ಟೊಮೆಟೋ ಬೆಲೆ ಕುಸಿತ / ೧೫ ಕೆ.ಜಿ.ಬಾಕ್ಸ್ ೧೦೦ ರೂ.ಗಳಿಗೆ ಮಾರಾಟ / ೩ ತಿಂಗಳಿAದ ಹೆಚ್ಚಾಗ ಬೆಲೆ / ಆತಂಕದಲ್ಲಿ ಬೆಳೆಗಾರರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಟೊಮೆಟೋಗೆ ಕಳೆದ ೩ ತಿಂಗಳಿAದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಟೊಮೆಟೋ ಬೆಳೆಗಾರರು ಕಂಗಾಲಾಗಿದ್ದಾರೆ. ಮೇ ತಿಂಗಳ ಪ್ರಾರಂಭದ ನಂತರವಾದರೂ ಉತ್ತಮ ಬೆಲೆ ಬರುತ್ತದೆಂಬ ನಿರೀಕ್ಷೆಯಿತ್ತು. ಆದರೆ ಮೇ ತಿಂಗಳು ಪ್ರಾರಂಭಗೊAಡರೂ ೧೫ ಕೆ.ಜಿ. ಬಾಕ್ಸ್ ೧೦೦ ರೂ.ಗಳ ಗಡಿ ದಾಟುತ್ತಿಲ್ಲ.

ಕಳೆದ ಮೂರು ತಿಂಗಳಿAದ ೧೫ ಕೆ.ಎಜಿ. ಟೊಮೆಟೋ ಬಾಕ್ಸ್ ೨೦೦ ರ ಗಡಿ ದಾಟಿಲ್ಲ. ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಮಾತ್ರ ೩೦೦ ರಿಂದ ೪೦೦ ರೂ.ಗಳ ವರೆಗೆ ೧೫ ಕ.ಜಿ. ಟೊಮೆಟೋ ಬಾಕ್ಸ್ ಮಾರಾಟವಾಯಿತು. ತದನಂತರ ದಿನೇ ದಿನೇ ಏರಿಕೆಯಾಗುತ್ತದೆಂಬ ನಿರೀಕ್ಷೆ ರೈತರದ್ದಾಗಿತ್ತು. ಆದರೂ ದಿನೇ ದಿನೇ ಬೆಲೆ ಕುಸಿಯುತ್ತಾ ಬಂದಿದ್ದು, ಪ್ರಸ್ತುತ ಈಗ ೧೦೦ ರಿಂದ ೧೩೦ ರ ತನಕ ಮಾರಾಟವಾಗುತ್ತಿದೆ.

ಪ್ರತಿವರ್ಷ ಮೇ, ಜೂನ್, ಜುಲೈ, ಆಗಸ್ಟ್ ಈ ತಿಂಗಳಿನಲ್ಲಿ ಟೊಮೆಟೋಗೆ ಉತ್ತಮ ಬೆಲೆ ಇರುತ್ತದೆಂದು ರೈತರು ಹೆಚ್ದಾಗಿ ಟೊಮೆಟೋವನ್ನು ಬೆಳೆಯುತ್ತಾರೆ. ಈ ವರ್ಷ ಕೋಲಾರ ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಮುಂದಾಗಿದ್ದಾರೆ. ರೈತರು ಹಂತ ಹಂತವಾಗಿ ಸಸಿಗಳನ್ನು ನಾಟಿ ಮಾಡಿ ಒಂದೇ ತಿಂಗಳಿನಲ್ಲಿ ಫಸಲು ಬಾರದಂತೆ ನಾಲ್ಕು ತಿಂಗಳ ಕಾಲ ಹಂತಹAತವಾಗಿ ಫಸಲು ಬರಬೇಕೆಂದು ಸಸಿಗಳನ್ನು ನಾಟಿ ಮಾಡಿದ್ದಾರೆ.

ಮೊದಲು ನಾಟಿ ಮಾಡಿರುವವರಿಗೆ ಈಗ ಫಸಲು ಪ್ರಾರಂಭಗೊAಡಿದೆ. ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಟೊಮೆಟೋ ಗೆ ಕೋಲಾರವಲ್ಲದೆ ಪಕ್ಕದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟçದ ನಾಸಿರ್ ಈ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಟೊಮೆಟೋ ಬೆಳೆಯುತ್ತಾರೆ. ಕೋಲಾರ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಫಸಲು ಇಳಿಮುಖವಾಗುತ್ತಿತ್ತು. ಆದರೆ ಈ ವರ್ಷ ಹೊರ ರಜ್ಯಗಳಲ್ಲಿಯೂ ಉತ್ತಮ ವಾತಾವರಣ ಇರುವುದರಿಂದ ಆಯಾ ರಾಜ್ಯಗಳಲ್ಲಿ ಉತ್ತಮ ಫಸಲು ಸಿಗುತ್ತಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೇಡಿಕೆ ಇಲ್ಲದಂತೆ ಆಗಿದ್ದು, ಬೆಲೆ ಕುಸಿಯಲು ಕಾರಣವಾಗಿದೆ ಎಂಬುದು ಟೊಮೆಟೋ ಮಾರಾಟಗಾರರ ಅಭಿಪ್ರಾಯವಾಗಿದೆ.

ಪ್ರತಿವರ್ಷ ಟೊಮೆಟೋಗೆ ವೈರಸ್ ಮತ್ತು ಕೀಟಭಾದೆ ಕಾಡುತ್ತಿತ್ತು. ಈ ವರ್ಷ ಕೋಲಾರದ ಟೊಮೆಟೋ ಬೆಳೆಗೆ ಉತ್ತಮ ವಾತಾವರಣ ಹಾಗೂ ವೈರಸ್ ಕಾಟ ಇಲ್ಲದೆ ಇರುವುದರಿಂದ ಉತ್ತಮ ಫಸಲಿನ ನಿರೀಕ್ಷೆ ಇದೆ. ಹಾಗೂ ಈಗಾಗಲೇ ಉತ್ತಮ ಫಸಲು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಇರುವುದರಿಂದ ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಬೆಳೆದಿರುವ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಕೋಟ್

ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೇಡಿಕೆ ಇಲ್ಲ. ಹೊರ ರಾಜ್ಯ ಮತ್ತು ಹೊರ ದೇಶಕ್ಕೆ ರಫ್ತಾಗುತ್ತಿಲ್ಲ. ಮಹಾರಾಷ್ಟçದಲ್ಲಿ ಮಳೆ ಇಲ್ಲದ ಕಾರಣ ನಾಸಿಕ್‌ನಲ್ಲಿ ಹೆಚ್ಚು ಟೊಮೆಟೋ ಬೆಳೆಯುತ್ತಿದ್ದಾರೆ. ಹೊರ ದೇಶವಾದ ಬಾಂಗ್ಲಾ ದೇಶಕ್ಕೆ ನಾಸಿಕ್‌ನಿಂದ ಟಮೆಟೋ ರಫ್ತಾಗುತ್ತಿದೆ. ಕೋಲಾರದ ಗಡಿ ಭಾಗವಾದ ಆಂಧ್ರಪ್ರದೇಶ ಮತ್ತು ತಿಮಿಳುನಾಡಿನಲ್ಲಿ ಉತ್ತಮ ಫಸಲು ಇರುವ ಕಾರಣ ಕೋಲಾರದ ಟೊಮೆಟೋಗೆ ಬೇಡಿಕೆ ಕಡಿಮೆ ಇರುವ ಕಾರಣ ಬೆಲೆ ಕುಸಿಯಲು ಕಾರಣವಾಗಿದೆ.

-ಚಂದ್ರಾರೆಡ್ಡಿ, ಟೊಮೆಟೋ ಮಂಡಿ ಮಾಲೀಕ.

ಕೋಟ್

ಕಳೆದ ೩ ತಿಂಗಳಿAದ ಟೊಮೆಟೋಗೆ ಬೆಲೆ ಬರಲಿಲ್ಲ. ೧೫ ಕೆ.ಜಿ.ಟೊಮೆಟೋ ಬಾಕ್ಸ್ ೪೦೦ ರಿಂದ ೫೦೦ ರೂ.ಗಳಿಗೆ ಮಾರಾಟವಾದರೆ ಮಾತ್ರ ರೈತನಿಗೆ ನಷ್ಟವಾಗುವುದಿಲ್ಲ. ಕಳೆದ ೩ ತಿಂಗಳಿAದಲೂ ೨೦೦ ರ ಗಡಿ ದಾಟಲಿಲ್ಲ. ಟೊಮೆಟೋ ಬೆಳೆ ಮಾಡಿದ ರೈತ ನಷ್ಟಕ್ಕೆ ಸಿಲುಕಿದ್ದಾನೆ. ಮೇ ನಿಂದ ಆಗಸ್ಟ್ ತನಕ ಟೊಮೆಟೋಗೆ ಉತ್ತಮ ಬೆಲೆ ಬರುತ್ತದೆಂಬ ಆಸೆಯಿಂದ ರೈತ ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಟೊಮೆಟೋ ಬೆಳೆದಿದ್ದಾರೆ. ಆದರೆ ಈಗ ಪ್ರಸ್ತುತ ೧೦೦ ರೂ.ಗಳ ಗಡಿ ದಾಟುತ್ತಿಲ್ಲ. ಮುಂದೆ ಬೆಲೆ ಬರುತ್ತದೆಂಬ ನಂಬಿಕೆ ಇಲ್ಲದಂತೆ ಆಗಿದೆ. ಸರ್ಕಾರ ಈಗಿನಿಂದಲೇ ಟೊಮೆಟೋ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕೆಂಬ ಒತ್ತಾಯ.

-ಶ್ರೀರಾಮರೆಡ್ಡಿ, ಟೊಮೆಟೋ ಬೆಳೆಗಾರ.

ಚಿತ್ರ ೦೩ ಕೆ.ಎಲ್.ಆರ್. ೦೨ : ಮಾರುಕಟ್ಟೆಯಲ್ಲಿ ಟೊಮೆಟೋ ಬಾಕ್ಸ್ಗಳು

ಚಿತ್ರ ೦೩ ಕೆ.ಎಲ್.ಆರ್. ೦೨ಎ : ಚಂದ್ರಾರೆಡ್ಡಿ, ಟೊಮೆಟೋ ಮಂಡಿ ಮಾಲೀಕ.

ಚಿತ್ರ ೦೩ ಕೆ.ಎಲ್.ಆರ್. ೦೨ಬಿ : ಶ್ರೀರಾಮರೆಡ್ಡಿ, ಟೊಮೆಟೋ ಬೆಳೆಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net