ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಯು.ಹೆಚ್.ಐ.ಡಿ. ಸಂಖ್ಯೆಗಾಗಿ ಸಮೀಕ್ಷೆಗೆ ತೆರಳಿರುವ ಶಿಕ್ಷಕರ ಪರದಾಟ / ಕ್ರಮಬದ್ಧವಾಗಿಲ್ಲದ ಯು.ಹೆಚ್.ಐ.ಡಿ. ಸಂಖ್ಯೆಗಳು / ಬೆಸ್ಕಾಂ ಎಡವಟ್ಟಿಗಾಗಿ ಶಿಕ್ಷಕರ ಪರದಾಟ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಬೆಸ್ಕಾಂ ಇಲಾಖೆಯಿಂದ ಮೆನಗಳಿಗೆ ನೀಡಿರುವ ಯು.ಹೆಚ್.ಐ.ಡಿ. ಸಂಖ್ಯೆಗಳು ಸಮೀಕ್ಷೆದಾರರಿಗೆ ಪತ್ತೆಯಾಗದ ಕಾರಣ ಪರದಾಡುವಂತಾಗಿದ್ದು, ಗಲ್ಲಿಗಲ್ಲಿಯು ಸುತ್ತುವಂತಾಗಿದೆ.

ಸಮೀಕ್ಷೆಗೆ ತೆರಳುವ ಮುನ್ನ ಬೆಸ್ಕಾಂ ಇಲಾಖೆಯವರು ಪ್ರತಿ ಮನೆಗೆ ಯು.ಹೆಚ್.ಐ.ಡಿ. ಸಂಖ್ಯೆಗಳನ್ನು ನೀಡಿದ್ದು, ಅದರ ಪ್ರಕಾರವೇ ಸಮೀಕ್ಷೆ ನಡೆಸಬೇಕಾಗುತ್ತದೆ. ಒಬ್ಬ ಶಿಕ್ಷಕರಿಗೆ ೧೫೦ ಮನೆಗಳ ಸಮೀಕ್ಷೆ ನಡೆಸಲು ತಿಳಿಸಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಒಂದು ಗ್ರಾಮದಲ್ಲಿ ೧೦೦ ಮನೆಯಿಂದ ೫೦೦ ಮನೆಗಳು ಇರುವುದರಿಂದ ಯು.ಹೆಚ್.ಐ.ಡಿ. ಸಂಖ್ಯೆಯನ್ನು ಪತ್ತೆ ಮಾಡಿ ಸಮೀಕ್ಷೆ ನಡೆಸಬಹುದು. ಆದರೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಈ ಮೂಲೆಯಿಂದ ಆ ಮೂಲೆಯ ತನಕ ಶಿಕ್ಷಕರು ಪ್ರತಿದಿನ ಅಲೆದಾಡುವಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ ಎಂಬುದು ಶಿಕ್ಷಕೆರ ಆರೋಪವಾಗಿದೆ.

ಎಷ್ಟೇ ಸಮಸ್ಯೆಗಳು ಎದುರಾದರೂ ಮೇಲಾಧಿಕಾರಿಗಳ ಗಮನಕ್ಕೆ ತರುವಂತಿಲ್ಲ. ನಮಗೆ ನೋಟಿಸ್ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಒಂದು ಬಿಲ್ಡಿಂಗ್‌ನಲ್ಲಿ ನಾಲ್ಕೆöÊದು ಮನೆಗಳು ಇರುತ್ತವೆ. ಯು.ಹೆಚ್.ಐ.ಡಿ. ನಂಬರ್‌ಗಳು ಬದಲಾವಣೆ ಆಗಿರುತ್ತವೆ. ಆ ಬಿಲ್ಡಿಂಗ್‌ಗೆ ನಾಲ್ಕೆöÊದು ಶಿಕ್ಷಕರು ಮನೆಗಳನ್ನು ಹುಡುಕಿ ಹೋಗಬೇಕಾಗುದ ಪರಿಸ್ಥಿತಿ ಉಂಟಾಗಿದೆ ಎಂದು ಹೆಸರು ಹೇಳದ ಮಹಿಳಾ ಶಿಕ್ಷಕರು ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದಾರೆ.

ಬೆಸ್ಕಾಂ ಇಲಾಖೆಯವರು ಬಡಾವಣೆಗಳಲ್ಲಿ ಕ್ರಮಬದ್ಧವಾಗಿ ಯು.ಹೆಚ್.ಐ.ಡಿ. ನಂಬರ್‌ಗಳನ್ನು ನೀಡಿದ್ದರೆ ಶಿಕ್ಷಕರು ಕ್ರಮಬದ್ಧವಾಗಿಯೇ ಮನೆಗಳನ್ನು ಸಮೀಕ್ಷೆ ನಡೆಸಲು ಅನುಕೂಲವಾಗುತ್ತದೆ. ದಿನನಿತ್ಯ ಪಟ್ಟಣ ಮತ್ತು ನಗರಗಳಲ್ಲಿ ಮನೆಗಳನ್ನು ಹುಡುಕಿ ಸಮೀಕ್ಷೆ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮಹಿಳಾ ಶಿಕ್ಷಕರಿಗಂತೂ ಸಮಸ್ಯೆ ಹೆಚ್ಚಾಗಿದೆ. ಕಂದಾಯ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬೆಸ್ಕಾಂ ಇಲಾಖೆಯ ಎಡವಟ್ಟಿನಿಂದಾಗಿ ಯು.ಹೆಚ್.ಐ.ಡಿ. ಸಂಖ್ಯೆಗಳು ಕ್ರಮಬದ್ಧವಾಗಿಲ್ಲ. ಹಾಗೂ ಶಿಕ್ಷಣ ಇಲಾಖೆಯ ಸಮಗ್ರ ಮಾಹಿತಿ ಕೊರತೆಯು ಎದ್ದು ಕಾಣುತ್ತಿದೆ. ಈ ಮಧ್ಯೆ ಸಮೀಕ್ಷೆಗೆ ತೆರಳುವ ಶಿಕ್ಷಕರು ಹೈರಾಣಾಗಿ ಹೋಗಿದ್ದಾರೆ.

ಮೇಲಧಿಕಾರಿಗಳ ಗಮನಕ್ಕೆ ತಂದತೆ ಶಿಕ್ಷಕರ ಮೇಲೆ ಕ್ರಮ ಆಗುತ್ತದೆಂದು ಹೆದರಿರುವ ಶಿಕ್ಷಕರು ಶಿಕ್ಷಕ ಸಂಘಟನೆಗಳ ಮತ್ತು ಸರ್ಕಾರಿ ನೌಕರರ ಸಂಘದ ಬಳಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಈ ಹಂತದಲ್ಲಿ ಸಂಘಟನೆಗಳವರು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ಮನೆಗಳ ಸಂಖ್ಯೆ ಈಗ ಕಡಿಮೆ ಇರುವ ಕಾರಣ ಬೆಸ್ಕಾಂ ಇಲಾಖೆಯು ನೀಡಿರುವ ಯು.ಹೆಚ್.ಐ.ಡಿ. ಸಂಖ್ಯೆಗಳು ಟ್ಯಾಲಿ ಆಗುತ್ತಿದೆ. ಆದರೆ ಸರ್ವರ್ ಸಮಸ್ಯೆ ಮಾತ್ರ ಅವರನ್ನು ಕಾಡುತ್ತಿದೆ. ಅದನ್ನೂ ನಿವಾರಿಸಲು ಸರ್ಕಾರ ಮುಂದಾಗಿದೆ. ಯು.ಹೆಚ್.ಐ.ಡಿ. ಸಮಸ್ಯೆಗಳಿಂದ ಸಮೀಕ್ಷೆಗೆ ಅಡಚಣೆಯುಂಟಾಗುತ್ತದೆAಬುದು ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ಅಳಲಾಗಿದೆ.

ಚಿತ್ರ ೩೦ ಕೆ.ಎಲ್.ಆರ್. ೦೨ : ಯು.ಹೆಚ್.ಐ.ಡಿ. ಸಂಖ್ಯೆಯ ಟ್ಯಾಲಿಗಾಗಿ ಮನೆಯಿಂದ ಮೆನಗೆ ಅಲೆದಾಡುತ್ತಿರುವ ಶಿಕ್ಷಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net