

ಬೆಂಗಳೂರು
ಅಭ್ಯರ್ಥಿಗಳ ಅನುಕೂಲಕ್ಕಾಗಿ ಅ.4ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಗೆ ಪರೀಕ್ಷಾ ಕೇಂದ್ರ ಬದಲಾವಣೆ ಬಯಸುವವರಿಗೆ ಅವಕಾಶ ಕಲ್ಪಿಸಿದೆ.
ಕರೊನಾ ಕಾರಣದಿಂದಾಗಿ ತಮ್ಮ ಮೂಲ ಜಿಲ್ಲೆಗಳಿಗೆ ಹಿಂತಿರುಗಿರುವ ವಲಸಿಗರು, ಗರ್ಭಿಣಿಯರು, ಪ್ರವಾಹ ಸೇರಿದಂತೆ ಕೆಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಬದಲಾವಣೆಗಾಗಿ ಮನವಿ ಸಲ್ಲಿಸಿದ್ದು, ಅವರಿಗೆ ಕೇಂದ್ರ ಬದಲಾವಣೆ ಮಾಡಲಾಗಿದೆ. ಇದೇ ರೀತಿ ಕೇಂದ್ರದ ಬದಲಾವಣೆ ಬಯಸುವವರು ಅ.2 ರಾತ್ರಿ 12ಗಂಟೆಯ ಒಳಗೆ ತಮ್ಮ ಮನವಿಯನ್ನು ಸಲ್ಲಿಸಬೇಕು. ಆನಂತರ ಬರುವ ಮನವಿಯನ್ನು ಪರಿಗಣಿಸುವುದಿಲ್ಲವೆಂದು ಕೇಂದ್ರೀಯ ದಾಖಲಾತಿ ಘಟಕ ಸ್ಪಷ್ಟವಾಗಿ ತಿಳಿಸಿದೆ.