

ಬಾಳೆಹೊನ್ನೂರು: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಪಟ್ಟಣದಲ್ಲಿ ಪೊಲೀಸರು ಸೋಮವಾರ ರೂಟ್ ಮಾರ್ಚ್ ನಡೆಸಿದರು. ಪಟ್ಟಣದ ಪೊಲೀಸ್ ಠಾಣೆಯಿಂದ ಹೊರಟ ಸ್ಥಳೀಯ ಠಾಣೆಯ ಪೊಲೀಸರು ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿ ಪಟ್ಟಣದ ವಿವಿಧೆಡೆ ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.ಕೊಪ್ಪ ಡಿವೈಎಸ್ಪಿ ಅನಿಲ್‌ಕುಮಾರ್, ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಸೇರಿದಂತೆ ಕೆಎಸ್‌ಆರ್‌ಪಿ ಸಿಬ್ಬಂದಿ ಇದ್ದರು.