

ಸರಗೂರು: ತಾಲೂಕಿನ ಹೊಸಬೀರ್ವಾಳು ಗ್ರಾಮದ ಮುಖಂಡರು ಹಾಗೂ ಯುವಕರು ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ನುಗು ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದರು.
ನಗು ಜಲಾಶಯದ ಸುತ್ತಮುತ್ತಲಿನ ಗ್ರಾಮದವರು ಹಳೆಯ ಬಟ್ಟೆಗಳನ್ನು ನೀರಿನಲ್ಲಿ ಬಿಟ್ಟಿದ್ದರ ಪರಿಣಾಮ ಅಲ್ಲಿನ ಪರಿಸರ ಹಾಳಾಗಿತ್ತು. ಗ್ರಾಮದ ಮುಖಂಡರ ನೇತೃತ್ವದಲ್ಲಿ ಯುವಕರು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಭಾನುವಾರ ಮುಂಜಾನೆಯಿಂದ ಈ ಸ್ವಚ್ಛತಾ ಕಾರ್ಯ ನಡೆಸಿದರು. ನಾಲ್ಕರಿಂದ ಐದು ಟ್ರಾೃಕ್ಟರ್‌ಗಳಲ್ಲಿ ತುಂಬುವಷ್ಟು ಹಳೆಯ ಬಟ್ಟೆಗಳ ರಾಶಿ ಸಂಗ್ರಹವಾಯಿತು. ಬಳಿಕ ಈ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.
ಗ್ರಾಮದ ಮುಖಂಡ ಮಹೇಶ್ ಮಾತನಾಡಿ, ಪ್ರಮುಖ ಜಲಮೂಲವಾದ ನುಗು ಜಲಾಶಯದ ಸುತ್ತಮುತ್ತಲ ಪ್ರದೇಶ ಹಾಗೂ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು. ಈ ಕಾರ್ಯ ಒಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರು ಕೈಜೋಡಿಸಿದಾಗ ಬದಲಾವಣೆ ಸಾಧ್ಯ ಎಂದರು. ಗ್ರಾಮದ ಮುಖಂಡರಾದ ಸಂತೋಷ್, ಪ್ರಸಾದ್, ಕುಮಾರ್, ಶಿವು, ದಚ್ಚು, ಚಂದು, ಅಜಯ್, ಸಂಜು, ಸಿದ್ದು, ಕೆಂಪಾಚಾರಿ, ಶಿವಣ್ಣ, ನಾರಾಯಣ ಇತರರು ಇದ್ದರು.