ಜಿಲ್ಲೆಯಲ್ಲಿರುವ ಎಲ್ಲಾ ಔಷಧಿ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ/ಜಿಲ್ಲಾಧಿಕಾರಿ ಅಕ್ರಂ ಪಾಷಾ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಔಷಧ ನಿಯಂತ್ರಣಾ ಇಲಾಖೆಯ ಸಿ.ಆರ್.ಪಿ.ಸಿ ಸೆಕ್ಷನ್ ೧೩೩ರಡಿ ಕೋಲಾರ ಜಿಲ್ಲೆಯಲ್ಲಿರುವ ಎಲ್ಲಾ ಔಷಧಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಹಾಗೂ ಔಷಧಿ ಚೀಟಿಯಿಲ್ಲದೆ ಯಾರಿಗೂ ಔಷಧಿಯನ್ನು ವಿತರಿಸಬಾರದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಎನ್. ಡಿ.ಪಿ.ಎಸ್. ಸಭೆಯಲ್ಲಿ ಮಾತನಾಡಿ, ೧೮ ವರ್ಷದೊಳಗಿನವರಿಗೆ ಔಷಧಿಯನ್ನು ನೀಡಕೂಡದು, ನೀಡಿದರೂ ಅವರ ಹೆಸರು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು, ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಮತ್ತು ಬರುವ ಔಷಧಿಯನ್ನು ಸೇವಿಸುವ ಹವ್ಯಾಸಕ್ಕೆ ಬಿದ್ದಿದ್ದು, ಔಷಧ ವಿತರಣೆ ಮಾಡುವಾಗÀ ಎಚ್ಚರಿಕೆಯಿಂದ ಇರಬೇಕು. ಸಮಾಜ ಸ್ವಾಸ್ಥö್ಯದ ಹಿತದೃಷ್ಟಿಯಿಂದ ನಿಂiÀiಮಾನುಸಾರ ವ್ಯವಹಾರ ನಡೆಸಬೇಕೆಂದು ಔಷಧಿ ಅಂಗಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬಯೋ ಮೆಡಿಕಲ್ ಘನತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಿ, ಸಮಾಜದ ಆರೋಗ್ಯವನ್ನು ಕಾಪಾಡಬೇಕೆಂದರು. ಸಿಸಿಟಿವಿ ಅಳವಡಿಸದ ಔಷಧಿ ಅಂಗಡಿಗಳು ಮತ್ತು ನಕಲಿ ಕ್ಲಿನಿಕ್‌ಗಳು ಬಗ್ಗೆ ಇನ್ನು ೧೫ದಿನದೊಳಗಾಗಿ ವರದಿಯನ್ನು ಸಲ್ಲಿಸುವಂತೆ ಔಷಧ ನಿಯಂತ್ರರಿಗೆ ಸೂಚಿಸಿದರು.

ಔಷಧಿ ನಿಯಂತ್ರಕರಾದ ಶ್ಯಾಮಲಾ ಅವರು ಮಾತನಾಡಿ, ಪದೇ ಪದೇ ಔಷಧಿಯನ್ನು ಖರೀದಿಸಲು ಅಂಗಡಿಗೆ ಬಂದಾಗ ಅವರ ಮೇಲೆ ನಿಗಾ ವಹಿಸಿ ಹಾಗೂ ಅವರ ಕುಟುಂಬದವರಿಗೆ ವಿಷಯವನ್ನು ತಕ್ಷಣ ತಿಳಿಸಬೇಕೆಂದು ಔಷಧಿ ಅಂಗಡಿಗಳ ಮಾಲೀಕರಿಗೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಸೈಬರ್ ಬ್ರಾಂಚ್ ಇನ್ಸ್ಪೆಕ್ಟರ್, ಎಸ್.ಆರ್, ಜಗದೀಶ್, ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಉಮೇಶ್ ಹಾಗೂ ಜಿಲ್ಲೆಯ ಔಷಧಿ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೫ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಎನ್. ಡಿ.ಪಿ.ಎಸ್. ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net