ಪಿಂಚಣಿ ಅದಾಲತ್ ಉದ್ಘಾಟನೆ

2blrp4
Published on

ಬೇಲೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಲು ಅಧಿಕಾರಿಗಲಾಗಲಿ ಅಥವಾ ಸಿಬ್ಬಂಯಾಗಲಿ ಹಣದ ಬೇಡಿಕೆ ಇಟ್ಟರೆ ನೇರವಾಗಿ ನನ್ನನ್ನು ಸಂಪರ್ಕಿಸಿ ದೂರು ನೀಡಿದರೆ ಅಂಥವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು. ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಉದ್ಘಾಟಿಸಿ ಮಾತನಾಡಿ, ಪಿಂಚಣಿ ಯೋಜನೆ ಕಾರ್ಯಕ್ರಮದಲ್ಲಿ ತಾಲೂಕಿನ ಹೋಬಳಿವಾರು ರಾಜಸ್ವ ನಿರೀಕ್ಷಕರ ವೃತ್ತಗಳಲ್ಲಿ ಆಯೋಜಿಸಲಾಗಿದ್ದು, ಇದರಿಂದ ಸಂಧ್ಯಾಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಪಡೆಯುವ ಅರ್ಹ ಫಲಾನುಭವಿಗಳಿಗೂ ಹತ್ತಿರದಲ್ಲೇ ಎಲ್ಲ ಸೌಲಭ್ಯಗಳು ದೊರೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ಶಿರಸ್ತೇದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಕಾಶ್, ಪುರಸಭೆ ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಿಗ ಹನುಮಂತು, ನೌಕರ ದೇವರಾಜ್ ಇತರರು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net