ವಿಜಯವಾಣಿ ಸುದ್ದಿಜಾಲ ಕೋಲಾರ
ಕಳೆದ ಒಂದು ತಿಂಗಳಿAದ ಬಿದ್ದ ಮಳೆಗೆ ತರಕಾರಿ ಬೆಳೆಗಳು ಗುಣಮಟ್ಟ ಕಳೆದುಕೊಂಡು ರೈತರಿಗೆ ವರದಾನವಾಗಿದ್ದ ತರಕಾರಿ ಬೆಲೆಗಳು ಇದೀಗ ಇಳಿಮುಖವಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.
ಪ್ರತಿ ೧೫ ಕೆ.ಜಿ ಬಾಕ್ಸಿಗೆ ಒಂದು ಸಾವಿರ ರೂ.ಗಡಿ ದಾಟಿದ್ದ ಟಮೋಟ ಬೆಲೆ ಇದೀಗ ೩೦೦ ರೂ.ಗಳಿಗೆ ಕುಸಿದಿದ್ದು, ಬೀನ್ಸ್, ಕೋಸು ಸೇರಿದಂತೆ ಇತರೆ ತರಕಾರಿ ಬೆಲೆಗಳು ಕುಸಿಯತೊಡಗಿವೆ.
ಕಳೆದ ಒಂದು ತಿಂಗಳಿAದ ಸುರಿದ ಮಳೆಗೆ ರೈತರು ತಾವು ಬೆಳೆದ ಬೆಳೆಗಳು ಗುಣಮಟ್ಟ ಕಳೆದುಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಲಭ್ಯವಾಗದಿದ್ದಕ್ಕೆ ಬೆಲೆಗಳು ಕುಸಿಯತೊಡಗಿವೆ. ಬೀನ್ಸ್ ಕಳೆದ ವಾರದ ಹಿಂದೆ ಪ್ರತಿ ಕೆ.ಜಿ ೧೫೦-೨೦೦ ರೂ.ವರೆವಿಗೂ ಮಾರಾಟವಾಗತೊಡಗಿತು, ಆದರೆ ಇದೀಗ ದಿಢೀರ್ ಪ್ರತಿ ಕೆ.ಜಿ ೩೦ ರೂ.ಗಳಿಂದ ೪೦.ರೂ ಗಳವರೆಗೆ ಕುಸಿದಿದೆ. ಬೀಟ್‌ರೋಟ್ ೨೫ ರಿಂದ ೩೦ ರೂ.ಗಳಿಗೆ ಮಾರಾಟವಾಗುತ್ತಿದೆ. ಬಜ್ಜಿ ಮೆಣಸಿನಕಾಯಿ ೪೦ ರಿಂದ ೫೦ ರೂ.ಗಳು, ಕ್ಯಾಪ್ಸಿಕಂ ೫೦ ರಿಂದ ೬೦ ರೂ.ಗಳು, ಎಲೆಕೋಸು ೧೦ ರೂ.ಗಳು, ಹೂಕೋಸು ೨೦ ರೂ.ಗಳು, ಗಡ್ಡೆ ಕೋಸು ೨೫ ರಿಂದ ೩೦ ರೂ.ಗಳವರೆವಿಗೆ ಮಾರಾಟವಾಗುತ್ತಿದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಟೊಮೆಟೋ ಬೆಲೆ ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ದಿನೇ ದಿನೇ ಕುಸಿಯತೊಡಗಿದೆ. ಬುಧವಾರ ೧೫ ಕೆ.ಜಿ.ಬಾಕ್ಸ್ ೩೦೦ ರೂ.ಗಳಿಂದ ೩೫೦ ರೂ.ಗಳಿಗೆ ಮಾರಾಟವಾಗಿದೆ. ಕಳೆದ ಒಂದು ತಿಂಗಳಿನಿAದ ಸುರಿದ ಮಳೆಯಿಂದ ಟೊಮೆಟೋ ಗುಣಮಟ್ಟ ಕಳೆದುಕೊಂಡ ಕಾರಣ ಮಾರುಕಟ್ಟೆಯಲ್ಲಿ ಬೆಲೆಯು ಕಡಿಮೆಯಾಗತೊಡಗಿದೆ. ಸೌತೇಕಾಯಿ ಕೆ.ಜಿ.ಗೆ ೨ ರೂ.ಗಳಿಂದ ೫ ರೂ.ಗಳ ತನಕ ಮಾರಾಟವಾಗುತ್ತಿದೆ.
ನವೆಂಬರ್, ಡಿಸೆಂಬರ್ ಮತ್ತು ಜನವರಿ ತನಕ ಮೂರು ತಿಂಗಳು ತರಕಾರಿಗಳಿಗೆ ಪ್ರತಿವರ್ಷ ಬೆಲೆಗಳು ಕಡಿಮೆ ಇರುತ್ತದೆ. ಚಳಿಗಾಲ ಪ್ರಾರಂಭವಾಗುವುದರಿAದ ರೋಗ ರುಜಿನಗಳು ಕಡಿಮೆಯಾಗಿ ಉತ್ತಮ ಫಸಲು ಬರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬರುವುದರಿಂದ ಬೆಲೆಯು ಕಡಿಮೆಯಾಗುತ್ತದೆ ಎಂಬುವುದು ವ್ಯಾಪಾರಸ್ಥರ ಮತ್ತು ರೈತರ ಅನಿಸಿಕೆಗಳಾಗಿವೆ.
ಕೋಟ್
ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ತರಕಾರಿ ಬೆಳೆಗಳು ಈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಮಾರಾಟವಾಗುತ್ತಿವೆ. ಕಳೆದ ಒಂದು ತಿಂಗಳು ಬಿದ್ದ ಮಳೆಗೆ ತರಕಾರಿ ಬೆಳೆಗಳು ನಾಶವಾಗಿದ್ದರಿಂದ ಮಾರುಕಟ್ಟೆಗೆ ಬರುತ್ತಿರುವ ತರಕಾರಿ ಕಡಿಮೆಯಾಗಿರುವುದರಿಂದ ಸ್ವಲ್ಪಮಟ್ಟಿಗಾದರೂ ಬೆಲೆ ಇದೆ. ಇನ್ನು ೧೫-೨೦ ದಿನ ಕಳೆದರೆ ಎಲ್ಲಾ ತರಕಾರಿಗಳ ಬೆಳೆಗಳು ಇನ್ನಷ್ಟು ಕುಸಿಯತೊಡಗುತ್ತವೆ. ತಮಿಳುನಾಡು, ಆಂಧ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಸ್ಥಳೀಯವಾಗಿ ಎಲ್ಲಾ ತರಕಾರಿಗಳು ಲಭ್ಯವಾಗತೊಡಗುತ್ತವೆ. ಆದ್ದರಿಂದ ಕೋಲಾರ ತರಕಾರಿಗಳಿಗೆ ನವೆಂಬರ್, ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಬೇಡಿಕೆ ತೀರಾ ಕಡಿಮೆ ಇರುತ್ತದೆ.
-ಪುಟ್ಟರಾಜು, ಎಪಿಎಂಸಿ ತರಕಾರಿ ಮಂಡಿ ಮಾಲೀಕ
ಕೋಟ್
ಕಳೆದ ಒಂದು ತಿಂಗಳಿನಿAದ ಸುರಿದ ಮಳೆಯಿಂದ ಟೊಮೆಟೋ ಬೆಳೆಗೆ ಹಾನಿಯಾಗಿದ್ದು, ಅದರಿಂದ ಗುಣಮಟ್ಟವೂ ಇಲ್ಲ, ಫಸಲು ಇಲ್ಲದಂತೆ ಆಗಿದೆ. ತರಕಾರಿ ಬೆಳೆಗಳಿಗೂ ಮಳೆಯ ಎಫೆಕ್ಟ್ ಆದ ಕಾರಣ ಗುಣಮಟ್ಟ ಕಳೆದುಕೊಂಡಿವೆ. ಆದ್ದರಿಂದ ಬೆಲೆ ಕಡಿಮೆಯಾಗಿದೆ. ಈ ವರ್ಷ ಹೂವು ಬೆಳೆಗಾರರಿಗೂ ಉತ್ತಮ ಬೆಲೆ ಬರದ ಕಾರಣ ನಷ್ಟ ಅನುಭವಿಸುವಂತಾಗಿದೆ. ತರಕಾರಿಗೆ ಇನ್ನಾದರೂ ಉತ್ತಮ ಬೆಲೆ ಬಂದರೆ ರೈತರು ಕಳೆದ ಒಂದು ವರ್ಷದಿಂದ ಅನುಭವಿಸಿದ ನಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ.
-ಕೃಷ್ಣಪ್ಪ, ರೈತ, ಚಿಕ್ಕಹಸಾಳ, ಕೋಲಾರ ತಾಲ್ಲೂಕು.
ಚಿತ್ರ ೦೬ ಕೆ.ಎಲ್.ಆರ್. ೦೨ : ಪುಟ್ಟರಾಜು, ಎಪಿಎಂಸಿ ತರಕಾರಿ ಮಂಡಿ ಮಾಲೀಕ ರವರ ಭಾವಚಿತ್ರ
ಚಿತ್ರ ೦೬ ಕೆ.ಎಲ್.ಆರ್. ೦೨ : ಕೃಷ್ಣಪ್ಪ, ರೈತ, ಚಿಕ್ಕಹಸಾಳ, ಕೋಲಾರ ತಾಲ್ಲೂಕು. ರವರ ಭಾವಚಿತ್ರ
ಚಿತ್ರ ೦೬ ಕೆ.ಎಲ್.ಆರ್. ೦೨ : ಎಪಿಎಂಸಿ ಮಂಡಿಯಲ್ಲಿ ತರಕಾರಿ ಕ್ರೇಟ್‌ಗಳ ಚಿತ್ರ