ಪಿಎಸಿಎಸ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 7 ನಿರ್ದೇಶಕರ ಆಯ್ಕೆ

09bhr 1 sahakara
ಬಾಳೆಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
Published on

ಬಾಳೆಹೊನ್ನೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 7 ನಿರ್ದೇಶಕರು, ಕಾಂಗ್ರೆಸ್ ಬೆಂಬಲಿತ 5 ನಿರ್ದೇಶಕರು ಆಯ್ಕೆಗೊಂಡಿದ್ದಾರೆ.

ೆ.2ರಂದು ನಡೆದ ಚುನಾವಣೆಯ ಲಿತಾಂಶ ಬುಧವಾರ ಪ್ರಕಟಗೊಂಡಿದ್ದು ಚುನಾವಣಾಧಿಕಾರಿಯಾಗಿ ಕೆ.ಎಂ.ಸಿ.ವಸಂತ ಕಾರ್ಯನಿರ್ವಹಿಸಿದರು. ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಏ.17ರಂದು ನಡೆಯಲಿದೆ.

ಸಾಲ ಪಡೆಯದ ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ 4 ಅಭ್ಯರ್ಥಿಗಳು, ಸಾಲಗಾರರ ಕ್ಷೇತ್ರದ 11 ನಿರ್ದೇಶಕ ಸ್ಥಾನಕ್ಕೆ 29 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಮತ ಚಲಾಯಿಸಲು ಸಾಲರಹಿತ ಕ್ಷೇತ್ರದಲ್ಲಿ 253 ಅರ್ಹ ಮತದಾರರಿದ್ದು 98 ಜನ ಅನರ್ಹ ಮತದಾರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 236 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 82 ಮತದಾರರು ಮತ ಚಲಾಯಿಸಿದ್ದರು.

ಸಾಲಗಾರ ಕ್ಷೇತ್ರದಲ್ಲಿ 296 ಅರ್ಹ ಮತದಾರರಿದ್ದು 57 ಅನರ್ಹ ಮತದಾರರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 286 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 54 ಮತದಾರರು ಮತ ಚಲಾಯಿಸಿದ್ದರು.

ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹತೆ ಹೊಂದಿದ್ದ 154 ಮತದಾರರು ಹೈಕೋರ್ಟ್ ಮೂಲಕ ಮತದಾನದ ಹಕ್ಕು ಪಡೆದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 154 ಜನರಿಗೂ ಮತದಾನದ ಹಕ್ಕು ದೊರೆತಿತ್ತು. ಆದರೆ ಈ ಪೈಕಿ 135 ಅನರ್ಹರು ಮತ ಚಲಾಯಿಸಿದ್ದರು. ಅನರ್ಹ ಮತದಾರರು ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಚುನಾವಣಾಧಿಕಾರಿಗಳು ಮತ ಎಣಿಕೆ ಮಾತ್ರ ಮಾಡಿ ಲಿತಾಂಶವನ್ನು ತಡೆಹಿಡಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net