ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ಪುಸ್ತಕ ಸಂತೆ

Published on

 ಹಾಸನ:ವೀರಲೋಕ ಪುಸ್ತಕ ಸಂತೆ 2ನೇ ವರ್ಷದ ಕಾರ್ಯಕ್ರಮ ನ. 15, 16, 17 ರಂದು ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ ಎಂದು ವೀರಲೋಕ ಪ್ರತಿಷ್ಠಾನದ ಜಿಲ್ಲಾ ಶಾಖೆ ಮುಖ್ಯಸ್ಥ ರಾಘವಾಚಾರ್ ತಿಳಿಸಿದರು.

ವಿಷಯಕ್ಕನುಗುಣವಾಗಿ ಓದುವ ಅಭ್ಯಾಸ ಹೆಚ್ಚಿಸುವ ಮತ್ತು ಕನ್ನಡ ಪುಸ್ತಕ ಸಂಸ್ಕೃತಿ ಇಮ್ಮಡಿಗೊಳಿಸುವ ಉದ್ದೇಶದಿಂದ ವೀರಲೋಕ

ನೇತೃತ್ವದಲ್ಲಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಸಹಕಾರದೊಂದಿಗೆ ಆಯೋಜಿಸಲ್ಪಟ್ಟಿರುವ ವೀರ ಲೋಕ ಪುಸ್ತಕ ಸಂತೆ ಅತ್ಯಂತ ಮಹತ್ವದ ಯೋಜನೆ ಗುರುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ವೀರಲೋಕ ಸಂಸ್ಥೆ ಕಳೆದ 2 ವರ್ಷಗಳಿಂದ ಅನೇಕ ಸಾಹಿತ್ಯ ಕಾರ್ಯಕ್ರಮ ಮತ್ತು ವಿನೂತನ ಯೋಜನೆ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಅಂಥಹ ಕಾರ್ಯಕ್ರಮಗಳಲ್ಲಿ ಈ ಪುಸ್ತಕ ಸಂತೆ ಅತ್ಯಂತ ಮಹತ್ವವಾದುದು. ನಾಡಿನ ಹಲವು ಗಣ್ಯರು ಪುಸ್ತಕ ಸಂತೆ ಉದ್ಘಾಟನೆ ಮಾಡುವರು ಎಂದರು.

ಈ ಪುಸ್ತಕ ಸಂತೆಯ ವಿಶೇಷತೆ ಏನೆಂದರೆ 3 ದಿನ ನಡೆಯುವ ಸಂತೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ನೂರಕ್ಕೂ ಹೆಚ್ಚು ಪ್ರಕಾಶಕರು ಬರಲಿದ್ದಾರೆ. ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಇರುತ್ತದೆ. ಪುಸ್ತಕ ಮಳಿಗೆ ಹೊರತುಪಡಿಸಿ. ನೂರರಷ್ಟು ಪುಸ್ತಕೇತರ ಮಳಿಗೆ ಇರಲಿವೆ. ಈ ಸಂತೆಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಟದ ಮತ್ತು ಮನೋರಂಜನೆಯ ಪರಿಕರಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮದಲ್ಲಿ ಸ್ವತಃ ಲೇಖಕರೇ ಹಾಜರಿದ್ದು, ಓದುಗರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಪುಸ್ತಕದ ಬಗ್ಗೆ ಸಂವಾದ ನಡೆಸಿ, ಹಸ್ತಾಕ್ಷರ ಹಾಕಲಿದ್ದಾರೆ. ಮೂರು ದಿನವೂ ಪ್ರತಿ ಸಂಜೆ ಕ್ರಮವಾಗಿ ಜಾನಪದ ಗೀತೆ, ಸಂಜೆ ಚಲನಚಿತ್ರಗೀತೆ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಂತೆಯಲ್ಲಿ ವಿವಿಧ ಪ್ರಕಾರಗಳ 20 ಪುಸ್ತಕಗಳು ಲೋಕಾರ್ಪಣೆಯಾಗಲಿವೆ ಹಾಗೂ ಮೂರು ದಿನಗಳಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಈ ಸಂತೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಇದಿಷ್ಟೇ ಅಲ್ಲದೆ, ಇನ್ನೂ ಹೆಚ್ಚು ವಿಶೇಷತೆಗಳು ಈ ಪುಸ್ತಕ ಸಂತೆಯಲ್ಲಿ ಇರಲಿವೆ ಸಂತೆಗೆ ಹಾಸನ ಮತ್ತು ಸುತ್ತಮುತ್ತಲ ಜಿಲ್ಲೆಗಳ ಎಲ್ಲಾ ಸಾಹಿತ್ಯಾಸಕ್ತರು ಆಗಮಿಸುವ ಮೂಲಕ ಸಹಕಾರ ಕನ್ನಡ ಪುಸ್ತಕಲೋಕಕ್ಕೆ ಹೊಸ ಚೈತನ್ಯ ತಂದುಕೊಡುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ ವೆಂಕಟೇಶ್, ನಾಗೇಶ್, ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net