ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ವಾರ್ಷಿಕ`ಉತ್ತರೋತ್ತರ ಪ್ರಶಸ್ತಿ'ಗಳನ್ನು ಪ್ರಕಟಿಸಲಾಗಿದ್ದು, ಹಿರಿಯ ಕವಿ ಬಿ.ಆರ್.ಲಕ್ಷö್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್‌ಫಯಾಜ್ ಖಾನ್, ತೊಗಲು ಗೊಂಬೆ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಸುಮಲತಾ, ಆದರ್ಶ ರೈತರಾದ ಕೃಷ್ಣೇಗೌಡ ಮಂಜುಳಮ್ಮ ದಂಪತಿಗಳು ಆಯ್ಕೆಯಾಗಿದ್ದಾರೆ ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸೆ.೨೦ ರಂದು ಬೆಳಗ್ಗೆ ೧೧.೩೦ ಗಂಟೆಗೆ ತಾಲ್ಲೂಕಿನ ಮಂಗಸAದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡದ ಕವಿ, ಗೀತರಚನಕಾರ, ಅವಿಭಜಿತ ಕೋಲಾರ ಜಿಲ್ಲೆ ಚಿಂತಾಮಣಿಯ ನಿವೃತ್ತ ಉಪಾಧ್ಯಾಯ ಬಿ.ಆರ್.ಲಕ್ಷö್ಮಣರಾವ್ ಅವರ ಸಾಹಿತ್ಯ ಸಾಧನೆ ಗೌರವಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಂತರರಾಷ್ಟಿçÃಯ ಮಟ್ಟದಲ್ಲಿ ಹಿಂದೂಸ್ತಾನಿ ಸಂಗೀತ ಹಿರಿಮೆ, ಗರಿಮೆಯನ್ನು ಮೆರೆಸುತ್ತಿರುವ ಉಸ್ತಾದ್ ಫಯಾಜ್‌ಖಾನ್ ಅವರನ್ನು ಸಂಗೀತ ಕ್ಷೇತ್ರದಲ್ಲಿನ ಅಪ್ರತಿಮ ಸೇವೆಗಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆದರ್ಶ ರೈತರಾದ ಕೃಷ್ಣೇಗೌಡ, ಶ್ರೀಮತಿ ಮಂಜುಳಮ್ಮ ದಂಪತಿಗಳ ಕೃಷಿ ಸಾಧನೆಗಾಗಿ ಅವರನ್ನು ಆಯ್ಕೆ ಮಾಡಿದ್ದು, ಉಳಿದಂತೆ ಕರ್ನಾಟಕ, ಆಂಧ್ರ ಗಡಿಭಾಗದಲ್ಲಿ ಈವರೆಗೂ ೮ ಸಾವಿರಕ್ಕೂ ಹೆಚ್ಚು ತೊಗಲು ಗೊಂಬೆ ಆಟದ ಪ್ರದರ್ಶನಗಳನ್ನು ನೀಡಿರುವ ಸುಮಲತಾ ಅವರನ್ನು ಈ ವರ್ಷದ ಉತ್ತರೋತ್ತರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರ ೧೭ ಕೆ.ಎಲ್.ಆರ್. ೦೪ : ಕವಿ ಬಿ.ಆರ್.ಲಕ್ಷö್ಮಣರಾವ್ ರವರ ಭಾವಚಿತ್ರ
ಚಿತ್ರ ೧೭ ಕೆ.ಎಲ್.ಆರ್. ೦೪ಎ : ಸುಮಲತಾ ರವರ ಭಾವಚಿತ್ರ
ಚಿತ್ರ ೧೭ ಕೆ.ಎಲ್.ಆರ್. ೦೪ಬಿ : ಉಸ್ತಾದ್ ಫಯಾಜ್‌ಖಾನ್ ರವರ ಭಾವಚಿತ್ರ