ನಾಳೆ ಜಲ ಮಂಡಳಿವತಿಯಿಂದ ನೀರಿನ ಅದಾಲತ್

bwssb-4 JAN 20
Published on

ಬೆಂಗಳೂರು : ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತ್ತರ ಬಳಕೆ ಪರಿವರ್ತನೆಯಲ್ಲಿ ವಿಳಂಬ ಮತ್ತಿತರರ ಕುಂದುಕೊರತೆ ಸಂಬಂಧ ಸಮಸ್ಯೆಗಳನ್ನು ಬಗೆಹರಿಸಲು ಜಲಮಂಡಳಿ ಗುರುವಾರ (ಅ.8) ಬೆಳಗ್ಗೆ 9.30ರಿಂದ 11 ಗಂಟೆವರೆಗೆ ನೀರಿನ ಅದಾಲತ್ ಏರ್ಪಡಿಸಿದೆ.

ನಗರದ ಪೂರ್ವ, ಪಶ್ಚಿಮ, ದಕ್ಷಿಣ, ಅಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯ, ಕೇಂದ್ರ ಮತ್ತು ಉತ್ತರ ಉಪ ವಿಭಾಗ ವ್ಯಾಪಿಗೆ ಬರುವ ಬಡವಾಣೆಗಳಲ್ಲಿ ಅದಾಲತ್ ನಡೆಯಲಿದೆ. ಮಂಡಳಿ ಆರಂಭಿಸಿರುವ 24/7 ದೂರು ನಿರ್ವಹಣಾ ಕೇಂದ್ರ ದೂ:080-22238888, ಸಹಾಯವಾಣಿ 1916 ಹಾಗಾ ವಾಟ್ಸ್ಾ ಮೊ: 8762228888ಕ್ಕೆ ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net