ವಿಜಯವಾಣಿ ಸುದ್ದಿಜಾಲ ಕೋಲಾರ
ಬುದ್ಧ ಜಗತ್ತಿನ ಮಹಾನ್ ಮಾನವತಾವಾದಿಗಳು ಮತ್ತು ಅವರ ಜೀವನ, ಮಾರ್ಗದರ್ಶನ ಎಲ್ಲವೂ ಸಹ ನೀರಿನಷ್ಟೇ ಸುಲಭವಾಗಿದೆ. ಆದ್ದರಿಂದ ನಮ್ಮ ಜೀವನವನ್ನು ನಾವು ವೃದ್ಧಿಸಿಕೊಳ್ಳಲು ಗೊಂದಲ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಶ್ರೀ ಭಗವಾನ್ ಬುದ್ಧ ಜಯಂತಿಯನ್ನು ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ದೀಪಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಪ್ರಕಾರ ಬುದ್ಧ ಎಂದರೆ ಕೇವಲ ಹೆಸರಲ್ಲ, ಒಬ್ಬ ವ್ಯಕ್ತಿಯು ತನ್ನಲ್ಲಿರುವ ಎಲ್ಲಾ ದೌರ್ಬಲ್ಯಗಳನ್ನು ಕಳೆದುಕೊಂಡು ಮುಂದಿನ ಹಂತಕ್ಕೆ ಹೋಗುವುದೇ ಬುದ್ಧ. ತಮ್ಮ ಜೀವನದಲ್ಲಿಯೂ ದೌರ್ಬಲ್ಯಗಳನ್ನು ಕಳೆದುಕೊಂಡು ಮುಂದಿನ ಹಂತಕ್ಕೆ ಬಂದು ಜಗತ್ತಿಗೆ ಬುದ್ಧ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಯಾವುದಾದರೂ ಧರ್ಮ ವೈಜ್ಞಾನಿಕ ರೀತಿಯಲ್ಲಿ ಇದೆ. ವೈಚಾರಿಕವಾಗಿ ಒಪ್ಪಿಕೊಳ್ಳಬಹುದಾದ ಧರ್ಮ ಇದೆ ಅಂದರೆ ಅದು ಕೇವಲ ಬೌದ್ಧಧರ್ಮವಾಗಿದೆ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಹೇಳಿದ್ದಾರೆ ಎಂದು ತಿಳಿಸಿದರು.
ಒಂದು ಧರ್ಮ ಎಂದರೆ ಕೇವಲ ಗುರುಗಳು ಹೇಳುವುದನ್ನು ಒಪ್ಪಿಕೊಳ್ಳುವುದಲ್ಲ. ಅಥವಾ ಮೌಢ್ಯಗಳನ್ನು ನಂಬುವುದಲ್ಲ. ಭಗವಾನ್ ಬುದ್ಧರು ಹೇಳಿದಂತೆ ಓದುವುದು ಒಳ್ಳೆಯದು, ಆದರೆ ಆಲೋಚನೆ ಮಾಡುವುದು ಉತ್ತಮ. ಏನೇ ಮಾಡಬೇಕಾದರೂ ತಾಳ್ಮೆ ಬಹಳ ಮುಖ್ಯವಾಗಿರಬೇಕು ಎಂದರು.
ಇAದು ಬುದ್ಧ ಹುಣ್ಣಿಮೆಯಂತಹ ಪವಿತ್ರ ದಿನದಂದು ನಾವೆಲ್ಲರೂ ಸೇರಿ ಒಂದು ಆತ್ಮ ವಿಮರ್ಶೆ ಮಾಡಿಕೊಳ್ಳೋಣ ನಾವೆಲ್ಲರೂ ಒಳ್ಳೆಯವರಗೋಣ ಅದಕ್ಕೆ ನಾವು ಯಾವುದೇ ತಪ್ಪಸ್ಸು ಮಾಡಬೇಕಾಗಿಲ್ಲ, ದೇಹವನ್ನು ದಂಡಿಸಬೇಕಾಗಿಲ್ಲ. ಆತ್ಮ ಶೋಧಕರಿಗೆ ಬೆಳಕಿಗೆ ಬೆಳಕಾಗಬೇಕಾಗಿದೆ. ಅಂದರೆ ನಾವು ಬೆಳಕಿನಲ್ಲಿ ಲೀನವಾಗಬೇಕು. ಬೆಳಕು ಜಗತ್ತಿಗೆ ಬೆಳಕು ನೀಡುತ್ತದೆ. ಅದರಲ್ಲಿ ನಾವೆಲ್ಲರೂ ಸೇರಿಕೊಳ್ಳಬೇಕು. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ನಮ್ಮ ಮನಸ್ಸಿಗೆ ನಾವು ಬೆಳಕಾದರೆ ತಾವು ಸಮಾಜವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಯಾರೇ ತಮಗೆ ಮಾರ್ಗದರ್ಶನ ನೀಡಬಹುದು. ಆದರೆ ತೀರ್ಮಾನ ನಿಮ್ಮದಾಗಿರುತ್ತದೆ ಆದ್ದರಿಂದಲೇ ಬುದ್ಧರು ನಮಗೆ ಮಾರ್ಗದರ್ಶಕರು ಎಂದು ತಿಳಿಸಿದರು.
ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ಆಚರಿಸಲಾಗುವ ಪ್ರಾಥಮಿಕವಾಗಿ ಬೌದ್ಧ ಹಬ್ಬವಾಗಿದ್ದು, ಗೌತಮ ಬುದ್ಧನಾದ ಮತ್ತು ಬೌದ್ಧಧರ್ಮವನ್ನು ಸ್ಥಾಪಿಸಿದ ರಾಜಕುಮಾರ ಸಿದ್ಧಾರ್ಥ ಗೌತಮನ ಜನನವನ್ನು ಸ್ಮರಿಸಲಾಗುತ್ತದೆ ಎಂದರು.
ಮಹಾನ್ ಬುದ್ಧರು ಶಾಂತ ಪ್ರಿಯರು ಆದ್ದರಿಂದಲೇ ಇಂದು ಬುದ್ದರ ಜನ್ಮದಿನ ಹೌದು ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದಲ್ಲಿಯೂ ಇಂದೆ ಎರಡು ದೇಶದವರು ಶಾಂತಿ ಸಭೆಯನ್ನು ನಡೆಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೊತ್ತೂರು ಡಾ.ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಸದಸ್ಯರಾದ ರಾಮಯ್ಯ, ಅರಿವು ಶಿವಪ್ಪ, ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಮುಖಂಡರಾದ ವಿಜಿಕುಮಾರ್, ಚಂದ್ರಶೇಖರ್, ವೆಂಕಟಾಚಲಪತಿ, ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೬ : ನಗರದ ಚನ್ನಯ್ಯ ರಂಗಮAದಿರದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಆರ್.ರವಿ ಉದ್ಘಾಟಿಸಿ ಮಾತನಾಡಿದರು. ಪಂಡಿತ್ ಮುನಿವೆಂಕಟಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಮುಂತಾದವರು ಇದ್ದರು.