

ತಿರುವನಂತಪುರಂ: ಕರೊನಾ ತಡೆಗೆ ಲಾಕ್ಡೌನ್ ಪರಿಹಾರವಲ್ಲ; ಜನರ ಸಹಕಾರ ಅಗತ್ಯ ಎಂದು ಕರ್ನಾಟಕ ಸರ್ಕಾರ ಲಾಕ್ಡೌನ್ ತೆರವು ಮಾಡಿದೆ. ಆದರೆ, ಕೇರಳ ಸರ್ಕಾರ ಇದಕ್ಕೆ ವಿರುದ್ಧವಾಗಿ ಯೋಚನೆ ಮಾಡುತ್ತಿದೆ.
ಕರೊನಾ ನಿಯಂತ್ರಣದಲ್ಲಿ ಗಣನೀಯ ಶ್ರಮ ವಹಿಸಿ ವಿಶ್ವಸಂಸ್ಥೆಯಿಂದಲೂ ಮೆಚ್ಚುಗೆ ಗಳಿಸಿದ್ದ ಕೇರಳದಲ್ಲೀಗ ಕರೊನಾ ಮಹಾಮಾರಿ ತಾಂಡವವಾಡುತ್ತಿದೆ. ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ವರಿಯಾಗಿವೆ. ಇದು ಕೇರಳ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಕೇರಳದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಈಗ ಮತ್ತೆ ಸಂಪೂರ್ಣ ಲಾಕ್ಡೌನ್ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ, ಇದನ್ನು ಪರಿಗಣಿಸಬೇಕು ಎಂಬುದು ನನ್ನ ಅಭಿಪ್ರಾಯವೂ ಆಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ಒಂದೇ ದಿನ 1,038 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 226 ಕೇಸ್ಗಳು ತಿರುವನಂತಪುರದ್ದಾಗಿವೆ. ಈ ಮೂಲಕ ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8,818 ಆಗಿದೆ. ಇದರಲ್ಲಿ 53 ಜನರು ಐಸಿಯುನಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 24 ವೈದ್ಯ ಸಿಬ್ಬಂದಿಯೂ ಸೋಕಿಗೆ ಒಳಗಾಗಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಕರಾವಳಿಯ ಎರಡು ಪ್ರದೇಶಗಳಲ್ಲಿ ಸೋಂಕು ಸಾಮುದಾಯಿಕ ಮಟ್ಟಕ್ಕೆ ವ್ಯಾಪಿಸಿದೆ. ಸ್ಥಳೀಯವಾಗಿ 738 ಜನರಿಗೆ ಸೋಂಕು ಹರಡಿದ್ದರೆ, 57 ಜನರ ಸಂಪರ್ಕವೇ ಗೊತ್ತಾಗುತ್ತಿಲ್ಲ. 87 ಜನರು ಹೊರದೇಶದಿಂದ ಬಂದವರು, 109 ಜನರಿಗೆ ಹೊರ ರಾಜ್ಯಗಳ ಟ್ರಾವೆಲ್ ಹಿಸ್ಟರಿ ಇದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ವೇಗವಾಗಿ ಹಬ್ಬುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಸಂಪೂರ್ಣ ಲಾಕ್ಡೌ ನ್ಗೆ ಕೇರಳ ಚಿಂತನೆ ನಡೆಸಿದೆ.