ದೇಶದಲ್ಲಿ ಎನ್.ಡಿ.ಎ.ಗೆ ಹೆಚ್ಚು ಸ್ಥಾನಗಳು ಬರಬಹುದು / ಮುಂದಿನ ೫ ವರ್ಷಗಳಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ/ ಕಾಂಗ್ರೇಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಲೋಕಸಭಾ ಚುನಾವಣೆ ಬಗ್ಗೆ ವಿವಿಧ ಸಮೀಕ್ಷೆಗಳು ಬಹಿರಂಗಪಡಿಸಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಎನ್.ಡಿ.ಎ.ಗೆ ಹೆಚ್ಚು ಸ್ಥಾನಗಳು ಬರುತ್ತವೆಂಬ ಸಮೀಕ್ಷೆಗಳು ಹೇಳುತ್ತಿವೆ. ಈ ಬಾರಿಯ ಚುನಾವನೆಯಲ್ಲಿ ಎನ್.ಡಿ.ಎ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿ, ಮುಂದಿನ ೫ ವರ್ಷಗಳ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪರವಾಗಿ ಸೋಮವಾರ ಮತಯಾಚನೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶಿಕ್ಷಕರು ಬುದ್ಧಿವಂತರು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವಂತಹ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು. ಕಾಂಗ್ರೇಸ್ ಸರ್ಕಾರ ಇರುವುದರಿಂದ ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರೆ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತವೆಂದು ಕಾಂಗ್ರೇಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ರವರನ್ನು ಶಿಕ್ಷಕರು ಬೆಂಬಲಿಸಿದ್ದಾರೆ ಎಂದರು.

ಎಕ್ಸಿಟ್ ಫೋಲ್ ಸಮೀಕ್ಷೆ ಪ್ರಕಾರ ಎನ್.ಡಿ.ಎ.ಗೆ ಹೆಚ್ಚು ಸ್ಥಾನಗಳು ಬರುತ್ತಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ನಿಜ ಸುಳ್ಳು ಹೇಳುವ ಅವಶ್ಯಕತೆಯಿಲ್ಲ. ನಾನು ಕಾಂಗ್ರೇಸ್ ಶಾಸಕನಾಗಿದ್ದು, ವಾಸ್ತವಾಂಶವನ್ನು ಮರೆಮಾಚಲು ಸಾಧ್ಯವಿಲ್ಲ. ಮೊದಲಿನಿಂದಲೂ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅನುಮಾನವಿಲ್ಲ. ಆದರೆ ಕಾಂಗ್ರೇಸ್ ಪಕ್ಷ ಹೆಚ್ಚು ಕೆಲಸ ಮಾಡಿದೆ. ಮುಂದಿನ ೦೫ ವರ್ಷಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆದಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೇಸ್ ಗೆ ಸಮಾನ ಸ್ಥಾನಗಳು ಬರಲಿವೆ. ಕೋಲಾರ ಕ್ಷೇತ್ರದಲ್ಲಿ ೨೯ ಸಾವಿರ ಮತಗಳ ಅಂತರದಿAದ ಕಾಂಗ್ರೇಸ್ ಅಭ್ಯರ್ತಿ ಗೌತಮ್ ಗೆಲ್ಲಲಿದ್ದಾರೆ ಎಂದರು. ಇದು ಗ್ಯಾರಂಟಿ ಎಂದರು.

ಎಂ.ಎಲ್.ಸಿ. ಸ್ಥಾನಕ್ಕಾಗಿ ರಮಾಶ್ ಕುಮಾರ್ ಲಾಬಿ ನಡೆಸಿಲ್ಲ :
ರಮೇಶ್ ಕುಮಾರ್ ರವರು ಎಂ.ಎಲ್.ಸಿ.ಗಾಗಿ ಲಾಬಿ ನಡೆಸಿಲ್ಲ. ಅವರಿಗಾಗಿ ಶಾಸಕರೆಲ್ಲಾ ಸೇರಿ ನಾವು ಲಾಬಿ ನಡೆಸಿದೆವು. ಇದು ಪ್ರಯತ್ನ ಮಾತ್ರ, ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಸಿಗಲೂ ಬಹುದು. ನಾವು ಪ್ರಯತ್ನ ಮಾಡಿದ್ದೇವೆ ಅಸ್ಟೆ. ಒಂದು ತಪ್ಪಿದೆ ಎಂದರೆ ಮುಂದೆ ಒಂದು ಸ್ಥಾನ ಮಾನ ಸಿಗುತ್ತದೆ ಎಂಬ ನಂಬಿಕೆ ಇದೆ. ಆ ನಂಬಿಕೆ ಹುಸಿ ಆಗುವುದಿಲ್ಲ. ಕೋಲಾರಕ್ಕೆ ಮಂತ್ರಿ ಮಂಡಲ ವಿಸ್ತರಣೆಯಾದಲ್ಲಿ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ ಎಂದರು.

ಅಭಿವೃದ್ಧಿಗೆ ಒತ್ತು ನೀಡಲಾಗುವುದು :
ಮತ ಎಣಿಕೆ ಮುಗಿದ ನಂತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಕೋಲಾರದಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ರಸ್ತೆಗಳ ಅಭಿವೃದ್ಧಿಗಾಗಿ ೪೦ ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಜೂ.೬ ಕ್ಕೆ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ. ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲಾಗುವುದು ಎಂದರು.

ಇನ್ನು ಅಭಿವೃದ್ಧಿಯಾಗಬೇಕಾದ ರಸ್ತೆಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಅಧಿಕಾರಿಗಳು ಆ ಕೆಲಸವನ್ನು ಮಾಡುತ್ತಾರೆ. ವರ್ತುಲ ರಸ್ತೆಗೆ ನಾಗಲಾಪುರ ಗೇಟ್‌ನಿಂದ ಕಾಳಹಸ್ತಿಪುರ ಗೇಟ್ ತನಕ ಈಗಾಗಲೇ ಡಿಪಿಆರ್ ಮುಗಿದಿದೆ. ೧೦೦ ಕೋಟಿ ರೂ.ಗಳು ಇದಕ್ಕಾಗಿ ಸಿದ್ಧ ಇದೆ. ಕಾಳಹಸ್ತಿಪುರ ಗೇಟಿನಿಂದ ನಾಗಲಾಪುರ ಗೇಟ್ ತನಕ ೨ನೇ ರಸ್ತೆಗೆ ಡಿಪಿಆರ್. ಆಗಬೇಕಾಗಿದೆ. ಇದು ಶ್ರೀನಿವಾಸಪುರ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ ಸೇರಿಕೊಂಡು ವರ್ತುಲ ರಸ್ತೆ ನಿರ್ಮಾಣಗೊಳ್ಳುತ್ತದೆ. ಸರ್ವೇ ಕೆಲಸ ಮುಗಿದಿದೆ. ಜಮೀನು ಸ್ವಾಧೀನ ಕೆಲಸ ಆಗಬೇಕಾಗಿದೆ ಎಂದರು.

ಎಪಿಎಂಸಿಯಲ್ಲಿ ಎರಡು ಬಣಗಳ ಬಗ್ಗೆ ನಡೆಯುತ್ತಿರುವ ಜಗಳಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ೨ ಬಣಗಳ ಜಗಳ ಇತ್ಯರ್ಥಪಡಿಸುವ ಜವಾಬ್ದಾರಿ ಶಾಸಕರದ್ದಲ್ಲ, ಅದು ಅಲ್ಲಿನ ಲೋಕಲ್ ಸಮಸ್ಯೆ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು, ರೈತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಅಲ್ಲಿ ವರ್ತಕ ಸಮಸ್ಯೆ ಉಂಟಾಗಿದೆ. ಎಪಿಎಂಸಿ ಜಾಗಕ್ಕಾಗಿ ಈಗಾಗಲೇ ೨ ಜಾಗಳಲ್ಲಿ ಜಮೀನನ್ನು ಗುರ್ತಿಸಲಾಗಿದೆ. ಇದರಲ್ಲಿ ಚಲುವನಹಳ್ಳಿ ಬಳಿ ಇರುವ ಜಾಗವನ್ನು ಗುರ್ತಿಸಲಾಗಿದೆ ಎಂದರು.

ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ವೈ.ಶಿವಕುಮಾರ್, ಪ್ರಸಾದ್ ಬಾಬು ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net