ವಿಜಯವಾಣಿ ಸುದ್ದಿಜಾಲ ಕೋಲಾರ
ಯುವಕರು ಮತ್ತು ವಿದ್ಯಾರ್ಥಿಗಳು ಧೂಮಪಾನ, ಗುಟ್ಕಾ, ತಂಬಾಕು, ಗಾಂಜಾ, ಮದ್ಯ, ಹೇರೆನ್, ಕೊಕಾ ಮುಂತಾದ ಮಾದಕ ವಸ್ತುಗಳನ್ನು ಬಳಸುವ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿ, ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಕಾರಣರಾಗಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ತಿಳಿಸಿದರು.
ನಗರದ ಎಸ್‌ಎಫ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಈ ಜಲ-ಈ ನೆಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಎಸ್‌ಎಫ್‌ಎಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದುಶ್ಚಟಗಳಿಂದ ದೂರವಿರಿ ಓದುವುದೇ ನಿಮ್ಮ ಗುರಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವAತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.
ಚಾಕೋಲೇಟ್‌ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ, ಕೊನೆಗೆ ಅವರನ್ನು ಸಮಾಜ ಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿದರು.
ಮಾದಕ ವಸ್ತುಗಳ ಬಳಕೆ, ಸಾಗಾಣಿಕೆ, ಮಾರಾಟ ಇವುಗಳು ಕಾನೂನು ಬಾಹಿರ ಎನ್.ಡಿ.ಪಿ.ಎಸ್.ಕಾಯ್ದೆ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಇದಕ್ಕೆ ಅವಕಾಶ ಕಲ್ಪಿಸದಂತೆ ಕೋಟ್ಟಾ ಕಾಯಿದೆಯ ೨೦೦೩ರ ಕಾನೂನುಗಳನ್ನು ಪಾಲಿಸ ಬೇಕು. ೧೮ ರಿಂದ ೨೨ ವರ್ಷದ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಕಾರಾಗೃಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ ಎಂದರು.
ಹಣದ ಆಸೆಗಾಗಿ ರೈತರು ಸಹ ಗಾಂಜಾವನ್ನು ಬೆಳೆದು ಅಪರಾಧಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ, ವಿದ್ಯಾವಂತರು ಸಹ ಒತ್ತಡಗಳಿಂದ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಜೀವನ ಪರ್ಯಾಂತ ಮಾದಕ ವಸ್ತುಗಳ ಚಟದ ದಾಸರಾಗಿ ಕೊನೆಗೆ ಕ್ಯಾನ್ಸರ್ ಮುಂತಾದ ರೋಗಗಳಲ್ಲಿ ನರಳಾಡುವ ಮೂಲಕ ಅಂತ್ಯ ಕಾಣುವಂತಾಗುತ್ತಾರೆ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಎಫ್‌ಎಸ್ ಕಾಲೇಜಿನ ಕಾರ್ಯದರ್ಶಿ ಫಾದರ್ ವಿನೋದ್ ಕಾನತ್ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನೀವು ಇಲ್ಲಿ ಬದುಕು ರೂಪಿಸಿಕೊಳ್ಳುವ ಆಲೋಚನೆ ಮಾಡಿ, ಶ್ರಮವಹಿಸಿ ಓದಿ ಅದು ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.
ತಂಬಾಕು ನಿಯಂತ್ರಣ ಘಟಕದ ಆಪ್ತ ಸಮಾಲೋಚಕ ಪಿ.ಮೊಹಮ್ಮದ್ ಮಾತನಾಡಿ, ಶಾಲೆ ಕಾಲೇಜು ಆವರಣದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದೆ, ಒಂದೆರಡು ವರ್ಷ ಕಷ್ಟಪಟ್ಟು ಓದಿ ಇಡೀ ಜೀವನ ಸುಖಕರವಾಗಿರುವಂತೆ ಬಾಳಿ, ಕೇವಲ ಕ್ಷಣಿಕ ಸುಖದ ಆಸೆಗಾಗಿ ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನರಕವಾದೀತು ಎಂದರು.
ಕಾರ್ಯಕ್ರಮದಲ್ಲಿ ಈಜಲ-ಈನೆಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವೆಂಕಟಾಚಲಪತಿ, ಹಿರಿಯ ಉಪನ್ಯಾಸಕ ರವಿಚಂದ್ರ, ಸಂವಹನ ಸಂಸ್ಥೆಯ ಮಂಜುನಾಥ್ ಮತ್ತಿತರರು ಹಾಜರಿದ್ದರು.
ಚಿತ್ರ ೨೦ ಕೆ.ಎಲ್.ಆರ್. ೦೭ : ಕೋಲಾರದ ಎಸ್‌ಎಫ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ `ದುಶ್ಚಟಗಳಿಂದ ದೂರವಿರಿ ಓದುವುದೇ ನಿಮ್ಮ ಗುರಿ' ಕಾರ್ಯಾಗಾರ ಹಾಗೂ ಕಾನೂನು ಅರಿವು ಅಭಿಯಾನವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಉದ್ಘಾಟಿಸಿದರು.