ತಪ್ಪಿದ ಬಸ್ ಅವಘಡ

IMG-20220716-WA0020.jpg
Published on

ರಾಯಚೂರು

ಸಾರಿಗೆ ಸಂಸ್ಥೆ ಬಸ್ ಹಿಂಭಾಗದ ಚಕ್ರದ ನಟ್ ಕಳಿಚಿ ಬಿದ್ದು ಆಗಬಹುದಾಗಿದ್ದ ಅವಘಡವನ್ನು ಆಟೋ ಚಾಲಕ ತಪ್ಪಿಸಿದ್ದಾನೆ.

ತಾಲೂಕಿನ ತಲಮಾರಿಯಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಿಂಬದಿ ಚಕ್ರದ ಎಂಟು ನಟ್ ಗಳಲ್ಲಿ ಆರು ಕಳಚಿ ಬಿದ್ದಿವೆ. ಎರಡು ನಟ್ ಗಳ ಆಧಾರದಲ್ಲಿ ಸಂಚರಿಸುತ್ತಿದೆ.

ಚಕ್ರದ ನಟ್ ಇರದ್ದನ್ನು ಕಂಡ ಆಟೋ ಚಾಲಕ ಬಸ್ ನಿಲ್ಲಿಸಿ ಚಾಲಕನಿಗೆ ವಿಷಯ ತಿಳಿಸಿದ್ದ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬೇರೆ ವಾಹನದಲ್ಲಿ ಕಳುಹಿಸಲಾಗಿದೆ. ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಅವಘಡ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net