ಪ್ರತಿಭೆ ಪುರಸ್ಕರಿಸುವ ಕಾರ್ಯವೇ ಕ್ರೀಡಾಕೂಟ

bhr sports
ಬಾಳೆಹೊನ್ನೂರಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜ ಪಾರಿವಾಳ ಹಾರಿಸುವುದರ ಮೂಲಕ ಉದ್ಘಾಟಿಸಿದರು. ರವಿಚಂದ್ರ, ಸೇವ್ಯಾನಾಯ್ಕ, ಗಿರೀಶ್ ಕಾರ್‌ಗದ್ದೆ, ಒ.ಡಿ.ಸ್ಟೀನ್, ಶಿವಪ್ಪ, ಸರಿತಾ, ಇಬ್ರಾಹಿಂ ಶಾಫಿ ಇತರರಿದ್ದರು.
Published on

ಬಾಳೆಹೊನ್ನೂರು: ಮಕ್ಕಳ ಪ್ರತಿಭೆ ಗುರುತಿಸಿ ಪುರಸ್ಕರಿಸುವ ಕಾರ್ಯವೇ ಕ್ರೀಡಾಕೂಟ ಎಂದು ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜ ಹೇಳಿದರು.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎನ್.ಆರ್.ಪುರ ತಾಲೂಕು ಮಟ್ಟದ 14ರ ವಯೋಮಿತಿಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಗುರಿ ಮುಟ್ಟಲು ಸತತ ಅಭ್ಯಾಸ, ಪರಿಶ್ರಮ ಹೊಂದಿರಬೇಕು. ವಿದ್ಯಾರ್ಥಿಗಳು ಬೇರೆಯವರನ್ನು ತಳ್ಳಿ ಸಾಧನೆ ಮಾಡುವುದಲ್ಲ. ನಿಮ್ಮ ಪ್ರತಿಭೆ ಅನಾವರಣಗೊಳಿಸಿ ಸಾಧಿಸಬೇಕು ಎಂದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗುವುದೇ ಕ್ರೀಡಾ ಧರ್ಮ ಎಂದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾನಾಯ್ಕ, ಗ್ರಾಪಂ ಸದಸ್ಯರಾದ ಶಿವಪ್ಪ, ಸರಿತಾ, ಇಬ್ರಾಹಿಂ ಶಾಫಿ. ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಕಾರ್‌ಗದ್ದೆ, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್, ಸಿಆರ್‌ಪಿ ಮಾಲತೇಶ್, ಶಿಕ್ಷಕರಾದ ಲಿಲ್ಲಿ ಡಿಸೋಜ, ಎಲ್ವಿನ್ ಡಿಸೋಜ, ಐರಿನ್ ವೇಗಸ್, ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net