

ಎನ್.ಆರ್.ಪುರ: ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಸುತ್ತಿರುವುದು ಸೀತೂರು ಗ್ರಾಪಂಗೆ ಹೆಮ್ಮೆ ತಂದಿದೆ ಎಂದು ಗ್ರಾಪಂ ಸದಸ್ಯ ಎಚ್.ಇ.ದಿವಾಕರ ತಿಳಿಸಿದರು.
ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕದಕುಣಿ ಕ್ಲಸ್ಟರ್ ಮಟ್ಟದ ವ್ಯಾಪ್ತಿಯ 11 ಶಾಲೆಗಳ 1 ರಿಂದ 7ನೇ ತರಗತಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ಬೇಸಿಗೆ ಶಿಬಿರಕ್ಕೆ ಗ್ರಾಪಂಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಕೆಲವು ವಷರ್ಗಳ ಹಿಂದೆ ಸರ್ಕಾರ ಶಾಲೆಗಳಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮವನ್ನು ವಷರ್ದಲ್ಲಿ 1 ರಿಂದ 2 ತಿಂಗಳು ನಡೆಸುತ್ತಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಗೌರವಧನ ಸಹ ನೀಡಲಾಗುತ್ತಿತ್ತು. ನಂತರ ಶಿಬಿರ ಸ್ಥಗಿತವಾಯಿತು. ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಉಳಿದ ಶಾಲೆಗಳಿಗೆ ಪ್ರೇರಣೆಯಾಗಬಹುದು ಎಂದರು.
ರಾಜ್ಯ ಬಡ್ತಿ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಗೋಡೆಗಳ ಮಧ್ಯೆ ಶಿಕ್ಷಣ ಪಡೆಯುವ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪಠ್ಯ ಪುಸ್ತಕದಲ್ಲಿ ಸಿಗದಿರುವ ಅನೇಕ ಜ್ಞಾನ ಸಿಗಲಿದೆ. ಸರ್ಕಾರಿ ಶಾಲೆಯ ಹೊಸ ಪ್ರಯೋಗ ಬೇರೆ ಶಾಲೆಗಳಿಗೆ ಪ್ರೇರಣೆಯಾಗಲಿ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಅಕ್ಬರ್ ಆಲಿ, ಮಹೇಶ್, ಉಪಾಧ್ಯಕ್ಷೆ ರೂಪಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಆರ್.ನಾಗರಾಜ್, ಮುಖ್ಯಶಿಕ್ಷಕ ಬಸವರಾಜ್, ಸಹ ಶಿಕ್ಷಕರಾದ ರಂಗನಾಥ, ಸುಪ್ರೀತಾ, ಶ್ವೇತಾ ಇದ್ದರು.