ಭಜನೆಯಿಂದ ಧರ್ಮ ಪ್ರಸಾರ ಆಗಲಿ

bajan
ಕುದುರೆಗುಂಡಿಯಲ್ಲಿ ಏರ್ಪಡಿಸಿದ್ದ ಭಜನೆ ಕಲಿಕಾ ಕಾರ್ಯಾಗಾರವನ್ನು ಎನ್.ಶ್ರೀನಾಥ್ ಉದ್ಘಾಟಿಸಿದರು. ಅನಿತಾ, ಮಮತಾ ಪ್ರಭಾಕರ್, ಸುಮಾ, ರಂಗಿಣಿ ರಾವ್ ಇದ್ದರು.
Published on

ಎನ್.ಆರ್.ಪುರ: ಪ್ರತಿ ಮನೆಗಳಲ್ಲಿ ಭಜನೆ ನಡೆಯಬೇಕು. ಈ ಮೂಲಕ ಧರ್ಮ ಪ್ರಸಾರ ಆಗಬೇಕು ಎಂದು ಶಾಂಕರ ತತ್ವ ಅಭಿಯಾನದ ತಾಲೂಕು ಸಂಚಾಲಕ ಎನ್.ಶ್ರೀನಾಥ್ ತಿಳಿಸಿದರು.
ಭಾನುವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಭಾ ಭವನದಲ್ಲಿ ಗಾಯತ್ರಿ ವಿಪ್ರ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಭಜನೆ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸನಾತನ ಧರ್ಮ ಉಳಿಯಬೇಕಾದರೆ ಮನೆಗಳಲ್ಲಿ ಭಜನೆ ಮಾಡಬೇಕು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಒಂದೊಂದು ಗ್ರಾಮದಲ್ಲಿ ಒಂದು ತಂಡ ರಚನೆ ಮಾಡಿಕೊಂಡು ಭಜನೆ ಕಲಿಯಬಹುದು ಎಂದರು.
ಎನ್.ಆರ್.ಪುರ ಶಾರದಾ ಮಾತಾ ಭಕ್ತವೃಂದದ ಪ್ರಮುಖರಾದ ಅನಿತಾ ಶ್ರೀನಾಥ್ ಮಾತನಾಡಿ, ಸಣ್ಣ, ಸಣ್ಣ ತಂಡಗಳನ್ನು ಮಾಡಿಕೊಂಡು ಭಜನೆ ಕಲಿಯಬಹುದು. ಶೃಂಗೇರಿಯಲ್ಲಿ ಭಜನೆಗಾಗಿ ಮನೋನ್ಮಣಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದ್ದು ಜಿಲ್ಲಾದ್ಯಂತ ಅವರು ಭಜನೆ ಕಲಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಯತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ಭಜನಾ ತರಬೇತಿದಾರರಾದ ಸುಮಾ ನಾರಾಯಣಮೂರ್ತಿ, ರಂಗಿಣಿ ಯು. ರಾವ್, ಶಮಾ ಚರಣ್, ಸಂಗೀತಾ ಹೆಬ್ಬಾರ್, ತ್ರಿವೇಣಿ, ಗೌರಿ ರಮೇಶ್, ಜ್ಯೋತಿ ನರಸಿಂಹ, ವಿಜಯಾ ಎಸ್. ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net