ನಗರಸಭೆಯಲ್ಲಿ ಗುತ್ತಿಗೆ ನೌಕರರ ಕಾರುಬಾರು/ ಕೈ ಕಟ್ಟಿ ಕುಳಿತ ಕಮಿಷನರ್ / ಆಮ್ ಆದ್ಮಿ ರಮೇಶ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ನಗರಸಭೆಯ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಣದೆ ಬರೀ ಭ್ರಷ್ಟಚಾರದಲ್ಲೇ ಮುಳುಗಿ, ಜಿಡ್ಡು ಕಟ್ಟಿರುವ ಆಡಳಿತವನ್ನು ಸರಿಪಡಿಸುವತ್ತ ಮಾನ್ಯ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೋಲಾರ ನಗರವು ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಆಡಳಿತ ನಡೆಸುತ್ತಿರುವ ನಗರಸಭೆಯಲ್ಲಿ ಸುಮಾರು ವರ್ಷಗಳಿಂದ ಸರಿಯಾದ ಖಾಯಂ ನೌಕರರಿಲ್ಲದೆ ಬರೀ ಗುತ್ತಿಗೆ ನೌಕರರಿದ್ದು, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ, ಸುಖಾ ಸುಮ್ಮನೆ ಕಾಲಹರಣ ಮಾಡುತ್ತಾ, ಭ್ರಷ್ಟಚಾರದಲ್ಲೇ ಮುಳುಗಿ ಹೋಗಿದೆ ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಬಿಸಿಲಿನ ಬೇಗೆಯಲ್ಲಿ ರಸ್ತೆಗಳ ಮೇಲಿನ ದೂಳಿನಿಂದ ಜೀವನ ದೂಡುತ್ತಿದ್ದ ನಗರದ ಜನತೆ, ಈಗ ಮುಂಗಾರು ಮಳೆ ಶುರುವಾಗಿದ್ದು, ನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯಿಂದ ಬಿದ್ದ ನೀರು ರಸ್ತೆಗಳ ಮೇಲೆಲ್ಲಾ ಹರಿದು, ಈಗಾಗಲೇ ಹಾಳಾಗಿರುವ ರಸ್ತೆಗಳು ಇನ್ನಷ್ಟು ಹಳ್ಳ ಕೊಳ್ಳಗಳು ಬಿದ್ದು, ವಾಹನ ಸವಾರರಿಗೆ ಹಾಗೂ ನಗರದ ಜನತೆಗೆ ಕಿರಿಕಿರಿ ಉಂಟಾಗಿದೆ. ಇನ್ನಾದರು ಸಂಬAಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ, ಅನಾನುಕೂಲಗಳನ್ನು ಸರಿಪಡಿಸಬೇಕೆಂದು ಒತ್ತಾಯಪಡಿಸಿದ್ದಾರೆ,

ಚಿತ್ರ ೨೦ ಕೆ.ಎಲ್.ಆರ್. ೦೧ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಭಾವಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net