ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ ಅರಣ್ಯ ಒತ್ತುವರಿ ಭೂಮಿ / ಮುಳಬಾಗಿಲು ತಾಲ್ಲೂಕಿನಲ್ಲಿ ೨೦೦೦ ಎಕ್ಟೇರ್ ಪ್ರದೇಶ ಒತ್ತುವರಿ ತೆರವು ಆಗಬೇಕು / ಶಾಸಕರುಗಳ ಒತ್ತಡಕ್ಕೆ ಮಣಿದಿಲ್ಲ / ಡಿ.ಎಫ್.ಓ ಏಡುಕೊಂಡಲ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರ ಸದ್ದು ಮಾಡಿದ್ದು, ಈಗಾಗಲೇ ಅರಣ್ಯ ಇಲಾಖೆ ೨೦೦೦ ಕ್ಕೂ ಹೆಚ್ಚು ಎಕ್ಟೇರ್ ಪ್ರದೇಶದ ಒತ್ತುವರಿಯನ್ನು ತೆರವು ಮಾಡಿ ಸ್ವಾಧೀನಪಡಿಸಿಕೊಂಡಿದ್ದು, ಇನ್ನು ೨೦೦೦ ಎಕ್ಟೇರ್ ಪ್ರದೇಶ ಒತ್ತುವರಿ ತೆರವು ಮಾಡಬೇಕಾಗಿದೆ. ಮುಳಬಾಗಿಲು ತಾಲ್ಲೂಕು ಒಂದರಲ್ಲಿ ೨೦೦೦ ಎಕ್ಟೇರ್ ಪ್ರದೇಶ ಒತ್ತುವರಿಯನ್ನು ತೆರವು ಮಾಡಲು ಅರಣ್ಯ ಇಲಾಖೆ ಸಿದ್ಧತೆಗಳನ್ನು ನಡೆಸಿಕೊಂಡಿದೆ.

ಪ್ರಸ್ತುತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ೬೧ ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ರಮೇಶ್ ಕುಮಾರ್ ರವರು ಭೂಮಿಯನ್ನು ಖರೀದಿ ಮಾಡಿರುವ ಬಗ್ಗೆ ದಾಖಲೆಗಳನ್ನು ಹೊಂದಿದ್ದಾರೆ. ಹಾಗೂ ಅವರು ಭೂಮಿಯನ್ನು ರೈತರಿಂದ ಖರೀದಿ ಮಾಡುವ ಮುನ್ನ ೨೦೦೭ರಲ್ಲಿ ಅರಣ್ಯ ಇಲಾಖೆಗೆ ಪತ್ರ ಬರೆದು ರೈತರಿಂದ ಭೂಮಿಯನ್ನು ಖರೀದಿಸಲಾಗಿದೆ. ನಿಮ್ಮ ಇಲಾಖೆಯ ಗಡಿ ಗುರ್ತಿಸಿ ಎಂದು ರಮೇಶ್‌ಕುಮಾರ್ ರವರೇ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ೧೦ ವರ್ಷಗಳ ಕಾಲ ಇಲಾಖೆಯವರು ಮೌನ ಏಕೆ ವಹಿಸಿದ್ದರು ಎಂಬುವುದು ರಮೇಶ್‌ಕುಮಾರ್ ಕಡೆಯವರ ವಾದ. ಆದರೆ ಖರೀದಿಗೂ ಮುನ್ನವೇ ಅರಣ್ಯ ಇಲಾಖೆಗೆ ಸೇರಿದ ಭೂಮಿಯೆಂದು ಅರಣ್ಯ ಇಲಾಖೆಯವರು ವಾದವನ್ನು ಮುಂದಿಟ್ಟಿಕೊAಡಿದ್ದಾರೆ.

ಆದರೆ ೨೦೨೩ರಲ್ಲಿ ಸದರಿ ಪ್ರಕರಣ ಹೈಕೋರ್ಟ್ ನ್ಯಾಯಾಲಯದ ಅಂಗಳಕ್ಕೆ ಹೋಗಿದ್ದು, ಅಲ್ಲಿ ಜಂಟಿ ಸರ್ವೇಗೆ ಸೂಚನೆ ನೀಡಲಾಗಿದೆ. ಕೋರ್ಟ್ ಸೂಚನೆ ನಂತರ ಆಗಿನ ದಿ.ಡಿಕೆ.ರವಿಯವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಜಂಟಿ ಸರ್ವೇ ನಡೆಸಲಾಗಿದೆ. ಮತ್ತೊಂದು ಬಾರಿ ಸರ್ವೇ ನಡೆಸುವ ಅವಶ್ಯಕತೆ ಇಲ್ಲ. ಅವರು ನೂರಾರು ಎಕೆರೆ ಜಮೀನು ಕಬಳಿಸಿಲ್ಲ. ಅವರ ಹೆಸರಿನಲ್ಲಿ ಎಷ್ಟು ಜಮೀನು ಇದೆ ಎಂಬುದು ಲೆಕ್ಕ ಸುಗುತ್ತದೆ. ಗಾಳಿಯಲ್ಲಿ ಗುಂಡು ಹಾರಿಸುವ ಮಾತುಗಳು ಬೇಡ ಎಂದು ಕಂದಾಯ ಸಚಿವರು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ ಮತ್ತೊಂದು ಬಾರಿ ಸರ್ವೇ ಬೇಕಾದರೆ ನಡೆಸಲು ಅಭ್ಯಂತರ ಇಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವುದರಿಂದ ಪ್ರಯೋಜನ ಇಲ್ಲ ಎಂದು ತಿಳಿಸಿದ್ದರು.

ಆದರೆ ಇದೀಗ ರಮೇಶ್‌ಕುಮಾರ್ ರವರ ಒತ್ತುವರಿ ಜಮೀನು ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಡಿದ್ದು, ರಮೇಶ್‌ಕುಮಾರ್ ರವರ ಜೊತೆಯಲ್ಲೇ ಇದ್ದಂತಹವರೆ ಒತ್ತುವರಿ ಎಂಬ ಅಸ್ತçವನ್ನು ಬಳಸಿಕೊಂಡು ಅರಣ್ಯ ಇಲಾಖೆಯವರು ಬಡವರಿಗೆ ಒಂದು ರಾಜಕಾರಣಿಗಳಿಗೆ ಒಂದು ಕಾನೂನೇ? ಜಂಟಿ ಸರ್ವೇ ನಡೆಸಿ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯಪಡಿಸುತ್ತಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕು, ಮಾಲೂರು ತಾಲ್ಲೂಕು, ಕೋಲಾರ ತಾಲ್ಲೂಕಿನ ಸ್ವಲ್ಪ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಮುಳಬಾಗಿಲು ತಾಲ್ಲೂಕು, ಬಂಗಾರಪೇಟೆ ತಾಲ್ಲೂಕಿನಲ್ಲಿ ಒತ್ತುವರಿ ತೆರವು ಆಗಬೇಕಾಗಿದೆ. ಅಲ್ಲಿನ ಶಾಸಕರು ರೈತರ ಪರವಾಗಿ ನಿಂತು ಜಂಟಿ ಸರ್ವೇ ಆಗುವ ತನಕ ಒತ್ತುವರಿ ಕಾರ್ಯಾಚರಣೆ ನಡೆಸಬಾರದು ಎಂದು ಅಡ್ಡಿಪಡಿಸಿರುವುದರಿಂದ ಅರಣ್ಯ ಇಲಾಖೆಯವರು ಒತ್ತುವರಿ ತೆರವಿಗೆ ಮುಂದಾಗುತ್ತಿಲ್ಲ ಎಂದು ಈಗಾಗಲೇ ಒತ್ತುವರಿ ತೆರವಿಗೆ ಒಳಗಾಗಿರುವ ರೈತರು ಆರೋಪಿಸುತ್ತಿದ್ದಾರೆ.

ಕೋಟ್

ಮುಳಬಾಗಿಲು ತಾಲ್ಲೂಕು ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಒತ್ತುವರಿ ಕಾರ್ಯಾಚರಣೆ ಮಾಡಬೇಕಾಗಿದೆ. ಸದ್ಯದಲ್ಲಿಯೇ ಮಾಡಲಾಗುವುದು. ಶಾಸಕರ ಒತ್ತಡದಿಂದ ನಿಲ್ಲಿಸಿಲ್ಲ. ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಗುಂಟೆ ಅರಣ್ಯ ಪ್ರದೇಶದಲ್ಲಿ ಆಗಿರುವ ಒತ್ತುವರಿಯನ್ನು ತೆರವು ಮಾಡಲಾಗುವುದು. ಸಮಯ ನಿಗಧಿಪಡಿಸಿಲ್ಲ. ಈ ಹಿಂದೆ ಡಿ.ಕೆ.ರವಿಯವರು ಜಿಲ್ಲಾಧಿಕಾರಿಗಳಾಗಿದ್ದಾಗ ಮಾಡಿರುವ ಜಂಟಿ ಸರ್ವೇ ಅಪೂರ್ಣಗೊಂಡಿದೆ ಎಂದು ಅವರು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-ಏಡುಕೊಂಡಲು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು.

ಚಿತ್ರ ೦೩ ಕೆ.ಎಲ್.ಆರ್. ೦೩ : ಏಡುಕೊಂಡಲ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು.

ಚಿತ್ರ ೦೩ ಕೆ.ಎಲ್.ಆರ್. ೦೩ಎ : ಅರಣ್ಯ ಭೂಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net