ಜಿಲ್ಲೆಯಲ್ಲಿ ಲಸಿಕಾಕರಣ ಉತ್ತಮ, ಆದರೆ ಸಿ-ಸೆಕ್ಷನ್ ಹೆಚ್ಚಳ ಗಂಭೀರ ಕಳವಳ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಡಿ ಜಿಲ್ಲೆಯಲ್ಲಿ ಸಂಪೂರ್ಣ ಲಸಿಕಾಕರಣ ಶೇ.೯೫ ರಷ್ಟು ಸಾಧನೆಯೊಂದಿಗೆ ಉತ್ತಮ ಪ್ರಗತಿ ಕಂಡುಬAದಿದ್ದರೂ, ಒಟ್ಟು ಹೆರಿಗೆಗಳಲ್ಲಿ ಸಿ-ಸೆಕ್ಷನ್ (ಶಸ್ರಚಿಕಿತ್ಸೆ ಮೂಲಕ ಹೆರಿಗೆ) ಪ್ರಮಾಣ ಶೇ.೫೬ಕ್ಕೆ ಏರಿರುವುದು ಗಂಭೀರ ಕಳವಳಕಾರಿ ವಿಷಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಆರೋಗ್ಯ ಮಿಷನ್‌ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆಯು ಮಂಡಿಸಿದ ವರದಿಯನ್ನು ಪರಿಶೀಲಿಸಿ ಮಾತನಾಡಿದರು.

ಆರೋಗ್ಯ ಸೂಚ್ಯಂಕಗಳಲ್ಲಿ ಪ್ರಗತಿ :

ಜಿಲ್ಲೆಯಲ್ಲಿ ಒಟ್ಟು ೧೭.೫೪ ಲಕ್ಷ ಅಂದಾಜು ಜನಸಂಖ್ಯೆ ಇದ್ದು, ಪ್ರಸ್ತುತ ೧೦ ನಮ್ಮ `ಕ್ಲಿನಿಕ್'ಗಳು ಸೇರಿದಂತೆ ೭೮ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ತಾಯಿ ಮತ್ತು ಶಿಶು ಆರೋಗ್ಯ:

ಏಪ್ರಿಲ್‌ನಿಂದ ಸೆಪ್ಟೆಂಬರ್ ೨೦೨೫ರ ಅವಧಿಯಲ್ಲಿ ಗರ್ಭಿಣಿಯರ ನೋಂದಣಿ ಶೇ.೯೨ ರಷ್ಟಾಗಿದ್ದು, ಸಂಪೂರ್ಣ ನಾಲ್ಕು ಎಎನ್‌ಸಿ ತಪಾಸಣೆಗಳನ್ನು ಶೇ.೯೧ ರಷ್ಟು ತಾಯಂದಿರು ಪಡೆದಿದ್ದಾರೆ ಎಂದರು.

ಲಸಿಕಾಕರಣದಲ್ಲಿ ಕೋಲಾರ ಮುಂದು :

ಜಿಲ್ಲೆಯಲ್ಲಿ ಸಂಪೂರ್ಣ ಲಸಿಕಾಕರಣದ ಗುರಿ ಶೇ.೯೫ ರಷ್ಟು ಸಾಧನೆಯಾಗಿದೆ. ಶಿಶು ನೋಂದಣಿಯಲ್ಲಿ ಕೋಲಾರ ತಾಲ್ಲೂಕು ಶೇ.೧೦೭ ರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಮರಣ ದರ ನಿಯಂತ್ರಣ :

ಜಿಲ್ಲೆಯ ಶಿಶು ಮರಣ ದರ (ಐ.ಎಂ.ಆರ್) ಪ್ರತಿ ೧,೦೦೦ ಜೀವಂತ ಜನನಗಳಿಗೆ ೧೦ ರಷ್ಟಿದ್ದು, ತಾಯಂದಿರ ಮರಣ ದರ (ಎಂ.ಎA.ಆರ್) ಪ್ರತಿ ೧,೦೦,೦೦೦ ಜೀವಂತ ಜನನಗಳಿಗೆ ೨೪ ರಷ್ಟಿದೆ. ಈ ಅಂಕಿಅAಶಗಳನ್ನು ಮತ್ತಷ್ಟು ಕಡಿಮೆ ಮಾಡಲು ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಿ-ಸೆಕ್ಷನ್ ಏರಿಕೆ ಬಗ್ಗೆ ಡಿಸಿ ತೀವ್ರ ಅಸಮಾಧಾನ :

ಜಿಲ್ಲೆಯಲ್ಲಿ ಒಟ್ಟು ಹೆರಿಗೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೫೬ ರಷ್ಟು ಸಿ-ಸೆಕ್ಷನ್‌ಗಳು ಆಗಿವೆ. ಇದು ಅತ್ಯಂತ ಆತಂಕಕಾರಿ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇ.೭೩ ರಷ್ಟಿರುವುದು ಕಳವಳಕಾರಿ. ಕೋಲಾರ ತಾಲ್ಲೂಕು ಶೇ.೬೬ ರಷ್ಟು ಅತಿ ಹೆಚ್ಚು ಸಿ-ಸೆಕ್ಷನ್ ಪ್ರಮಾಣವನ್ನು ದಾಖಲಿಸಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆ ಅಗತ್ಯವಿದ್ದಾಗ ಮಾತ್ರ ಸಿ-ಸೆಕ್ಷನ್ ಮಾಡಬೇಕು. ಅನಗತ್ಯ ಸಿ-ಸೆಕ್ಷನ್‌ಗಳನ್ನು ತಡೆಗಟ್ಟಲು ಎಲ್ಲ ಆಸ್ಪತ್ರೆಗಳು, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳು, ವೈಜ್ಞಾನಿಕ ಮತ್ತು ವೈದ್ಯಕೀಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಕೂಡಲೇ ಸೂಕ್ತ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಲು ಸಂಬAಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಸಾಂಕ್ರಾಮಿಕ ರೋಗಗಳು :

ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಡೆಂಗ್ಯೂನ ೯೯ ಪ್ರಕರಣಗಳು ಮತ್ತು ಚಿಕ್ಕನ್‌ಗುನ್ಯಾದ ೧೧ ಪ್ರಕರಣಗಳು ದೃಢಪಟ್ಟಿವೆ. ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು.

ಪ್ರಾಣಿ ಕಡಿತ:

ಜಿಲ್ಲೆಯಲ್ಲಿ ಇಲ್ಲಿಯವರೆಗು ೯,೦೭೬ ನಾಯಿ ಕಡಿತ ಮತ್ತು ೨೩೨ ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣಗಳ ನಿರ್ವಹಣೆ ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಚಾರಿಣಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳಾದ ಡಾ. ಎಂ.ವಿ.ರವಿ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ನಾರಯಣಸ್ವಾಮಿ, ಡಾ.ರಮೇಶ್ ಬಾಬು, ಡಾ.ಸುನೀಲ್, ಡಾ.ಸುಗುಣ, ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿಗಳಾದ ಎಸ್.ವೆಂಕಟಾಚಲಪತಿ, ಕೆ.ಎಸ್.ಆರ್.ಟಿ.ಸಿ ಆಡಳಿತಾಧಿಕಾರಿಗಳಾದ ಎಂ.ವಿ.ಭಾಗ್ಯಲಕ್ಷಿö್ಮÃ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಪಿ.ಮಹಮದ್ ಸೇರಿದಂತೆ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೦೫ ಕೆ.ಎಲ್.ಆರ್. ೦೪ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಮಿಷನ್‌ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆಯು ಮಂಡಿಸಿದ ವರದಿಯನ್ನು ಪರಿಶೀಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ತಂಬಾಕು ನಿಯಂತ್ರಣದ ಬಗ್ಗೆ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು. ಡಿ.ಹೆಚ್.ಓ ಡಾ.ಶ್ರೀನಿವಾಸ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಜಗದೀಶ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net