ಬಿನೀಶ್‌ಗೆ ಇಡಿ ‘ಗ್ರಿಲ್’

binish kodiyeri
Published on

ಬೆಂಗಳೂರು: ಜಾರಿ ನಿರ್ದೇಶನಾಯ (ಇಡಿ)ದಿಂದ ಬಂಧನಕ್ಕೊಳಗಾದ ಕೇರಳದ ಮಾಜಿ ಸಚಿವ ಹಾಗೂ ಸಿಪಿಐ(ಎಂ) ಮುಖಂಡ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿ ವಿಚಾರಣೆ ಮುಂದುವರೆದಿದ್ದು, ಈತ ಹೊಂದಿರುವ ಬೇನಾಮಿ ಆಸ್ತಿಯ ಸುಳಿವು ಸಿಕ್ಕಿದೆ.
ಬಿನೀಶ್ ಡ್ರಗ್ ಪೆಡ್ಲರ್ ಅನೂಪ್‌ಗೆ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಇಡಿ ತನಿಖೆಯಲ್ಲಿ ಕಂಡು ಬಂದಿದೆ. ಬಿನೀಶ್‌ಗೆ ಬೇನಾಮಿದಾರನಾಗಿ ಮೊಹಮ್ಮದ್ ಅನೂಪ್ ಕಾರ್ಯ ನಿರ್ವಹಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಇದೀಗ ಈತ ಕೇರಳದಲ್ಲಿ ಹೊಂದಿರುವ ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿರುವ ಇಡಿ, ಇದಕ್ಕೆ ಸಂಬಂಧಿಸಿದ ದಾಖಲೆಗಳಾಗಿ ಶೋಧ ನಡೆಸುತ್ತಿದೆ. ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾದರೆ ಇಡಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net