ಹಾರೋಗೇರಿ: ಪಟ್ಟಣದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅಶೋಕ ಪ್ಲಾಜಾದಲ್ಲಿ ನೂತನವಾಗಿ ಪಾರ್ಶ್ವನಾಥ ತೀರ್ಥಂಕರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಚಿಕ್ಕೋಡಿ ಶಾಖೆಯನ್ನು ಧರೆಪ್ಪ ಚಂದ್ರಾಮ ಸದಲಗಿ ಮತ್ತು ಜಿನ್ನಪ್ಪ ಭೂಪಾಲ್ ಅಸ್ಕಿ ಶಾಖೆ ಉದ್ಘಾಟಿಸಿದರು. ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಭರತೇಶ ಬನವಣೆ, ಭೀಮು ಬದ್ನಿಕಾಯಿ, ಸಿದ್ದಪ್ಪ ನಾಗನೂರ, ಬಾಬು ಹಳ್ಳೂರ, ಧನಪಾಲ ಶಿರಹಟ್ಟಿ, ಶಾಂತಿನಾಥ ಅಸ್ಕಿ ಇತರರು ಇದ್ದರು.