More

    ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?

    ಬೆಂಗಳೂರು: ಜಗತ್ತಿನ 200ಕ್ಕೂ ಅಧಿಕ ಕಂಪನಿಗಳೀಗ ಕರೊನಾ ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ತೊಡಗಿವೆ. ಇದರಲ್ಲಿ 20ಕ್ಕೂ ಅಧಿಕ ಕಂಪನಿಗಳು ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ತಲುಪಿವೆ.

    ಸಾಮಾನ್ಯವಾಗಿ ಇಲಿ, ಮಂಗಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ ಮೇಲೆ ಯಶಸ್ಸು ಕಂಡ ಬಂದಲ್ಲಿ ಅದನ್ನು ಮಾನವರ ಮೇಲೆ ಪ್ರಯೋಗಿಸುವ ಹಂತಕ್ಕೆ ಬರಲಾಗುತ್ತದೆ. ಈ ಇಲಿ ಹಾಗೂ ಮಂಗಗಳಿಗೂ ಬಾರಿ ಡಿಮ್ಯಾಂಡ್​ ಇದೆ ಎನ್ನುವುದು ಬೇರೆ ಮಾತು.

    ಆಯಾ ರೋಗಗಳಿಗೆ ಕಾರಣವಾಗುವ ವೈರಸ್​ಗಳನ್ನು ದುರ್ಬಲಗೊಳಿಸಿ ಅಥವಾ ನಾಶಗೊಳಿಸಿ ಲಸಿಕೆ ರೂಪದಲ್ಲಿ ದೇಹಕ್ಕೆ ಸೇರಿಸುವ ವಿಧಾನವೇ ಹೆಚ್ಚಾಗಿ ಬಳಕೆಯಲ್ಲಿದೆ. ಆರಂಭದಲ್ಲಿ ಆರೋಗ್ಯವಂತ ಮಾನವರ ಮೇಲೆ ಇಂಥ ಲಸಿಕೆಗಳನ್ನು ಪ್ರಯೋಗಿಸಲಾಗುತ್ತದೆ.

    ಇದನ್ನೂ ಓದಿ; ಆಕ್ಸ್​ಫರ್ಡ್​ ಕರೊನಾ ಲಸಿಕೆ ಯಶಸ್ವಿಯಾದರೆ ಭಾರತಕ್ಕೇನು ಲಾಭ? ಎಲ್ಲಿ ಉತ್ಪಾದನೆಯಾಗುತ್ತೆ ಗೊತ್ತಾ? 

    ಮೊದಲ ಹಂತದಲ್ಲಿ ಹತ್ತಾರು ಜನರ ಮೇಲೆ ಎರಡನೇ ಹಂತದಲ್ಲಿ ನೂರಾರು ಹಾಗೂ ಮೂರನೇ ಹಂತದಲ್ಲಿ ಸಾವಿರಾರು ಕೆಲವೊಮ್ಮೆ ಹತ್ತಿಪ್ಪತ್ತು ಸಾವಿರ ಜನರ ಮೇಲೆ ಪ್ರಯೋಗಿಸಲಾಗುತ್ತದೆ. ಇಷ್ಟೊಂದು ಬೃಹತ್​ ಪ್ರಮಾಣದಲ್ಲಿ ಪ್ರಯೋಗ ನಡೆದು ಯಶಸ್ವಿಯಾದರಷ್ಟೇ ಅದರ ಸಾರ್ವತ್ರಿಕ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇತರ ಸಂಸ್ಥೆಗಳು ಅನುಮತಿ ನೀಡುತ್ತವೆ.

    ಸಾಮಾನ್ಯವಾಗಿ ಕ್ಲಿನಿಕಲ್ ಟ್ರಯಲ್​ಗೆ ಒಳಗಾಗುವ ಆರೋಗ್ಯವಂತ ವ್ಯಕ್ತಿಗಳಿಗೆ ಗೌರವ ಧನ ಅಥವಾ ಪರಿಹಾರ ನಿಡಲಾಗುತ್ತದೆ. ಔಷಧ ಕಂಪನಿಗಳಿಗೆ ಇಂಥ ಮಾನವ ಸಂಪನ್ಮೂಲ ಒದಗಿಸುವ ನೂರಾರು ಕಂಪನಿಗಳು ಜಾಗತಿಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ವೆಬ್​ಸೈಟ್​ನಲ್ಲಿ ಕ್ಲಿನಿಕಲ್​ ಟ್ರಯಲ್​ಗೆ ಬೇಕಾಗುವ ವ್ಯಕ್ತಿಗಳು, ಅವಧಿ ಹಾಗೂ ಅದಕ್ಕೆ ನೀಡಲಾಗುವ ಮೊತ್ತವನ್ನು ಪಾರದರ್ಶಕವಾಗಿ ನೀಡಲಾಗಿರುತ್ತದೆ. ಇದು ಕೆಲ ಸಾವಿರ ರೂ.ಗಳಿಂದ ಲಕ್ಷಗಟ್ಟಲೇ ಇರುತ್ತದೆ.

    ಉದಾಹರಣೆಗೆ, ಫ್ಲೊರಿಡಾದ ಕಂಪನಿಯೊಂದು ಒಂದು ತಿಂಗಳ ಕ್ಲಿನಿಕಲ್​ ಟ್ರಯಲ್​ 21-60 ವಯಸ್ಸಿನ ಪುರುಷ ಮತ್ತು ಮಹಿಳೆಯರಿಗೆ 2,500 ಡಾಲರ್​ ನೀಡಿದರೆ (ಅಂದಾಜು 1.87 ಲಕ್ಷ) ಇನ್ನೊಂದು ಕಂಪನಿ ಇಷ್ಟೇ ಅವಧಿಗೆ 13,056 ಡಾಲರ್​ ( ಅಂದಾಜು 9.79 ಲಕ್ಷ ರೂ) ಆಫರ್​ ಮಾಡಿದೆ. ಕೆಲವೊಮ್ಮೆ ಈ ಮೊತ್ತ ಇನ್ನು ಹೆಚ್ಚಾಗಬಹುದು. ಭಾರತದಲ್ಲಿ ಈ ಮೊತ್ತ ಸಾವಿರಗಟ್ಟಲೇ ಇರುತ್ತದೆ. ಇದನ್ನು ಬಹಿರಂವಾಗ ಘೋಷಿಸುವ ವೆಬ್​ಸೈಟ್​ಗಳು ಕಡಿಮೆ.

    ಇದನ್ನೂ ಓದಿ; ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ 

    ಸದ್ಯ ನಡೆಯುತ್ತಿರುವ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗೆ ಆಯಾ ದೇಶಗಳೇ ಜವಾಬ್ದಾರಿ ವಹಿಸಿಕೊಂಡಿವೆ. ಭಾರತದಲ್ಲಿ ಭಾರತ್​ ಬಯೋಟೆಕ್​ಗೆ ಐಸಿಎಂಆರ್​ ಕ್ಲಿನಿಕಲ್​ ಟ್ರಯಲ್​ ಸಹಭಾಗಿತ್ವ ನೀಡಿದೆ. ರಷ್ಯಾದಲ್ಲಿ ರಕ್ಷಣಾ ಇಲಾಖೆ ಯೋಧರನ್ನೇ ಇದಕ್ಕೆ ಬಳಸಿಕೊಳ್ಳುತ್ತಿದೆ. ಚೀನಾದಲ್ಲಿ ಸೂಚಿತ ಸರ್ಕಾರಿ ಉದ್ಯೋಗಿಗಳಿಗೆ ಇದು ಕಡ್ಡಾಯ. ಅಮೆರಿಕದಲ್ಲಿ ಮಾಡೆರ್ನಾ ಕಂಪನಿಗೆ ಕೋಟ್ಯಂತರ ಡಾಲರ್​ಗಳನ್ನು ಸರ್ಕಾರ ನೀಡಿದೆ.

    ಕ್ಲಿನಿಕಲ್​ ಟ್ರಯಲ್​ಗೆ ಒಳಗಾಗುವ ಅಭ್ಯರ್ಥಿಗಳಿಗೆ 24 ಗಂಟೆಯೂ ವೈದ್ಯರ ನೆರವು ದೊರೆಯುವಂತೆ ನೋಡಿಕೊಳ್ಳಲಾಗಿರುತ್ತದೆ. ಕಂಪನಿ, ಔಷಧಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸದಂತೆ ಒಪ್ಪಂದ ಮಾಡಿಕೊಂಡಿರಲಾಗುತ್ತದೆ. ಕೆಲವೊಮ್ಮೆ ಲಸಿಕೆ ಹಾಕಿಸಿಕೊಂಡವರಿಗೆ ಅದು ಏನು, ಯಾಕಾಗಿ ನೀಡಲಾಗಿದೆ ಎಂಬುದು ಗೊತ್ತಿಲ್ಲದೇ ಬಲಿಪಶುಗಳಾಗಿರುತ್ತಾರೆ.

    ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts