ನಾಳೆ ದೆಹಲಿಗೆ ರಥಯಾತ್ರೆ ಚಾಲನೆ

Published on

ಬೇಲೂರು: 

ದೇಶದಲ್ಲಿ ನದಿಗಳ ಜೋಡಣೆಗೆ ಯೋಜನೆ ರೂಪಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಲು ಮೇ 5 ರಿಂದ ದೆಹಲಿಗೆ ರಥಯಾತ್ರೆ ಹೊರಡಲಿದ್ದೇವೆ ಎಂದು ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕಂಚೇನಹಳ್ಳಿ ಪಟೇಲ್ ಪ್ರಸನ್ನ ಹೇಳಿದರು.

ದೇಶದಲ್ಲಿರುವ ಸುಮಾರು 400 ನದಿಗಳನ್ನು ಜೋಡಿಸಬೇಕೆಂದು ಈ ಹಿಂದೆ ದೇಶಾದ್ಯಂತ ಪ್ರವಾಸ ಮಾಡಿ ಪ್ರಧಾನಿಗೆ ಮನವಿ ಸಲ್ಲಿಸಿದ್ದೆವು. ಆ ಸಂದರ್ಭ ಎರಡು ರಾಜ್ಯಗಳಲ್ಲಿ ನದಿ ಜೋಡಣೆಯಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸು ನನಸು ಮಾಡಲು ಮತ್ತು ರೈತ ಸಂಘದ ಪ್ರೊ.ನಂಜುಂಡಸ್ವಾಮಿ ಅವರ ಹೋರಾಟದ ಫಲವಾಗಿ ಹೋರಾಟಕ್ಕೆ ಮುಂದಾಗಿದ್ದು, ದೇಶದ ಎಲ್ಲ ನದಿಗಳನ್ನು ಜೋಡಿಸಬೇಕೆಂದು ಆಗ್ರಹಿಸಿ ಮೇ 5 ರಂದು ಕಂಚೇನಹಳ್ಳಿಯಿಂದ ರಥಯಾತ್ರೆ ಹೊರಟು, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದ ಮೂಲಕ ಮೇ 13 ರಂದು ದೆಹಲಿ ತಲುಪಲಿದ್ದೇವೆ. ಮೇ 14 ರಂದು ನದಿ ಜೋಡಣೆಯ ಜತೆಗೆ ವಿವಿಧ 40 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗ್ಗೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಮಧ್ಯಾಹ್ನ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತ ಸಂಘದ ಸಂಚಾಲಕರ ಆಪ್ತ ಕಾರ್ಯದರ್ಶಿ ಏಜಾಸ್ ಪಾಷಾ, ರಾಜ್ಯ ಕಾರ್ಯದರ್ಶಿ ಅಬ್ದುಲ್ ಕುನ್ನಿ, ನಂಜಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net