ಭರತನಾಟ್ಯ ಭಾರತದ ಅಮೂಲ್ಯ ಕಲೆ

10HHR1NATYA
ಹೊಳೆಹೊನ್ನೂರಿನ ಶ್ರೀ ವೀರಭದ್ರೇಶ್ವರ ಸುಮುದಾಯ ಭವನದಲ್ಲಿ ನಡೆದ ನಟನಂ ಬಾಲ ನಾಟ್ಯ ಕೇಂದ್ರದ ತರಗತಿ ಕೇಂದ್ರದ ಆರಂಭೋತ್ಸವಕ್ಕೆ ಡಿ.ಆರ್.ರೇಖಾ ಉಮೇಶ್ ಚಾಲನೆ ನೀಡಿದರು. ಇ.ರಮೇಶ, ಎಸ್.ಸಿ.ಚೇತನ್, ಜಿ.ವಿ.ನಾಗರಾಜ್ ಇತರರಿದ್ದರು.
Published on

ಹೊಳೆಹೊನ್ನೂರು: ಭರತನಾಟ್ಯ ಭಾರತದ ಅತ್ಯಂತ ಪ್ರಾಚೀನ ಹಾಗೂ ಅಮೂಲ್ಯ ಕಲೆ ಎಂದು ಶಿವಮೊಗ್ಗ ನಟನಂ ಬಾಲನಾಟ್ಯ ಕೇಂದ್ರದ ಮುಖ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್.ಕೇಶವಕುಮಾರ್ ಪಿಳ್ಳೈ ಹೇಳಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ನಟನಂ ಬಾಲನಾಟ್ಯ ಕೇಂದ್ರದ ಸ್ಥಳೀಯ ಶಾಖೆ ಹಾಗೂ ಭರತನಾಟ್ಯ ತರಬೇತಿ ತರಗತಿ ಕೇಂದ್ರದ ಆರಂಭೋತ್ಸವದಲ್ಲಿ ಮಾತನಾಡಿದರು.

ನಟನಂ ಬಾಲ್ಯ ನಾಟ್ಯ ಕೇಂದ್ರವು ದೆಹಲಿಯ ರಾಷ್ಟ್ರೀಯ ಬಾಲಭವನದಿಂದ ಮಾನ್ಯತೆ ಪಡೆದಿದೆ. ನಾಟ್ಯ ಕೇಂದ್ರವು ಮಕ್ಕಳಲ್ಲಿರುವ ಪ್ರತಿಭೆಗೆ ಅವಕಾಶ ಕಲ್ಪಿಸುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಲಾಗುತ್ತದೆ. ಈ ಕಲೆಯು ಮಕ್ಕಳಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುತ್ತದೆ. ನಾಟ್ಯದಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುವುದಲ್ಲದೆ ಓದಿನಲ್ಲಿ ಏಕಾಗ್ರತೆ ಮೂಡುತ್ತದೆ. ಇಲ್ಲಿನ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಪರೀಕ್ಷೆ ಬರೆಸಲಾಗುತ್ತದೆ. ಅಲ್ಲದೆ ದೆಹಲಿ ಅಥವಾ ಕಾಶಿಯಲ್ಲಿ ನಡೆಯುವ ಅಂತರಾಜ್ಯ ನಾಟ್ಯ ಪ್ರದರ್ಶನದಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್.ರೇಖಾ ಉಮೇಶ್ ಮಾತನಾಡಿ, ಭರತನಾಟ್ಯ ಕಲೆ ಗ್ರಾಮೀಣ ಮಕ್ಕಳಿಗೂ ಅವಶ್ಯಕತೆ ಇತ್ತು. ಆದರೆ ಅವಕಾಶ ಇಲ್ಲದೆ ವಂಚಿತರಾಗುತ್ತಿದ್ದರು. ಈಗ ತರಬೇತಿ ತರಗತಿಗಳು ಆರಂಭ ಆಗಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಸ್ಥಳೀಯ ಮುಖಂಡ ಇ.ರಮೇಶ, ವಿದ್ವಾನ್ ಎಸ್.ಸಿ.ಚೇತನ್, ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ವಿ.ನಾಗರಾಜ್, ಕಾರ್ಯದರ್ಶಿ ಬಿ.ರುದ್ರೇಶ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net