‘ತಿಂಗಳ ತಿಳಿವು’ ಸಂಚಿಕೆ-15 ಕಾರ್ಯಕ್ರಮ

17
Published on

ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ವತಿಯಿಂದ ರಾಮಕೃಷ್ಣ ವೃತ್ತದ ನೆಲಮಹಡಿಯ ಪರಮಹಂಸ ಧ್ಯಾನ ಕೇಂದ್ರದಲ್ಲಿ ಸೋಮವಾರ ‘ತಿಂಗಳ ತಿಳಿವು’ ಸಂಚಿಕೆ-15 ಕಾರ್ಯಕ್ರಮ ನೆರವೇರಿತು.

ಸಾಹಿತಿ ಕಿರಣ್ ಸಿಡ್ಲೇಹಳ್ಳಿ ‘ಕನ್ನಡ ಸಾಹಿತ್ಯದಲ್ಲಿ ಮುಕ್ತಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು.

ಪ್ರತಿಷ್ಠಾನದ ಅಧ್ಯಕ್ಷ ಮಾಜಿ ಎಂಎಲ್‌ಸಿ ಡಿ.ಮಾದೇಗೌಡ, ಕಾರ್ಯಾಧ್ಯಕ್ಷ ಡಾ.ಎಸ್.ಪಿಯೋಗಣ್ಣ, ಉಪಾಧ್ಯಕ್ಷ ಬಸವಣ್ಣ, ಕಾರ್ಯದರ್ಶಿ ಕೆ.ಕೆಂಪಲಿಂಗರಾಜು, ಚಂದ್ರಶೇಖರ್, ಪುರುಷೋತ್ತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net