ನಾಡ ಪಿಸ್ತೂಲ್ ಮಾರಾಟ, ಇಬ್ಬರ ಸೆರೆ

Pistol
Published on

ಬೆಂಗಳೂರು: ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದ ಬಿಹಾರ ಮೂಲದ ಸೋದರರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿ ನಿವಾಸಿಗಳಾದ ವಿದ್ಯಾನಂದ ಸಹನಿ (41), ಪ್ರೇಮ್ ಕುಮಾರ್ ಸಹನಿ (36) ಬಂಧಿತರು. ಆರೋಪಿಗಳಿಂದ 2 ದೇಶಿ ನಿರ್ಮಿತ ಪಿಸ್ತೂಲ್‌ಗಳು, 4 ಜೀವಂತ ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೊಪ್ಪ- ಬೇಗೂರು ರಸ್ತೆಯ ನೈಸ್ ರಸ್ತೆ ಸೇತುವೆ ಬಳಿ ರಾತ್ರಿ ಹುಳಿಮಾವು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.

ಈ ಮಾರ್ಗದಲ್ಲಿ ಬಂದ ಸಹನಿ ಸೋದರರ ಬೈಕ್ ಅಡ್ಡಗಟ್ಟಿ ಪರಿಶೀಲನೆಗೆ ಮುಂದಾದರು. ಆಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಶಕ್ಕೆ ಪಡೆದು, ವಿಚಾರಿಸಿದಾಗ ಪಿಸ್ತೂಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15 ವರ್ಷಗಳ ಹಿಂದೆ ನಗರಕ್ಕೆ ವಿದ್ಯಾನಂದ ಸಹನಿ ಬಂದಿದ್ದು, ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಬಿಹಾರದಲ್ಲಿ ಆತನ ಸೋದರ ಪ್ರೇಮ್ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಆತನ ಮೇಲೆ ಪಿಸ್ತೂಲ್ ಮಾರಾಟ ಸೇರಿ 4 ಪ್ರಕರಣ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net