ಟೆಕ್ಕಿಗಳಿಗೆ ವರ್ಷಪೂರ್ತಿ ವರ್ಕ್ ಫ್ರಂ ಹೋಮ್: ಕರೊನಾ ಕಾರಣಕ್ಕೆ ಡಿ.31ರವರೆಗೆ ಅವಕಾಶ

Work from home
Published on

ನವದೆಹಲಿ: ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದಲ್ಲಿರುವವರಿಗೆ ಜಾರಿಗೊಳಿಸಲಾಗಿರುವ ವರ್ಕ್ ಫ್ರಮ್ ಹೋಂ(ಮನೆಯಿಂದ ಕೆಲಸ) ಅವಧಿಯನ್ನು ಡಿ.31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ಆದೇಶದ ಪ್ರಕಾರ, ಜು.31ರವರೆಗೆ ಐಟಿ ಜತೆಗೆ ಬಿಪಿಒ ಸಂಸ್ಥೆಗಳ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಂ ಜಾರಿಯಲ್ಲಿತ್ತು. ಸದ್ಯ ಐಟಿಯ ಶೇ.85 ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ಜವಾಬ್ದಾರಿಗಳಲ್ಲಿರುವವರು ಮಾತ್ರವೇ ಕಚೇರಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಹೊಸ ಆದೇಶದ ಬೆನ್ನಲ್ಲೇ ಡಿ.31ರವರೆಗೆ ವರ್ಕ್ ಫ್ರಂ ಹೋಂ ಸುಲಭವಾಗಿಸುವ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆ ಸೇವಾ ಪೂರೈಕೆದಾರರಿಗೆ ಷರತ್ತು ಮತ್ತು ನಿಬಂಧನೆಗಳ ಸಡಿಲಿಕೆಯನ್ನು ವಿಸ್ತರಿಸಿದೆ.

12 ಲಕ್ಷ ದಾಟಿದ ಕೇಸ್

ಭಾರತದಲ್ಲಿ ಕಳೆದ 24 ತಾಸಿನಲ್ಲಿ 22 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12.16 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಇಳಿಕೆಯತ್ತ ಸಾಗಿದ್ದ ಚೇತರಿಕೆ ಪ್ರಮಾಣ ಶೇ.63.13ಕ್ಕೆ ತಲುಪಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 19 ರಾಜ್ಯಗಳಲ್ಲಿನ ಗುಣಮುಖರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ದೆಹಲಿ ಶೇಕಡ 84.83 ಗುಣಮುಖ ಪ್ರಮಾಣ ದೊಂದಿಗೆ ಪ್ರಥಮ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net