ತೇಜಸ್ವಿನಿ ಮೇಟಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್

Published on

ಬಾಗಲಕೋಟೆ: ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ತೇಜಸ್ವಿನಿ ಮೇಟಿ, ಚಿತ್ರದುರ್ಗದಲ್ಲಿ ನಡೆÀದ ಪದವಿ ಹಂತದ ೨೦೨೩-೨೪ ನೇ ಸಾಲಿನ ರಾಜ್ಯಮಟ್ಟದ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾಳೆ.

ವಿದ್ಯಾರ್ಥಿನಿಯನ್ನು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎನ್. ಅಥಣಿ ,ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಗುರುಬಸವ ಎಸ್ .ಸುಳಿಭಾವಿ ಆಡಳಿತ ಅಧಿಕಾರಿಗಳಾದ ಡಾ. ವಿ. ಎಸ್. ಕಟಗಿಹಳ್ಳಿಮಠ ಮುಖ್ಯ ಸಲಹೆಗಾರರಾದ ಡಾ. ಮೀನಾ ಆರ್. ಚಂದಾವರಕರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎಸ್. ಜೆ .ಒಡೆಯರ ಹಾಗೂ ಎಲ್ಲ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net