

2025-26ನೇ ಸಾಲಿನಲ್ಲಿ ತಿ.ನರಸೀಪುರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದಲ್ಲಿ ಗೌರವ ಸಂಭಾವನೆಗೆ ಕರ್ತವ್ಯ ನಿರ್ವಹಿಸಲು ಪಿಜಿಯೋಥೆರಪಿಸ್ಟ್ ಹಾಗೂ ಆಯಾ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪಿಜಿಯೋ ಥೆರಪಿಸ್ಟ್ ಹುದ್ದೆಗೆ ರೂ. 12000/- ಹಾಗೂ ಆಯಾ ಹುದ್ದೆಗೆ ರೂ. 6000/- ನಿಗದಿಪಡಿಸಲಾಗಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 2026 ಮಾರ್ಚ್ ವರೆಗೆ ನಿಗಧಿಪಡಿಸಲಾಗಿದೆ.
ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ತಾಲ್ಲೂಕು ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ತಿ.ನರಸೀಪುರ, ಮೈಸೂರು ಜಿಲ್ಲೆ ಇವರಿಗೆ ಜೂನ್ 26 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಿಜಿಯೋಥೆರಪಿಸ್ಟ್ ಹುದ್ದೆಗೆ ಬಿಪಿಟಿ ಅಥವಾ ಡಿಪಿಟಿ ಹೊಂದಿರಬೇಕು. ಆಯಾ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ಓದಿರಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ತಿ.ನರಸೀಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಯೋಜನಾ ಸಮನ್ವಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.