ನಕಲಿ ದಾಖಲೆಗಳ ಸೃಷ್ಟಿಸಿ ಮಾದಿಗ ಇನಾಂತಿ ಜಮೀನು ಕಬಳಿಕೆ / ಕ್ರಮಕ್ಕೆ ಆದಿಜಾಂಭವ ಸಂಘಟನೆಯಿAದ ಪ್ರತಿಭಟನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬುವಾರಪಲ್ಲಿ ಗ್ರಾಮದಲ್ಲಿನ ಸುಮಾರು ೪೮ ಎಕರೆಯ ಊರ ಮಾದಿಗ ಇನಾಂತಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಮೋಸ ಮಾಡಿರುವ ಅಧಿಕಾರಿಗಳು ಹಾಗೂ ಪ್ರಭಾವಿ ಮುಖಂಡ ಜಿ.ಆರ್ ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಆದಿಜಾಂಭವ ಚಾರಿಟೇಬಲ್ ಟ್ರಸ್ಟ್ ಹಾಗೂ ಸೇವಾ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸರ್ಕಾರವು ಸುಮಾರು ೭೫ ವರ್ಷಗಳ ಹಿಂದೆಯೇ ದಲಿತ ಕುಟುಂಬಗಳ ಅಭಿವೃದ್ಧಿಗಾಗಿ ಜಿಲ್ಲೆಯ ನೆಲವಂಕಿ ಹೋಬಳಿಯ ನಂಬುವಾರಪಲ್ಲಿ ಗ್ರಾಮದ ಸರ್ವೆ ನಂ ೨೩, ೨೬, ೨೭, ೨೮ ಹಾಗೂ ೩೯ ರಲ್ಲಿ ೪೮ ಎಕರೆ ಜಮೀನನ್ನು ತಾಲೂಕಿನ ಗ್ರಾಮದಲ್ಲಿ ಇನಾಂತಿ ನೌಕರರಿ ಮಾಡುವ ನಾಲ್ಕು ಕುಟುಂಬಗಳಿಗೆ ಸರ್ಕಾರವೇ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಅಂದಿನಿAದ ವ್ಯವಸಾಯವನ್ನು ಮಾಡಿಕೊಂಡು ಜೀವನ ನಡೆಸುತ್ತಾ ಇದ್ದು ಈ ಜಮೀನಿಗೆ ಪ್ರಭಾವಗಳು ಕಣ್ಣು ಬಿದ್ದಿದ್ದು ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಮಾದಿಗ ದಂಡೋರದ ರಾಜ್ಯ ಗೌರವ ಅಧ್ಯಕ್ಷ ಹಾರೋಹಳ್ಳಿ ಎಂ.ರವಿ ಆರೋಪಿಸಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೊರವಿಮಾಕಲಹಳ್ಳಿಯ ಬಲಾಢ್ಯ ಸಮುದಾಯದ ಜಿ.ಆರ್ ಸುರೇಶ್ ಎಂಬುವವರು ಅಧಿಕಾರಿಗಳಿಗೆ ಲಂಚ ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಇವತ್ತು ನಮ್ಮಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ. ಕೇಳಿದರೆ ಪ್ರಾಣ ತೆಗೆಯುತ್ತೇನೆ ಎಂದು ರಾಜಾರೋಷವಾಗಿ ಬೆದರಿಕೆ ಹಾಕಿದ್ದಾರೆ. ಹಣಬಲ ಮತ್ತು ರಾಜಕೀಯ ಬಲದಿಂದ ನಮ್ಮ ಜಮೀನನ್ನು ಕಳಬಳಿಸಲು ಮುಂದಾಗಿದ್ದು, ಅವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಹೂಹಳ್ಳಿ ಕೃಷ್ಣಪ್ಪ ಮಾತನಾಡಿ, ದಲಿತ ಜಮೀನು ಕಬಳಿಸಲು ಮುಂದಾಗಿರುವ ಜಿ.ಆರ್ ಸುರೇಶ್ ಸೃಷ್ಟಿಸಿರುವ ನಕಲಿ ದಾಖಲೆಗಳನ್ನು ರದ್ದು ಮಾಡಬೇಕು. ಜೊತೆಗೆ ಅವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಜೊತೆಗೆ ಅ ಜಮೀನನ ನೈಜ ಪಲಾನುಭವಿಗಳಿ ಕುಟುಂಬಗಳಿಗೆ ಊರು ಮಾದಿಗ ಇನಾಂತಿ ಜಮೀನನ್ನು ಮರು ಮಂಜೂರು ಮಾಡಬೇಕು ಜೊತೆಗೆ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮನವಿ ಸ್ವೀಕರಿಸಿ ಕೂಡಲೇ ಸಂಬAಧಿಸಿದ ಇಲಾಖೆಯ ಗಮನಕ್ಕೆ ತಂದು ಪರಿಶೀಲನೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸಲಾಗುತ್ತದೆ ಎಂದರು.

ಆದಿಜಾಂಭವ ಸಂಘಟನೆಯ ಮುಖಂಡರಾದ ಡಿ.ಶ್ರೀನಿವಾಸ್, ವೆಂಕಟೇಶ್, ಚನ್ನಸಂದ್ರ ಮುನಿರಾಜು, ಅಲೇರಿ ಮುನಿರಾಜು, ವೆಂಕಟರಮಣ, ತೂಪಲ್ಲಿ ಬಸವರಾಜ್, ದಿನ್ನೆ ಹೊಸಹಳ್ಳಿ ಅಂಜಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಮುನಿಯಪ್ಪ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೪ : ಮಾದಿಗ ಇನಾಂತಿ ಜಮೀನನ್ನು ಬಲಾಢ್ಯರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಕಬಳಿಸಿದ್ದಾರೆ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಆದಿಜಾಂಭವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಟನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net