ತ ಎಂದು ಮೈಸೂರಿನ ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್.ಪ್ರಭಾಕರ (ಕಾಮರೂಪಿ) ಅವರ ೨ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಭಾಷೆ ತುಡಿತ ಹಾಗೂ ಭಾಷೆಯ ಸಮರ್ಥ ಬಳಕೆ ಇವತ್ತಿನ ಪತ್ರಿಕೋದ್ಯಮದಲ್ಲಿ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಗತ್ತು ಹಲವು ತಲ್ಲಣ ಎದುರಿಸುತ್ತಿದೆ. ಮರ್ಯಾದೆಗೇಡು ಹತ್ಯೆ, ದಲಿತರ ಮೇಲೆ ದೌರ್ಜನ್ಯ, ಕೋಮು ಗಲಭೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಕಾಲಘಟ್ಟದಲ್ಲಿ ಗಾಂಧಿ ಹಾಗೂ ಅಂಬೇಡ್ಕರ್ ಅವರ ಪತ್ರಿಕೋದ್ಯಮದ ಜೊತೆಗೆ ಎಂ.ಎಸ್.ಪ್ರಭಾಕರ ಶೈಲಿಯ ಪತ್ರಿಕೋದ್ಯಮ ಬೇಕಿದೆ. ಶಾಂತಿ ಪತ್ರಿಕೋದ್ಯಮ ಬೇಕಿದೆ ಎಂದರು.

೧೭ನೇ ವಯಸ್ಸಿನಲ್ಲಿ ಕಠಾರಿಪಾಳ್ಯ ಬಿಟ್ಟು ಹೋಗಿದ್ದ ಅವರು ೭೨ನೇ ವಯಸ್ಸಿನಲ್ಲಿ ವಾಪಸ್ ಬಂದರು. ಕೊನೆಯ ದಿನಗಳಲ್ಲೊ ಏನೋ ಒಂಥರಾ ಸಂಕಷ್ಟ ಅವರ ಮನಸ್ಸಿನಲ್ಲಿ ಇತ್ತು ಎಂದು ಹೇಳಿದರು.

ಅಂಬೇಡ್ಕರ್ ಹಾಗೂ ಗಾಂಧಿ ಹೋರಾಟದ ಜೊತೆಗೆ ಪತ್ರಕರ್ತರಾಗಿಯೂ ಕೆಲಸ ಮಾಡಿದರು. ಈಗ ಪತ್ರಿಕೋದ್ಯಮ ವಾಣಿಜ್ಯಿಕರಣಗೊಂಡಿದ್ದರೂ ಹೋರಾಟದ ಅಸ್ತ್ರವಾಗಿ ಉಳಿದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಸಂಘದಿAದ ಕಾಮರೂಪಿ ಅವರ ಎರಡನೇ ವರ್ಷದ ಸ್ಮರಣೆ ನಡೆಸುತ್ತಿದ್ದೇವೆ. ಹಿರಿಯರ ಬಗ್ಗೆ ಕಿರಿಯರಿಗೆ ಗೊತ್ತಾಗಬೇಕೆಂಬುದು ನಮ್ಮ ಉದ್ದೇಶ. ಕೋಲಾರದ ಪತ್ರಿಕೋದ್ಯಮ ಸುಂದರ ಹಾದಿಯನ್ನು ನೆನಪಿಸಿಕೊಳ್ಳಬೇಕು ಎಂದರು.

ಪತ್ರಕರ್ತ ಹಾಗೂ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ಅತ್ಯಂತ ಗೌರವ ಪೂರ್ಣ ಕಾರ್ಯಕ್ರಮ ಇದು. ಕಾಮರೂಪಿ ಜಿಲ್ಲೆಯಲ್ಲಿ ಹುಟ್ಟಿ ಹೆಸರು ತಂದಿದ್ದಾರೆ. ಸಮರ್ಥ ಪತ್ರಕರ್ತರನ್ನು ಗುರುತಿಸಿ ಸಂಘದಿAದ ಕಾಮರೂಪಿ ಹೆಸರಲ್ಲಿ ಒಂದು ರಾಜ್ಯ ಪ್ರಶಸ್ತಿಯನ್ನು ಕೊಡಬೇಕು' ಎಂದು ಸಲಹೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕಾಮರೂಪಿ ಕೋಲಾರದ ಹೆಮ್ಮೆಯ ಪತ್ರಕರ್ತ. ಸಾಹಿತಿಯಾಗಿ, ಪತ್ರಕರ್ತರಾಗಿ ಇವತ್ತಿಗೂ ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ತೆರಳಿ ನೆಲ್ಸನ್ ಮಂಡೇಲಾ ಸಂದರ್ಶನ ಮಾಡಿದವರು. ಪ್ರತಿ ಪತ್ರಕರ್ತರು ಹಾಗೂ ಸಾಹಿತಿಗಳು ಕಾಮರೂಪಿ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಕಾಮರೂಪಿ ಅವರಂಥ ವ್ಯಕ್ತಿ ಮತ್ತೊಬ್ಬ ಹುಟ್ಟಲ್ಲ. ೬೦ವರ್ಷಕ್ಕೆ ಸರ್ಕಾರಿ ನೌಕರರು ಹಾಗೂ ಪತ್ರಕರ್ತರು ಸುಸ್ತಾಗುವಷ್ಟು ಹಂತ ತಲುಪಿದ್ದಾರೆ. ಆದರೆ, ಕಾಮರೂಪಿ ತಮ್ಮ ಕೊನೆಯ ಕಾಲದಲ್ಲೂ ಬರವಣಿಗೆಯಲ್ಲಿ ತೊಡಗಿದ್ದರು' ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರು, ಓದುಗ-ಕೇಳುಗ ಬಳಗದವವರು, ಸಾಹಿತಿಗಳು, ಉಪನ್ಯಾಸಕರು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು.

ಚಿತ್ರ ೨೯ ಕೆ.ಎಲ್.ಆರ್. ೦೩ : ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್.ಪ್ರಭಾಕರ (ಕಾಮರೂಪಿ) ಅವರ ೨ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net