ಪರಮೇಶ್ವರ ಭಟ್ ನವೋದಯ ಕಾಲದ ವಿದ್ವಾಂಸ

24 nrp 1kasapa
ಎನ್.ಆರ್.ಪುರ ತಾಲೂಕು ಕಸಾಪ ಆಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜೇಸಿ ಸ್ಥಾಪಕ ಅಧ್ಯಕ್ಷ ದಿನೇಶ್ ಉದ್ಘಾಟಿಸಿದರು. ವಿ.ಎಸ್.ಕೃಷ್ಣ ಭಟ್,ಎಚ್.ಎಸ್.ಪೂರ್ಣೇಶ್, ಭಾಗ್ಯಾ ನಂಜುಂಡಸ್ವಾಮಿ, ಜುಬೇದಾ, ಎನ್.ಎಂ.ಕಾಂತರಾಜ್, ನಂದಿನಿ ಆಲಂದೂರು, ನಾಗರಾಜ್ ಇದ್ದರು.
Published on

ಎನ್.ಆರ್.ಪುರ: ಕವಿ ಪರಮೇಶ್ವರ ಭಟ್ ಕನ್ನಡ ನವೋದಯ ಕಾಲದ ವಿದ್ವಾಂಸ. ಅಲ್ಲದೆ ಬರಹಗಾರರು, ಉತ್ತಮ ವಾಗ್ಮಿಯೂ ಆಗಿದ್ದರು ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ತಿಳಿಸಿದರು.

ತಾಲೂಕು ಕಸಾಪ ಆಶ್ರಯದಲ್ಲಿ ಎಚ್.ಎಸ್.ಚಂದ್ರಶೇಖರ್ ಮನೆಯ ಅಂಗಳದಲ್ಲಿ ಎಚ್.ಸೂರ್ಯನಾರಾಯಣ ರಾವ್ ಕಮಲಮ್ಮ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕವಿ ಎಸ್.ವಿ.ಪರಮೇಶ್ವರ ಭಟ್ ಅವರ ಬದುಕು, ಸಾಹಿತ್ಯ ಮತ್ತು ಚಿಂತನೆ ಕುರಿತು ಉಪನ್ಯಾಸ ನೀಡಿದರು.

ಪರಮೇಶ್ವರ ಭಟ್ ಸಂಸ್ಕೃತದ ಮಹಾಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರು ಬರೆದ ಕಾವ್ಯ, ನಾಟಕ, ಗೀತೆ, ವಚನ, ಗಾದೆಗಳು, ಒಗಟುಗಳು ಎಲ್ಲವೂ ಕನ್ನಡ ಸಾಹಿತ್ಯ ರಂಗಕ್ಕೆ ದೊಡ್ಡ ಕೊಡುಗೆಯಾಗಿವೆ. ರಾಗಿಣಿ, ಗಗನಚುಕ್ಕಿ, ಕೃಷ್ಣ ಮೇಘ ಅವರ ಪ್ರಮುಖ ಕವನ ಸಂಗ್ರಹವಾಗಿದೆ. ಉಪ್ಪು ಕಡಲು, ಪಾಮರ ಅವರ ವಚನ ಸಂಗ್ರಹವಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ದತ್ತ್ತಿ ಉಪನ್ಯಾಸವು ಕನ್ನಡ ಸಾಹಿತ್ಯ ಪರಿಷತ್‌ನ ಒಂದು ಅವಿಭಾಜ್ಯ ಅಂಗ. ಈಗಾಗಲೇ ಕಸಾಪದಿಂದ ದತ್ತಿ ಉಪನ್ಯಾಸ, ಒಗಟು ಸ್ಪರ್ಧೆ, ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ, ತಾಲೂಕು ಸಮ್ಮೇಳನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣ ಭಟ್ ಮಾತನಾಡಿ, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸಿ ಆಶಯದಂತೆ ಕನ್ನಡ ತಾಯಿಯ ಆರಾಧನೆ ಮಾಡುವ ಹಾಗೂ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕನ್ನಡಕ್ಕಾಗಿ ಶ್ರಮಿಸಿದ ಲೇಖಕರು, ಕವಿಗಳು, ನಾಟಕಗಾರರನ್ನು ಸ್ಮರಿಸುವ ಉದ್ದೇಶದಿಂದ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗುವುದು ಎಂದರು.

ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಕೃಷ್ಣಮೂರ್ತಿ, ಕಸಾಪ ಹೋಬಳಿ ಘಟಕದ ಮಾಜಿ ಅಧ್ಯಕ್ಷೆ ಜುಬೇದಾ, ಹಿರಿಯ ಸಾಹಿತಿ ಜಯಮ್ಮ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಜೇಸಿ ಸ್ಥಾಪಕ ಅಧ್ಯಕ್ಷ ದಿನೇಶ್, ಕಸಾಪ ಜಿಲ್ಲಾ ಸಂಚಾಲಕ ನಂಜುಂಡಪ್ಪ, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net