ದುರಸ್ಥಿ ಕಾಣದ ಕೋಲಾರ ಬೇತಮಂಗಲ ರಸ್ತೆ / ವಾಹನ ಸವಾರರ ಹಿಡಿ ಶಾಪ / ಕೆಸರು ಗದ್ದೆಯಾದ ರಸ್ತೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರದಿಂದ ಬೇತಮಂಗಲಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಚಾಮರಹಳ್ಳಿಯಿಂದ ಹಲ್ಲಿಕುಂಟೆ ಮತ್ತು ಪಟ್ನ ತನಕ ರಸ್ತೆಯನ್ನು ದುರಸ್ಥಿಪಡಿಸುವ ಸಲುವಾಗಿ ಇರುವ ರಸ್ತೆಯನ್ನು ಅಗೆದು ಹಾಗಿಯೇ ಬಿಟ್ಟಿರುವುದರಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ನೀರು ಹೊರ ಹೋಗದೆ ರಸ್ತೆಯಲ್ಲಿಯೇ ನಿಂತಿದ್ದು, ವಾಹನ ಸವಾರರಿಗೆ ಮೃತ್ಯು ಕೂಪಕ್ಕೆ ಆಹ್ವಾನ ನೀಡಿದಂತೆ ಆಗಿದೆ.

ಕೋಲಾರದಿಂದ ಬೇತಮಂಗಲಕ್ಕೆ ಹೋಗುವ ರಸ್ತೆ ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು, ಈ ರಸ್ತೆಯ ಮೂಲಕ ಕೋಟಿಲಿಂಗೇಶ್ವರ, ಗುಟ್ಟಹಳ್ಳಿ ಮುಂತಾದ ಪ್ರಮುಖ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಇದಾಗಿದ್ದು, ಬೇತಮಂಗಲ ಹೋಬಳಿ ಕೇಂದ್ರವಾದರೂ ಈ ಹಿಂದೆ ವಿಧಾನಸಭಾ ಕ್ಷೇತ್ರವಾಗಿತ್ತು. ತಾಲ್ಲೂಕು ಕೇಂದ್ರದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಬೇತಮಂಗಲ ಪಟ್ಟಣದಲ್ಲಿ ಸಿಗುತ್ತಿದೆಯಲ್ಲದೆ ವ್ಯಾಪಾರ ವಹಿವಾಟು ಕೇಂದ್ರವೂ ಆಗಿವುದರಿಂದ ಕೋಲಾರದಿಂದ ಬೇತಮಂಗಲಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸುತ್ತಿವೆ.

ಜಿಲ್ಲೆಯ ಪ್ರಮುಖ ಜನಸಂದಣಿ ರಸ್ತೆಗಳಲ್ಲಿ ಈ ರಸ್ತೆಯೂ ಒಂದಾಗಿರುವುದರಿAದ ಸುಮಾರು ೦೨ ವರ್ಷಗಳಿಂದ ರಸ್ತೆ ದುರಸ್ಥಿಗೊಳ್ಳದೆ ಇರುವುದರಿಂದ ವಾಹನ ಸವಾರರು ಪ್ರತಿದಿನ ಬೇತಮಂಗಲಕ್ಕೆ ಹೋಗಬೇಕಾದರೆ ಅಂಗೈಯಲ್ಲಿ ಪ್ರಾಣವನ್ನು ಹಿಡಿದುಕೊಂಡು ಸಂಚರಿಸುವAತಹ ದುಸ್ಥಿಯಾಗಿದೆ.

ಕಳೆದ ೦೨ ವರ್ಷಗಳಿಂದ ದುರಸ್ಥಿ ನೆಪದಲ್ಲಿ ಅಲ್ಲಲ್ಲಿ ತೇಪೆ ಕಾರ್ಯ ಹಾಗೂ ಕೆಲವು ಭಾಗಗಳಲ್ಲಿ ಡಾಂಬರೀಕರಣ ಮಾಡಿದ್ದಾರೆ. ಉಳಿದ ಕಡೆ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ಲೋಕೋಪಯೋಗಿ ಇಲಾಖೆಯವರು ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನು ಮಾಡಿಲ್ಲ. ಚಾಮರಹಳ್ಳಿಯಿಂದ ಪಟ್ನ ತನಕ ನಾಲ್ಕು ಕಿ.ಮೀ. ರಸ್ತೆಯನ್ನು ದುರಸ್ಥಿಗೊಳಿಸುವ ನೆಪದಲ್ಲಿ ಇರುವ ಡಾಂಬರನ್ನು ತೆರವುಗೊಳಿಸಿ ೦೬ ತಿಂಗಳಾದರೂ ಡಾಂಬರೀಕರಣ ಮಾಡಿಲ್ಲ.

ಇತ್ತೀಚೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ಹಳ್ಳಿರಸ್ತೆಯಂತೆ ಆಗಿದ್ದು, ರಸ್ತೆ ಯಾವುದು ಗುಂಡಿ ಯಾವುದು ಎಂಬುದು ಗೊತ್ತಾಗದೆ ವಾಹನ ಸವಾರರು ಪ್ರತಿದಿನ ಕೆಸರಿನಲ್ಲಿ ಬಿದ್ದು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ರಸ್ತೆ ದುರಸ್ಥಿಗಾಗಿ ಒತ್ತಾಯಿಸಿ ರೈತ ಸಂಘಗಳು ಧರಣಿ ನಡೆಸಿ, ಪ್ರತಿಭಟಿಸಿದರು. ರಸ್ತೆ ದುರಸ್ಥಿಪಡಿಸುವುದಾಗಿ ಭರವಸೆ ನೀಡಿದ ಲೋಕೋಪಯೋಗಿ ಇಲಾಖೆಯವರಿಂದ ಇದುವರೆವಿಗೂ ರಸ್ತೆಯ ದುರಸ್ಥಿ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಕೋಟ್
ಗುತ್ತಿಗೆದಾರನಿಗೆ ನಡೆಸಿರುವ ಕಾಮಗಾರಿ ಹಣ ಬಿಡುಗಡೆಗೆ ವಿಳಂಭವಾಗಿದೆ. ಆದ್ದರಿಂದ ಹಣ ಇಲ್ಲ ಎಂದು ಹೆಡ್‌ಮಿಕ್ಸ್ ಹಾಕಿ ಡಾಂಬರೀಕರಣ ಹಾಕದೆ ಕಾಮಗಾರಿ ವಿಳಂಭ ಮಾಡಿದ್ದಾನೆ. ಜರೂರಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಅದಕ್ಕೆ ಒಪ್ಪಿಗೆ ನೀಡಿದ್ದಾನೆ. ಮಳೆ ನಿಂತ ನಂತರ ಡಾಂಬರೀಕರಣ ಮಾಡುತ್ತಾನೆ. ಸದ್ಯಕ್ಕೆ ಮಂಗಳವಾರದಿAದಲೇ ಗುಂಡಿ ಮುಚ್ಚುವ ಕೆಲಸ ಮಾಡಲು ಸೂಚಿಸಲಾಗಿದೆ.

-ರಾಮಮೂರ್ತಿ, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ.

ಚಿತ್ರ ೨೧ ಕೆ.ಎಲ್.ಆರ್. ೦೨ : ಕೋಲಾರ ಬೇತಮಂಗಲ ರಸ್ತೆಯ ಚಾಮರಹಳ್ಳಿಯಿಂದ ಪಟ್ನ ತನಕ ರಸ್ತೆ ದುರಸ್ಥಿ ಕಾಣದೆ ಇದ್ದು, ಹಳ್ಳಗಳಲ್ಲಿ ನೀರು ನಿಂತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net