ಪಾಕಿಸ್ತಾನ ಧ್ವಜಾರೋಹಣ ವಿಡಿಯೋ ಶೇರ್

15 svr 02
Published on

ಸವಣೂರ: ಪಾಕಿಸ್ತಾನದಲ್ಲಿ ಧ್ವಜಾರೋಹಣ ಮಾಡಿದ ವಿಡಿಯೋ ಒಂದನ್ನು ತಾಲೂಕಿನ ಕಾರಡಗಿ ಗ್ರಾಮದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಘಟನೆ ಶನಿವಾರ ನಡೆದಿದೆ.

ಗ್ರಾಮದ ಮಲ್ಲಿಕರೆಹಾನ್ ಹುಲಗೂರ ಎಂಬಾತನೇ ವಿಡಿಯೋ ಶೇರ್ ಮಾಡಿದ ಯುವಕ. ಪಾಕಿಸ್ತಾನದಲ್ಲಿನ ಶಾಲೆಯ ಎದುರಲ್ಲಿ ಧ್ವಜಾರೋಹಣ ನೆರವೇರಿಸಿದ ವಿಡಿಯೋ ಶೇರ್ ಮಾಡುವ ಮೂಲಕ ಭಾರತೀಯರ ಮನಸ್ಸಿಗೆ ನೋವುನ್ನುಂಟು ಮಾಡಿ, ಸಮುದಾಯಗಳ ಮಧ್ಯೆ ಶಾಂತಿ ಕದಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ, ಆತನ ವಿರುದ್ಧ ಗ್ರಾಮದ ಗದಿಗೆಪ್ಪ ಕುರುವತ್ತಿ ಎಂಬುವರು ಸವಣೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net