

ವಿಜಯವಾಣಿ ವಿಶೇಷ ಚಿತ್ರದುರ್ಗ
ಡೆಂೆ ಹಾವಳಿ ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂೆ ವಾರ್‌ರೂಮ್ ಸ್ಥಾಪಿಸಲು ಸರ್ಕಾರ ನಿರ್ದೇಶಿಸಿದೆ. ಬೆಂಗಳೂರಿನ ಆರೋಗ್ಯಸೌಧದಲ್ಲಿ ರಾಜ್ಯ, ಜಿಲ್ಲಾಮಟ್ಟದಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿ ಕಂಟ್ರೋಲ್ ರೂಂ/ಡೆಂೆ ವಾರ್‌ರೂಮ್ ಸಕ್ರಿಯಗೊಳಿಸಲು ಆರೋಗ್ಯ ಇಲಾಖೆ ಸಂಬಂಧಿಸಿದ ಅಧಿಕಾರಿ, ಡಿಸಿಗಳಿಗೆ ಸೂಚಿಸಿದೆ.
ಡೆಂೆ ಪರಿಸ್ಥಿತಿ ನಿಗಾಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗಲಿರುವ ಟಾಸ್ಕ್‌ಪೋರ್ಸ್ ವಾರಕ್ಕೆ ಒಮ್ಮೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಬೇಕಿದೆ.
ಆರೋಗ್ಯ ಸಿಬ್ಬಂದಿ, ಆಶಾ ಕಾರ‌್ಯಕರ್ತೆಯರು ಮನೆ, ಶಾಲಾ, ಕಾಲೇಜು ಹಾಗೂ ಕಚೇರಿಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈಡಿಸ್ ಸೊಳ್ಳೆ ಲಾರ್ವಾ ಸಮೀಕ್ಷೆ ಹಾಗೂ ಅವುಗಳ ನಾಶ ಚಟುವಟಿಕೆ ನಡೆಸಬೇಕು. ಸಿಬ್ಬಂದಿ, ಆಶಾ ಕಾರ‌್ಯಕರ್ತೆಯರ ಸಹಾಯಕ್ಕಾಗಿ, ನಗರ ಸ್ಥಳೀಯ ಸಂಸ್ಥೆಗಳು ದಿನವೊಂದಕ್ಕೆ 200 ರೂ. ಗೌರವಧನ ಆಧರಿಸಿ ಅಗತ್ಯ ಸಂಖ್ಯೆಯ ಸ್ವಯಂ ಸೇವಕರನ್ನು ಒದಗಿಸಬೇಕು.
ಈಡಿಸ್ ಸೊಳ್ಳೆ ಲಾರ್ವಾ ನಾಶ ಚಟುವಟಿಕೆ ವಾರದಲ್ಲಿ ನಿಗದಿತ ಒಂದು ದಿನದಂದು ಬೆಳಗ್ಗೆ ಜಾಗೃತಿ ಮೂಡಿಸಬೇಕು. ನೀರು ಸಂಗ್ರಹಗಳ ಸ್ವಚ್ಛತೆ ಮತ್ತು ಟ್ಯಾಂಕ್, ಡ್ರಮ್ ಇತ್ಯಾದಿ ಸ್ವಚ್ಛಗೊಳಿಸಿದ ದಿನದಂದು, ನೀರು ಸರಬರಾಜಿಗೂ ಸೂಕ್ತ ನಿಗಾ ವಹಿಸಬೇಕು.
*ಹಾಟ್‌ಸ್ಪಾಟ್: ಜಿಲ್ಲಾ ವ್ಯಾಪ್ತಿಯ ಡೆಂೆ ಹಾಟ್‌ಸ್ಪಾಟ್‌ಗಳಲ್ಲಿರುವ ಪರಿಸ್ಥಿತಿಯನ್ನು ಸ್ಟೇಟ್‌ವಾರ್‌ರೂಮ್‌ಗೆ ತಿಳಿಸಬೇಕು. ಈ ಪ್ರದೇಶದ ಮನೆಗಳ ಒಳ ಆವರಣದಲ್ಲಿ ಲಾರ್ವಾ ನಾಶ ಚಟುವಟಿಕೆ ಬಳಿಕ ಮನೆ ಮಂದಿಯನ್ನು ಕನಿಷ್ಠ ಅರ್ಧ ತಾಸು ಮನೆಯಿಂದ ಹೊರಗೆ ಇರುವಂತೆ ನೋಡಿಕೊಳ್ಳಬೇಕು. ಇಂಥ ಪ್ರದೇಶಗಳಲ್ಲಿ ಜ್ವರ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕು. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆ ವಿತರಿಸಬೇಕು.
ಸಿಎಸ್‌ಆರ್, ದಾನಿಗಳ ನೆರವು ಅಥವಾ ಲಭ್ಯ ನಿರ್ದಿಷ್ಟ ಅನುದಾನ ಬಳಸಿಕೊಂಡು ಖರೀದಿಸಬೇಕು. ಹೆಚ್ಚಿನ ಅನುದಾನ ಅಗತ್ಯವನ್ನು ಜಿಪಂ, ತಾಪಂಗಳು ಭರಿಸಬೇಕು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 8-10 ಹಾಸಿಗೆಗಳನ್ನು ಡೆಂೆ ಜ್ವರದಿಂದ ಬಳಲುತ್ತಿರುವಂಥವರಿಗೆ ಮೀಸಲಿಡಬೇಕು.
ಟೆಸ್ಟಿಂಗ್‌ಕಿಟ್ ಮತ್ತಿತರ ಉಪಕರಣ, ಔಷಧ, ರಕ್ತ, ಪ್ಲೇಟ್‌ಲೆಟ್ ಲಭ್ಯತೆಯ ಖಚಿತ ಮಾಹಿತಿ ಹೊಂದಿರಬೇಕು. ಕೇಂದ್ರ ಮಾರ್ಗದರ್ಶಿ ಸೂಚನೆಗಳನ್ನು ವೈದ್ಯರು ಕಡ್ಡಾಯ ಪಾಲಿಸಬೇಕು. ಮೆಡಿಕಲ್ ಕಾಲೇಜುಗಳು ಫ್ಯಾಮಿಲಿ ಅಡಾಪ್ಷನ್ ಪ್ರೋಗ್ರಾ ಅನ್ನು ಡೆಂೆ ಹಾವಳಿ ಇರುವ ಗ್ರಾಮ/ವಾರ್ಡ್‌ಗಳಿಗೆ ವಿಸ್ತರಿಸುವಂತೆ ಇಲಾಖೆ ನಿರ್ದೇಶಿಸಿದೆ.
*ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್‌ಪೋರ್ಸ್‌ನಲ್ಲಿ ಜಿಪಂ ಸಿಇಒ, ನಗರಾಭಿವೃದ್ಧಿ ಇಲಾಖೆ ಪಿಡಿ, ಮೆಡಿಕಲ್ ಕಾಲೇಜು ಪಿ ಆ್ಯಂಡ್ ಎಸ್‌ಎಂ ವಿಭಾಗದ ಮುಖ್ಯಸ್ಥರು, ಡಿಎಚ್‌ಒ, ಐಎಂಎ ಜಿಲ್ಲಾಧ್ಯಕ್ಷರು, ಡಿಡಿಪಿಐ ಸದಸ್ಯರಾಗಿರುತ್ತಾರೆ. ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿ ಸದಸ್ಯ ಕಾರ‌್ಯದರ್ಶಿಯಾಗಿ ಕಾರ‌್ಯನಿರ್ವಹಿಸಲಿದ್ದಾರೆ.