

ಜನಚೈತನ್ಯ ಫೌಂಡೇಷನ್ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಜೂನ್ 19 ಮತ್ತು 20ರಂದು ಸಂಜೆ 4.30ರಿಂದ ರಾತ್ರಿ 9.30ರವರೆಗೆ ‘ಡಿಸ್ಕೋ ಮೆಲೋಡಿ ಸಾಂಗ್ಸ್ ಮ್ಯೂಜಿಕಲ್ ಇವಿನಿಂಗ್’ ಶೀರ್ಷಿಕೆ ಅಡಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದರು.
ಜೂಜ್ 19ರಂದು ಸಂಜೆ 4.30 ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು ವಿ.ಬೈರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಜಾಯ್ಸ ವೈಶಾಕ್, ರೇಣುಕಾ ಅರುಣ್, ಗುರುರಾಜ್, ಡಾ.ಎ.ಎಸ್.ಪೂರ್ಣಿಮಾ, ಅಜರುದ್ದೀನ್, ಡಾ.ಎ.ಎನ್.ಪದ್ಮಾ, ವಿಜಯ್‌ಆನಂದ್, ವೈ.ಎಂ.ನಾಗೇಂದ್ರ, ಕೆ.ಎಸ್.ಶೇಷಾದ್ರಿ, ಡಿ.ನಾಗೇಶ್, ಶಾಂತಕುಮಾರಿ, ಶಶಿಕಾಂತ್, ಮಧು ಸೇರಿದಂತೆ 20 ಗಾಯಕರು ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.