ಪತ್ನಿಯ ಕತ್ತು ಸೀಳಿ ಕೊಲೆ

16 TKE 3A (RAMESHA)
16 ಟಿಕೆಇ 3ಎ: ರಮೇಶ
Published on

ತರೀಕೆರೆ: ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ಪತಿಯೇ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಧಾರುಣವಾಗಿ ಹತ್ಯೆ ಮಾಡಿದ್ದಾನೆ. ಹಿರೇಕಾನವಂಗಲ ಗ್ರಾಮದ ತನುಜಾ ಕೊಲೆಯಾದ ದುರ್ದೈವಿ.

ಹಿರೇಕಾನವಂಗಲ ಗ್ರಾಮದ ರಮೇಶ್ (38) ಅರಸೀಕೆರೆ ತಾಲೂಕಿನ ಜಾವಗಲ್ ಸಮೀಪದ ಗುಡ್ಡೇದಹಳ್ಳಿ ನಿವಾಸಿ ಪುಪ್ಪಣ್ಣ ಎಂಬುವವರ ಪುತ್ರಿ ತನುಜಾ ಎಂಬುವರನ್ನು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ. ಇಬ್ಬರಲ್ಲಿ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಆಗಾಗ ಜಗಳ ನಡೆದು ತನುಜಾಳು ಪತಿ ರಮೇಶ್, ಅತ್ತೆ, ಮಾವ, ನಾದಿನಿ ಇತರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೆ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಹಿರೇಕಾನವಂಗಲದ ತೋಟದ ಮನೆಯಲ್ಲೇ ವಾಸವಾಗಿದ್ದ ತನುಜಾ ಜತೆ ಹೊಂದಾಣಿಕೆಯಿಂದಲೇ ಜೀವನ ಸಾಗಿಸಿಕೊಂಡು ಹೋಗುವಂತೆ ನಟಿಸಿದ್ದ ಪತಿ ರಮೇಶ್ ಬುಧವಾರ ಸಂಜೆ ಪತ್ನಿ ತನುಜಾ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ.

ಅಜ್ಜಂಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಮೃತ ತನುಜಾ ತಂದೆ ಪುಪ್ಪಣ್ಣ ದೂರು ದಾಖಲಿಸಿದ್ದಾರೆ. ಕೊಲೆ ಆರೋಪಿ ರಮೇಶ್, ಆತನ ತಂದೆ ಪುಟ್ಟಪ್ಪ, ತಾಯಿ ಲಲಿತಮ್ಮ ಅವರನ್ನು ವಶಕ್ಕೆ ಪಡೆದಿದ್ದಾರೆ. ದಂಪತಿಗೆ ಮಗುವೊಂದಿದ್ದು, ತಾಯಿ ಸಾವು ಮತ್ತು ತಂದೆ ಬಂಧನದಿಂದ ಅನಾಥವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net