ಭಕ್ತಿಯಿಂದ ಜರುಗಿದ ಶರಣರ ಪಲ್ಲಕ್ಕಿ ಉತ್ಸವ : ಅಪ್ಪನ ಗುಡಿಯಲ್ಲಿ ಶ್ರಾವಣ ಜಾತ್ರೆ

IMG-20230912-WA0034
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
 ಶ್ರಾವಣ ಮಾಸದ ಕೊನೆಯ ಸೋಮವಾರದಂದು ನಾಡಿನ ಆರಾಧ್ಯ ದೈವವಾಗಿರುವ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಶರಣರ ರ‍್ಶನಕ್ಕೆ ಭಕ್ತರು ದಂಡೆ ಆಗಮಿಸಿದ್ದರಿಂದ ಸಂಭ್ರಮ ಕಳೆಗಟ್ಟಿತ್ತು.
ಜಿಡಗಾ-ಮುಗಳಖೋಡದ ಪೂಜ್ಯ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿಗಳ ನೇತೃತದ್ವದಲ್ಲಿ ಕೋಟನೂರ ಮಠದಿಂದ ಶರಣಬಸವೇಶ್ವರ ದೇವಾಲಯದವರೆಗೂ ಪಾದಯಾತ್ರೆ ಕೈಗೊಂಡರು. ಪೂಜ್ಯರ ನೇತೃತ್ವದಲ್ಲಿ ಜರುಗಿದ ಪಾದಯಾತ್ರೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ ಸಿದ್ದಾರೆಡ್ಡಿ, ಸಮಾಜ ಸೇವಕ  ಶಿವಕಾಂತ ಮಹಾಜನ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಹೆಜ್ಜೆ ಹಾಕಿದರು.
ಕೊನೆಯ ಸೋಮವಾರದಂದು ಸಂಸ್ಠಾನದಲ್ಲಿ ಭಕ್ತ ಸಾಗರ ಕಂಡು ಬಂದಿತು. ದೇವಸ್ಥಾನಕ್ಕೆ ಹೋಗುವ ದಾರಿಗಳ ಇಕ್ಕೆಲದಲ್ಲಿ,  ಅಪ್ಪನ ಗುಡಿ ಮುಂಭಾಗ, ಆವರಣದಲ್ಲಿ ಭಕ್ತರು  ಅನ್ನ ಸಂರ‍್ಪಣೆ ಮಾಡಿದರು. ಸಂಜೆ ಜರುಗಿದ ಪಲ್ಲಕ್ಕಿ ಉತ್ಸವ ಕಾಲಕ್ಕೆ ಪುರವಂತರ ಆಡುವಿಕೆ ಇನ್ನಿತರ ಕರ‍್ಯಕ್ರಮಗಳು ಜರುಗಿದವು.
ಶರಣಬಸವೇಶ್ವರ ವಿದ್ಯಾರ‍್ಧಕ ಸಂಘದ ಕರ‍್ಯರ‍್ಶಿ ಬಸವರಾಜ ದೇಶಮುಖ ಅವರು ಪಲ್ಲಕ್ಕಿಯಲ್ಲಿ ದೇವರ ವಿಗ್ರಹ ಇರಿಸಿ ಪೂಜೆ ಸಲ್ಲಿಸಿದರು. ಬಳಿಕ ಶರಣಮರ‍್ತಿಯೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಸಾಗಿದರು. ಎಲ್ಲಡೆ ಶರಣಬಸವೇಶ್ವರ ಮಹಾರಾಜ್ ಕಿ ಜೈ ಘೋಷಣೆ ಮೊಳಗುತ್ತಿತ್ತು. ಹೂವು ಹಣ್ಣಿನ ವ್ಯಾಪಾರ ಜತೆಗೆ ವಿಭೂತಿ, ಕುಂಕುಮ, ಲಿಂಗದ ಕಂತಿಗಳನ್ನು ಭಕ್ತರು ಖರೀದಿಸಿದರು.
ಶ್ರಾವಣ ಅಂಗವಾಗಿ ಶರಣಬಸವೇಶ್ವರ ಸಂಸ್ಥಾನದಲ್ಲಿ ಹಲವು ಧರ‍್ಮಿಕ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆಯುತ್ತಿವೆ. ಅವು ಪೂಜ್ಯ ಲಿಂಗೈಕ್ಯ ದೊಡಪ್ಪ ಅಪ್ಪನವರ ಪುಣ್ಯಸ್ಮರಣೆಯವರೆಗೂ ಮುಂದುವರೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net