ದಕ್ಷಿಣಕಾಶಿ ಅಂತರಗAಗೆಯ ಶಿವ ಲಕ್ಷದೀಪೋತ್ಸವಕ್ಕೆ ಹರಿದು ಬಂದಭಕ್ತಸಾಗರ / ಕಾಶಿವಿಶ್ವೇಶ್ವರನ ತೆಪ್ಪೋತ್ಸವ / ದಾರಿಯುದ್ದಕ್ಕೂ ಕಂಡು ಬಂದ ಹಣತೆಗಳ ಸಾಲು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರದ ಹೊರವಲಯದ ಅಂತರಗAಗೆಯಲ್ಲಿ ಕೆಎಸ್‌ಆರ್‌ಪಿ ಪೇದೆ ಗೋಪಾಲ್ ಮತ್ತು ಕುಟುಂಬದವರು ಶುಕ್ರವಾರ ರಾತ್ರಿ ನಡೆಸಿಕೊಟ್ಟ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತ ಸಾಗರ ಸಾಕ್ಷಿಯಾಯಿತಲ್ಲದೇ ಬೆಟ್ಟದ ದಾರಿಯುದ್ದಕ್ಕೂ ಹಣತೆಗಳ ಸಾಲು ಶ್ರದ್ದಾಭಕ್ತಿಯ ಪ್ರತೀಕವಾಗಿ ಕಂಡು ಬಂತು.

ಅAತರಗAಗೆಯಲ್ಲಿ ಕಳೆದ ೧೮ ವರ್ಷಗಳಿಂದಲೂ ಅದ್ದೂರಿಯಾಗಿ ನಡೆಯುತ್ತಿರುವ ಶಿವ ಲಕ್ಷ ದೀಪೋತ್ಸವವನ್ನು ಇಲ್ಲಿನ ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಸಿಕೊಂಡು ಬರುತ್ತಿರುವ ಮುಖ್ಯಪೇದೆ ಬಿ.ಗೋಪಾಲ್ ಮತ್ತು ಕುಟುಂಬದವರು ಇದನ್ನು ಸಾರ್ವಜನಿಕ ಉತ್ಸವವನ್ನಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ತೆಪ್ಪೋತ್ಸವದ ಜತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವವನ್ನು ಸಹಾ ಏರ್ಪಡಿಸಿದ್ದು, ಜನರನ್ನು ಭಕ್ತಿಸಾಗರದಲ್ಲಿ ಮುಳುಗಿಸಿತ್ತು. ಬೆಳಗ್ಗೆ ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವನಿಗೆ ಪಂಚಾಮೃತ ಅಭಿಷೇಕದೊಂದಿಗೆ ಆರಂಭವಾದ ಪೂಜಾ ವಿಧಾನ ನಂತರ ಬೆಟ್ಟದಲ್ಲಿ ಕಾಶಿವಿಶ್ವೇಶ್ವರನಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಮುಂದುವರೆಯಿತು.

ಚಳಿಯ ನಡುವೆಯೂ ಅಂತರAಗೆಯ ಕ್ಷೇತ್ರವನ್ನು ಸಾವಿರಾರು ಭಕ್ತರು ಒಂದು ಸಾವಿರ ಕೆಜಿ ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ಬೆಳಗಿಸಿದ್ದು, ವಿಶೇಷ ಹೂವಿನ ಅಲಂಕಾರವನ್ನು ನಡೆಸಿದ್ದು, ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರAಗೆ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ವೀಕ್ಷಿಸಿದ ಸಹಸ್ರಾರು ಭಕ್ತರು ಶಿವನ ಕೃಪೆಗೆ ಪಾತ್ರರಾದರು.

ವಿಶಿಷ್ಟ ರೀತಿಯಲ್ಲಿ ಶಿವನಿಗೆ ಅಲಂಕಾರ :

ಪ್ರತಿ ವರ್ಷದಂತೆ ಈ ಬಾರಿಯೂ ಕಾಶಿ ವಿಶ್ವೇಶ್ವರಸ್ವಾಮಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಜನತೆ ಶ್ರದ್ದಾಭಕ್ತಿಗಳಿಂದ ನಮಿಸಿ ಸಂಭ್ರಮಿಸಿದರು.

ಶಿವ ಲಕ್ಷ ದೀಪೋತ್ಸವ, ತೆಪ್ಪೋತ್ಸವಕ್ಕೆ ನಾದಸ್ವರ ಮತ್ತು ಸ್ಯಾಕ್ಯೋಫೋನ್ ವಾದನದ ಹಿಮ್ಮೇಳ ಗಮನ ಸೆಳೆಯಿತು. ಜತೆಗೆ ಭಜನೆ, ಹಾಡುಗಾರಿಕೆಯೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಮಧ್ಯರಾತ್ರಿ ೧ ಗಂಟೆಯವರೆಗೂ ನಡೆದ ನಾದಸ್ವರ ಮತ್ತಿತರ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದ್ದು, ಇಡೀ ಅಂತರಗAಗೆ ಹಣತೆಗಳಿಂದ ಕಂಗೊಳಿಸುತ್ತಿತ್ತು.

ಸAಜೆ ಆರು ಗಂಟೆಯಿAದಲೂ ಅಂತರAಗೆ ಬೆಟ್ಟದತ್ತ ತೆರಳಿದ ಭಕ್ತರ ಸಮೂಹವನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುವಂತಾಯಿತು. ಶಿವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಗಳಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಚಿತ್ರ ೧೪ ಕೆ.ಎಲ್.ಆರ್. ೦೨ : ಕೋಲಾರ ದಕ್ಷಿಣ ಕಾಶಿ ಖ್ಯಾತಿಯ ಅಂತರಗAಗೆ ಕಾಶೀ ವಿಶ್ವೇಶ್ವರ ಸನ್ನಿಧಿಯಲ್ಲಿ ನಡೆದ ಶಿವ ಲಕ್ಷ ದೀಪೋತ್ಸವದಲ್ಲಿ ದೀಪಗಳಿಂದ ಕಂಗೊಳಿಸುತ್ತಿರುವ ಶಿವನ ಸನ್ನಿಧಿ, ಕಲ್ಲಿನ ಬಸವನಿಂದ ನೀರು ಬರುವ ಅಂತರಗAಗೆಯ ವೈಭವ.

ಚಿತ್ರ ೧೪ ಕೆ.ಎಲ್.ಆರ್. ೦೨ಎ : ಕೋಲಾರ ದಕ್ಷಿಣ ಕಾಶಿ ಖ್ಯಾತಿಯ ಅಂತರಗAಗೆ ಕಾಶೀ ವಿಶ್ವೇಶ್ವರ ಸನ್ನಿಧಿಯಲ್ಲಿ ನಡೆದ ಶಿವ ಲಕ್ಷ ದೀಪೋತ್ಸವದ ಹಿನ್ನಲೆಯಲ್ಲಿ ಶಿವನಿಗೆ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net