ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿ ನೇಕಾರರ ಸಮುದಾಯದಲ್ಲಿ ೪೮ ಪಂಗಡಗಳಿದ್ದು, ೫೦ ಲಕ್ಷ ಜನಸಂಖ್ಯೆ ಇದ್ದಾರೆ. ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಸಮುದಾಯ ಇದ್ದು, ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಬೇಕು. ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮುದಾಯವನ್ನು ಎಲ್ಲಾ ತಾಲ್ಲೂಕುಗಳಲ್ಲಿ ಬೇರು ಮಟ್ಟದಿಂದ ಸಂಘಟನೆ ಮಾಡಬೇಕೆಂದು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವಿ.ರವೀAದ್ರ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬುಧವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದೇವರ ದಾಸಿಮಯ್ಯನವರ ೧೦೪೬ ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ದೇವರ ದಾಸಿಮಯ್ಯನವರು ೧೧ ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರ ಹಾಗೂ ಮಹರ್ಷಿಯಾಗಿದ್ದು, ಶಿವನ ಪರಮ ಭಕ್ತರಾಗಿದ್ದು, ರಾಮನಾಥ ಎಂಬ ಅಂಕಿತ ನಾಮದಿಂದ ತಮ್ಮ ವಚನಗಳನ್ನು ರಚಿಸಿ ಪ್ರಸ್ತುತ ಪಡಿಸುತ್ತಿದ್ದು, ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ದುರು ಎಂಬ ಬಿರುದುಗಳನ್ನು ಸಹ ಪಡೆದಿದ್ದರೆಂದು ವಿವರಿಸಿದರು.
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ತಮ್ಮ ಕುಟುಂಬ ಸಮೇತರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾದಾಗ ಮಾತ್ರ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಾಗೂ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸರ್ಕಾರ ನಮಗೆ ವರ್ಷಕ್ಕೆ ಒಮ್ಮೆ ದೇವರ ದಾಸಿಮಯ್ಯನವರ ಜಯಂತಿಯನ್ನು ಮಾಡಲು ಅವಕಾಶ ಕಲ್ಪಿಸಿದ್ದು, ಅದರ ಸದುಪಯೋಗ ಪಡೆದು ಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗ್ರೇಡ್ ೨ ಅನ್ಸಾ ಮರಿಯಾ ಭಾಗವಹಿಸಿ ದಾಸಿಮಯ್ಯನವರ ಜಯಂತಿಗೆ ಶುಭಕೋರಿದರು.
ಪ್ರಶಸ್ತಿ ಪುರಸ್ಕೃತರಾದ ಜ್ಞಾನ ಮೂರ್ತಿಗಳಿಂದ ದೇವರ ದಾಸೀಮಯ್ಯನವರ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಸಪ್ತಸ್ವರ ಕಲಾ ಕೇಂದ್ರದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯ ಲಕ್ಷ್ಮಿ, ಸಮುದಾಯದ ಹಿರಿಯ ಮುಖಂಡ ವೆಂಕಟರಮಣಪ್ಪ, ಕಲಾವಿದ ಶ್ರೀನಿವಾಸ್, ಸುಲ್ತಾನ್ ರವಿಕುಮಾರ್, ನವರತ್ನ ಕುಮಾರ್ ಹಾಗೂ ಕಲಾವಿದ ವೆಂಕಟಾಚಲಪತಿ ಉಪಸ್ಥಿತರಿದ್ದರು.
ಚಿತ್ರ ೦೨ ಕೆ.ಎಲ್.ಆರ್. ೦೩ : ನಗರದ ಟಿ ಚೆನ್ನಯ್ಯ ರಂಗಮAದಿರದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯನವರ ೧೦೪ ೬ ಜಯಂತಿಯ ಕಾರ್ಯಕ್ರಮದ ಉದ್ಘಾಟನೆಯನ್ನು ಬುಧವಾರ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ. ವಿ.ರವೀಂದ್ರ ನೆರವೇರಿಸಿದರು. ಗ್ರೇಡ್ ಟು ತಹಸಿಲ್ದಾರ್ ಅನ್ಸಾ ಮರಿಯ ಇದ್ದರು.