ಬಿಜೆಪಿ ಸೇರಿದ ರೂಪಾಲಿ ಗಂಗೂಲಿ! ಪಕ್ಷ ಸೇರಲು ಪ್ರಧಾನಿ ಮೋದಿ ಕಾರಣ ಎಂದ ನಟಿ

WhatsApp Image 2024-05-01 at 2.29.56 PM
Published on

ನವದೆಹಲಿ: ಬಾಲಿವುಡ್​ನ ಹೆಸರಾಂತ ನಟಿ, ಟಿವಿ ಸೀರಿಯಲ್​ ಕಲಾವಿದೆ ರೂಪಾಲಿ ಗಂಗೂಲಿ ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದು, ಲೋಕಸಭಾ ಚುನಾವಣೆಯ ಸಮೀಪದಲ್ಲಿ ಪಕ್ಷ ಸೇರಿರುವುದು ಕಮಲಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಇಂದು ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಪಕ್ಷ ಸೇರಿದ ನಟಿ, ಬಳಿಕ ಮಾತನಾಡಿ, "ಈ ಸ್ಥಾನದಲ್ಲಿರಲು ನನಗೆ ಬಹಳ ಸಂತೋಷವಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ನನಗೆ ಸ್ಪೂರ್ತಿ. ನಾನು ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ. ಬಿಜೆಪಿ ಮಾಡುತ್ತಿರುವ ಅದ್ಭುತ ಕೆಲಸ ಕಾರ್ಯಗಳೇ ಇಂದು ಪಕ್ಷ ಸೇರಲು ಕಾರಣ. ಇದಕ್ಕೆ ಮೋದಿ ಹಾಗೂ ಪಕ್ಷಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

"ಎಲ್ಲರನ್ನೂ ಬಿಜೆಪಿಯತ್ತ ಆಕರ್ಷಿಸುವ ವ್ಯಕ್ತಿತ್ವ ಎಂದರೆ ಅದು ಪ್ರಧಾನಿ ಮೋದಿ. ಅವರ ಮಾತು, ಮಾಡುವ ಕೆಲಸ, ನಡೆದುಕೊಳ್ಳುವ ರೀತಿ, ಇಂದು ದೇಶದ ಅಭಿವೃದ್ಧಿಯನ್ನು ತೆಗೆದುಕೊಂಡ ಹೋದ ರೀತಿ ಎಲ್ಲವನ್ನೂ ಗಮನಿಸಿದರೆ, ಪ್ರತಿಯೊಬ್ಬರು 'ಮೋದಿ ಸೇನೆ' ಸೇರಬೇಕು ಎಂಬ ಬಯಕೆ ಹುಟ್ಟುತ್ತದೆ. ಅದೇ ರೀತಿ ನನಗೆ ಅನಿಸಿದ ಕಾರಣದಿಂದಲೇ ಇಂದು ಬಿಜೆಪಿ ಸೇರ್ಪಡೆಗೊಂಡೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net