ವಿಜಯವಾಣಿ ಸುದ್ದಿಜಾಲ ಕೋಲಾರ
ಗುರು ಪೂರ್ಣಿಮಾ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ವಿಶೇಷ ಪೂಜೆ, ಅದ್ದೂರಿ ಹೂವಿನ ಅಲಂಕಾರ, ವಾದ್ಯಗೋಷ್ಟಿ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಸಾಯಿಬಾಬಾ ದರ್ಶನ ಪಡೆದರು.
ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬಾಬಾ ಮಂದಿರದಲ್ಲಿ ಮುಂಜಾನೆಯಿAದಲೇ ಗುರುವಿನ ಕೃಪೆ ಪಡೆಯಲು ಸಹಸ್ರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು. ಬಾಬಾ ಮಂದಿರದಿAದ ರೈಲ್ವೆ ನಿಲ್ದಾಣದವರೆಗೂ ಜನರು ಸಾಲುಗಟ್ಟಿ ನಿಂತಿದ್ದರು.
ಮುAಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊAಡಿದ್ದು, ಸಾಯಿಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ಲಕ್ಷಾಂತರ ಮೌಲ್ಯದ ವಿವಿಧ ರೀತಿಯ ಹೂಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕಾರಗೊಳಿಸಲಾಗಿತ್ತು.
ಸುಗಮ ದರ್ಶನಕ್ಕೆ ಪೊಲೀಸರ ನೆರವು :
ಭಕ್ತರ ಅನುಕೂಲಕ್ಕಾಗಿ ಹಾಗೂ ದರ್ಶನಕ್ಕೆ ಬಂದ ಸಹಸ್ರಾರು ಮಂದಿಯನ್ನು ನಿಯಂತ್ರಿಸಲು ಮಂದಿರದ ಮುಂಭಾಗ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಭಕ್ತರು ಸರದಿ ಸಾಲಿನಲ್ಲಿ ಮುನ್ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿತ್ತಾದರೂ, ಸರದಿ ಸಾಲು ರೈಲ್ವೆ ನಿಲ್ದಾಣದವರೆಗೂ ಸಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಗುರುವಿನ ದರ್ಶನ ಪಡೆದರು.
ಗೋವಿಂದಗೌಡರಿAದ ೨೫ ಸಾವಿರ ಜನಕ್ಕೆ ಊಟ :
ಬಾಬಾ ದರ್ಶನಕ್ಕೆ ಬಂದಿದ್ದ ಭಕ್ತಾಧಿಗಳಿಗೆ ಮಂದಿರಕ್ಕೆ ಹತ್ತಿರವಿರುವ ನಗರದ ರೈಲು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ೨೫ ಸಾವಿರ ಮಂದಿಗೆ ಹಬ್ಬದೂಟದ ವ್ಯವಸ್ಥೆ ಕಲ್ಪಿಸಿದ್ದರು.
ಎಲ್ಲಾ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಹಾಕಿರುವ ಬೃಹತ್ ಶಾಮಿಯಾನಾದಡಿ ಹಬ್ಬದ ಊಟದ ಪ್ರಸಾದವನ್ನು ಬಫೆ ಮಾದರಿಯಲ್ಲಿ ಬಡಿಸಿದ್ದರು. ತಟ್ಟೆ ಇಡ್ಲಿ, ಚೆಟ್ನಿ, ತರಕಾರಿ ಪಲಾವ್, ಜಾಹಂಗೀರ್, ಈರುಳ್ಳಿ ಬೊಂಡಾ, ಅನ್ನಾ ತರಕಾರಿ ಸಾಂಬಾರ್‌ನ್ನು ಶುದ್ದ ಕುಡಿಯುವ ನೀರಿನ ಬಾಟೆಲ್‌ನೊಂದಿಗೆ ಅಡಿಕೆ ತಟ್ಟೆಯಲ್ಲಿ ಬಡಿಸಲಾಯಿತು.
ಸಾಮರಸ್ಯಕ್ಕಾಗಿ ಬಾಬಾ ಆದರ್ಶ :
ಬ್ಯಾಲಹಳ್ಳಿ ಗೋವಿಂದಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕೋಮು ಸಾಮರಸ್ಯಕ್ಕಾಗಿ ಸಾಯಿಬಾಬಾ ಆದರ್ಶವಾಗಿದ್ದು, ದೇಶದಲ್ಲಿ ದ್ವೇಷದ ಭಾವನೆ ಹೋಗಿ ಶಾಂತಿ ನೆಲಸಲಿ, ಸ್ನೇಹ, ಸಂಬAಧಗಳು ಬಲಗೊಳ್ಳಲಿ ಎಂದು ಪ್ರಾರ್ಥಿಸಿ ಈ ಕಾರ್ಯಕ್ರಮ ಆಯೋಜಿಸಿದ್ದು ಪ್ರತಿವರ್ಷವೂ ಈ ಕಾರ್ಯ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು.
ಗುರುಪೌರ್ಣಿಮವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ಗುರುವಿನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ, ಗೊಂದಲವಾಗದAತೆ ಊಟದ ವ್ಯವಸ್ಥೆ ಕಲ್ಪಿಸುವ ಸಂಕಲ್ಪದೊAದಿಗೆ ತಾವು ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಚಿತ್ರ ೧೦ ಕೆ.ಎಲ್.ಆರ್. ೦೬ಬಿ : ಕೋಲಾರದ ಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ಬಾಬಾ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.