ಪೋಷಕರಿಂದ ದೂರವಾಗಿದ್ದ ಮಹಿಳೆಯನ್ನು ಮತ್ತೆ ಮಗನ ಬಳಿ ಸೇರಿಸಿ ಮಾನವೀಯತೆ ಮೆರೆದ ಕೋಲಾರ ಬುದ್ಧಿಮಾಂದ್ಯ ಸಂಸ್ಥೆ ಮತ್ತು ಪೋಲಿಸರು.

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕಳೆದ ಒಂದೂವರೆ ವರ್ಷದ ಹಿಂದೆ ಕೆಲಸವನ್ನು ಅರಿಸಿ ತನ್ನ ಪತಿ ಮತ್ತು ಸಂಬAಧಿಕರೊAದಿಗೆ ಬೆಂಗಳೂರಿಗೆ ಬಂದಿದ್ದು, ಬೆಂಗಳೂರು ಮಹಾನಗರದ ಜನಸಂದಣಿಯಲ್ಲಿ ತಪ್ಪಿಹೋಗಿ ಭಾಷೆ ಬಾರದೆ ದುಶ್ಚಟಗಳಿಗೆ ದಾಸಳಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಮಹಿಳೆಯನ್ನು ಕೋಲಾರದ ಅಂತರಗAಗೆ ಬುದ್ಧಿಮಾಂದ್ಯ ವಿದ್ಯಾಸಂಸ್ಥೆ ರಕ್ಷಿಸಿ ಪೋಲಿಸರ ಸಹಕಾರದಿಂದ ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ಪೋಷಕರ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ವರ್ಷ ಏಪ್ರಿಲ್ ೦೭ ರಂದು ಬಂಗಾರಪೇಟೆ ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ಮತಿಸ್ಥಿಮಿತ ಕಳೆದುಕೊಂಡು ಪಾನಮತ್ತಳಾಗಿದ್ದ ಮೈ ತುಂಬಾ ಗಾಯಗಳಿಂದ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಕಂಡAತಹ ಬಂಗಾರಪೇಟೆ ಪೊಲೀಸರು ಮಹಿಳೆಯ ಬಗ್ಗೆ ಮಾಹಿತಿ ಕೇಳಿದರು. ಆ ಮಹಿಳೆ ಮಾನಸಿಕ ಸ್ಥೀಮಿತ ಕಳೆದುಕೊಂಡು ತನ್ನ ಹೆಸರು ಮತ್ತು ವಿಳಾಸ ಹೇಳುತ್ತಿರಲಿಲ್ಲ ಆಗ ಬಂಗಾರಪೇಟೆ ಪೊಲೀಸರು ಆ ಮಹಿಳೆಯನ್ನು ಕೋಲಾರದ ಅಂತರಗAಗಾ ಬುದ್ದಿಮಾಂದ್ಯ ವಿದ್ಯಾ ಸಂಸ್ಥೆ ಹಾಗು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದರು.

ಸದರಿ ಮಹಿಳೆಗೆ ಒಂದೂವರೆ ವರ್ಷ ಕಾಲ ಉತ್ತಮ ಆರೈಕೆ, ಪೋಷಣೆ ಹಾಗು ನಿರಂತರವಾದ ಆಪ್ತ ಸಮಾಲೋಚನೆಯಿಂದ ಚೇತರಿಕೆ ಕಂಡಳು. ಸಂಸ್ಥೆಯ ಮಕ್ಕಳು ಮತ್ತು ಹಿರಿಯರೊಂದಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಳು. ಕಾಲಕ್ರಮೇಣ ಆ ಮಹಿಳೆಯಿಂದ ವಿಳಾಸ ಪತ್ತೆ ಹಚ್ಚಿದ ಸಂಸ್ಥೆಯವರು ಆಕೆಯ ವಿಳಾಸ ಖಚಿತಪಡಿಕೊಂಡು, ಅಲ್ಲಿ ಶಾಲೆಯೊಂದರ ಪ್ರಾಂಶುಪಾಲರನ್ನು ಸಂಪರ್ಕಿಸಿ ಸಂಪೂರ್ಣ ವಿವರ ಪಡೆದುಕೊಂಡರು.

ಕಳೆದ ೪ ತಿಂಗಳ ಹಿಂದೆ ಪತ್ನಿಯ ಹುಡುಕಾಟದಲ್ಲಿ ಮನನೊಂದು ತೀವ್ರ ಅನಾರೋಗ್ಯದಿಂದ ಪತಿ ಮೈಲಾರಾಯ್ ಮರಣ ಹೊಂದಿರುತ್ತಾರೆ. ಆಕೆಗೆ ಒಬ್ಬನೇ ಮಗನಿದ್ದು, ಮಗನೊಂದಿಗೆ ಸಂಕರ್ಪ ಕಲ್ಪಿಸುವಲ್ಲಿ ಸಂಸ್ಥೆಯವರು ಯಶಸ್ವಿಯಾಗಿರುತ್ತಾರೆ, ಆಗ ಕಾರ್ಯಪ್ರವೃತ್ತರಾದ ಅಂತರಗAಗೆ ಬುದ್ದಿಮಾಂದ್ಯ ವಿದ್ಯಾ ಸಂಸ್ಥೆಯವರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದರು. ಕೋಲಾರ ಜಿಲ್ಲಾ ಎಸ್ಪಿ ಬಿ.ನಿಖಿಲ್, ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಕಾಂತರಾಜು ರವರಿಗೆ ಸೂಚಿಸಿ ಮಹಿಳೆಯ ಪುನರ್ವಸತಿಗೆ ಸಹಕರಿಸುವಂತೆ ಸೂಚನೆ ನೀಡಿದರು.

ಕೋಲಾರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಕಾಂತರಾಜು ಎಸ್ಪಿ ಆದೇಶದಂತೆ ಬಂಗಾರಪೇಟೆ ಪೊಲೀಸರನ್ನು ಸಂಪರ್ಕಿಸಿ ಆಕೆ ತನ್ನ ಸ್ವಗ್ರಾಮಕ್ಕೆ ತೆರಳಿಸಲು ಇದ್ದ ಕಾನೂನು ತೊಡಕುಗಳನ್ನು ಪಾಲಿಸಿ ನಂತರ ಪಶ್ವಿಮ ಬಂಗಾಳದ ಡಾಲ್ ಮೋರ್ ಟೀ ಗಾರ್ಡನ್ ಗ್ರಾಮದಲ್ಲಿದ್ದ ಆ ಮಹಿಳೆಯ ಮಗನಾದ ಬಿಜಾಯ್‌ನನ್ನು ಸಂಪರ್ಕಿಸಿ ರೈಲಿನ ಮೂಲಕ ಕಳೆದ ನಾಲ್ಕು ದಿನಗಳ ಹಿಂದೆ ಬಂಗಾರಪೇಟೆಗೆ ಕರೆಸಿಕೊಂಡು ನಂತರ ತಾಯಿ ಮಗನನ್ನು ಒಂದು ಮಾಡಿ, ಬಂಗಾರಪೇಟೆ ರೈಲ್ವೆ ನಿಲ್ದಾಣದ ಮೂಲಕ ಆ ಮಹಿಳೆ ಮತ್ತು ಮಗನನ್ನು ಪಶ್ಚಿಮ ಬಂಗಾಳ ರಾಜ್ಯದ ದಾಲ್ ಮೋರ್ ಟೀ ಗಾರ್ಡನ್ ಎಂಬ ಸ್ವಗ್ರಾಮಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಟ್
ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಮಗುವಿನಂತೆ ಸಾಕಿ ಸಲುಹಿಸಿದ ಅಂತರಗAಗೆ ಬುದ್ದಿಮಾಂಧ್ಯ ವಿದ್ಯಾ ಸಂಸ್ಥೆಗೆ ನಾನು ಎಷ್ಟು ಧನ್ಯವಾದ ಹೇಳಿದರು ಸಾಲದು. ನನ್ನ ಗಂಡ ತೀರಿಕೊಂಡಿರುವ ವಿಷಯ ತಿಳಿದು ನನಗೆ ನೋವಾಗಿದೆ. ನನ್ನ ಮಗನೊಂದಿಗೆ ನನ್ನನ್ನು ಸೇರಿಸಿದ ಅಂತರಗAಗೆ ವಿದ್ಯಾ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗೆ ನಾನು ಜೀವನ ಪೂರ್ತಿ ಋಣವಾಗಿರುತ್ತೇನೆ.

-ಜೀನಾರಾಯ್, ಪುನರ್ವಸತಿ ಮಹಿಳೆ.

ಅಂತರಗAಗೆ ಬುದ್ದಿಮಾಧ್ಯಮ ಸಂಸ್ಥೆಗೆ ಈ ಮಹಿಳೆ ಬಂದಾಗ ಸಂಪೂರ್ಣ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ನಿಧಾನವಾಗಿ ಮಾನಸಿಕವಾಗಿ ಸದೃಢಗೊಂಡಾಗ ಆಕೆಯ ವಿಳಾಸ ಪತ್ತೆ ಹಚ್ಚಲು ಯತ್ನಿಸಿದೆವು. ಆಕೆಯ ಗಂಡ ಮತ್ತು ೨೦ ವರ್ಷದ ಮಗನಿಂದ ದೂರ ಇರುವ ಸಂಗತಿ ತಿಳಿದು, ತಾಯಿ ಮಗನನ್ನು ಒಂದು ಮಾಡಬೇಕೆಂಬ ಸಂಕಲ್ಪ ಮಾಡಿದೆವು. ಪೊಲೀಸ್ ಇಲಾಖೆಯಿಂದ ಸಹಕಾರ ಸಿಕ್ಕಿತ್ತು. ಇದರಿಂದ ನಮಗಂತೂ ತುಂಬಾ ಖುಷಿ ತಂದಿದೆ. ನಮ್ಮ ಸಂಸ್ಥೆ ಹಲವು ಮಾನಸಿಕ ಅಸ್ವಸ್ಥರಿಗೆ ಮತ್ತು ನಿರ್ಗತಿಕರಿಗೆ ಆರೈಕೆ ನೀಡುತ್ತಿದ್ದು, ಅಂತವರ ಪುನರ್ವಸತಿಗಾಗಿ ಕಾರ್ಯ ನಿರ್ವಹಿಸುತ್ತಿದೆ.

-ಡಾ.ಕೆ.ಎಸ್ ಶಂಕರ್ ಅಂತರಗAಗಾ ಬುದ್ದಿಮಾಂಧ್ಯ ಮತ್ತು ಪುನರ್ವಸತಿ ಕೇಂದ್ರದ ಕಾರ್ಯದರ್ಶಿ.

ಚಿತ್ರ ೦೫ ಕೆ.ಎಲ್.ಆರ್. ೦೬ : ತಾಯಿಯನ್ನು ಮಗನ ಬಳಿಗೆ ಸೇರಿಸಿ, ಮಗನ ಜೊತೆಯಲ್ಲಿ ಸ್ವಗ್ರಾಮಕ್ಕೆ ಕಳಿಸಿಕೊಟ್ಟ ಸರ್ಕಲ್ ಇನ್ಸ್ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿ.
ಚಿತ್ರ ೦೫ ಕೆ.ಎಲ್.ಆರ್. ೦೬ಎ : ಡಾ.ಕೆ.ಎನ್.ಶಂಕರ್ ಭಾವಚಿತ್ರ
ಚಿತ್ರ ೦೫ ಕೆ.ಎಲ್.ಆರ್. ೦೬ಬಿ : ಜೀನಾರಾಯ್, ಪುನರ್ವಸತಿ ಮಹಿಳೆ ಭಾವಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net