

ಹನಗೋಡು: ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದ ಚರ್ಚ್ ಆವರಣದಲ್ಲಿ ಇತ್ತೀಚೆಗೆ ಹುಣಸೂರು ನಗರಸಭಾ ಸದಸ್ಯ ಗಣೇಶ್‌ಕುಮಾರಸ್ವಾಮಿ ಆಸರೆ ಸೇವಾ ಟ್ರಸ್ಟ್ ಉದ್ಘಾಟಿಸಿದರು.
ಬಡವರ ಶ್ರೇಯೋಭಿವೃದ್ಧಿಯ ಗುರಿ ಇಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಸಮಾನ ಮನಸ್ಕರು ಒಟ್ಟಿಗೆ ಸೇರಿ ಸೇವಾ ಟ್ರಸ್ಟ್ ರಚಿಸಿಕೊಂಡಿರುವುದು ಶ್ಲಾಘನೀಯ. ಟ್ರಸ್ಟ್, ಸಂಘ-ಸಂಸ್ಥೆಗಳು ಆರಂಭಿಸಿ ನಂತರದಲ್ಲಿ ಸೇವಾ ಚಟುವಟಿಕೆ ನಡೆಸದೆ ವಿಮುಖರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಆಸರೆ ಹೆಸರಿನಲ್ಲಿ ರಚಿಸಿರುವ ಟ್ರಸ್ಟ್ ಬಡವರ ಬಾಳಿಗೆ ಆಶಾಕಿರಣವಾಗಲೆಂದು ಆಶಿಸಿದರು.
ಚಿತ್ರನಟ ಕುಮಾರ್‌ಅರಸೇಗೌಡ ಟ್ರಸ್ಟ್‌ನ ನಾಮಫಲಕ ಅನಾವರಣಗೊಳಿಸಿದರು. ಉಪನ್ಯಾಸಕ ನಾಗರಾಜು, ಟ್ರಸ್ಟ್ ಅಧ್ಯಕ್ಷ ಜೋಸೆಫ್‌ಮರಿ, ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶೋಕ್‌ರಾಜಲಿಂಗಯ್ಯ, ಶ್ರೀನಿವಾಸೇಗೌಡ, ಮಲ್ನಾಡ್‌ರವಿ, ಕೃಷ್ಣ, ಟ್ರಸ್ಟ್ ಪದಾಧಿಕಾರಿಗಳಾದ ಚಂದ್ರೇಗೌಡ, ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ ಇತರರು ಇದ್ದರು.