ದುಡಿಯೋಣ ಬಾ ಅಭಿಯಾನ

21sri-1 narega
ಮೆಣಸೆ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಸೀಚೇತನ ಹಾಗೂ ದುಡಿಯೋಣ ಬಾ ಅಭಿಯಾನದ ಮಾಹಿತಿ ನೀಡಲಾಯಿತು. ಭಾಗ್ಯಾ, ಸೌಮ್ಯಾ, ಶಾಮಣ್ಣ, ಸಂಧ್ಯಾ ಇತರರಿದ್ದರು.
Published on

ಶೃಂಗೇರಿ: ತಾಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನರೇಗಾ ಯೋಜನೆಯಡಿ ಸೀಚೇತನ ಹಾಗೂ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಮೆಣಸೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಅತ್ಯುತ್ತಮ ಯೋಜನೆಯಾಗಿದೆ. ಬೇಸಿಗೆಯಲ್ಲಿ ನಿರಂತರ ಉದ್ಯೋಗ ನೀಡುವ ಯೋಜನೆಯನ್ನು ಅರ್ಹ ಕುಟುಂಬಗಳು ಪಡೆಯಬೇಕು. ಕೌಟುಂಬಿಕ ನಿರ್ವಹಣೆಗಾಗಿ ಮಹಿಳೆಯರು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಕೂಲಿ ಹಣ 370 ರೂ. ಆಗಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮನೆ ಮನೆಗೆ ತೆರಳಿ ನರೇಗಾ ಯೋಜನೆಯ ಮಾಹಿತಿ ನೀಡಲಾಯಿತು. ಅಭಿಯಾನದಲ್ಲಿ ಐಇಸಿ ಸಂಯೋಜಕಿ ಸೌಮ್ಯಾ, ಪಿಡಿಒ ಶಕುಂತಲಾ, ಸದಸ್ಯ ಶಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net